ಶ್ರೀನಿವಾಸಪುರ ಪುರಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ನೂಕು ನುಗ್ಗಲು, 108 ನಾಮ ಪತ್ರಗಳ ಸಲ್ಲಿಕೆ.

ಲೋಕಸಭೆ ಚುನಾವಣೆಯಲ್ಲಿ ಕೈಕೊಟ್ಟವರಿಗೆ ಸಂಸದ ಮುನಿಯಪ್ಪ ಟಾಂಗ್ ನೀಡಿದ ಪರಿಣಾಮ ಯುವಕಾಂಗ್ರೆಸ್ ನ ಕೆಲ ಕಾರ್ಯಕರ್ತರು ಪಕ್ಷೇತರರಾಗಿ ನಾಮಪತ್ರ ಸಲ್ಲಿರುತ್ತಾರೆ.

ನಾಮ ಪತ್ರ ಸಲ್ಲಿಸುವ ಕಚೇರಿಯಲ್ಲಿ ನೂಕುನುಗ್ಗಲು ಉಂಟಾಗಿರುವುದು

ಶ್ರೀನಿವಾಸಪುರ:-ಪುರಸಭೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಮೇ 16 ನಾಮಪತ್ರ ಸಲ್ಲಿಸುವ ತಹಶೀಲ್ದಾರ್ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಯಿತು. ಅಭ್ಯರ್ಥಿಗಳು ಹಾಗು ಸೂಚಕರು ಸೇರಿದಂತೆ ಪಕ್ಷದ ಮುಖಂಡರು ಕಚೇರಿಗೆ ದೊಡ್ದಸಂಖ್ಯೆಯಲ್ಲಿ ಬಂದ ಹಿನ್ನಲೆಯಲ್ಲಿ ನೂಕನುಗ್ಗಲು ಏರ್ಪಟ್ಟಿತು.
ನಾಮ ಪತ್ರ ಸಲ್ಲಿಸಿದವರಲ್ಲಿ ಪ್ರಮುಖರು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ಎಂ ಪ್ರಕಾಶ್ ಕಾಂಗ್ರೆಸ್ ನಿಂದ ವಾರ್ಡ ನಂ 5 ಕಟ್ಟೆಕೆಳಗಿನ ಪಾಳ್ಯ ಅನಿಸ್, ಕೆ.ವಿ.ಮಂಜುನಾಥ್, ಸತ್ಯನಾರಯಣ್, ಎಂ.ನಾರಯಣಸ್ವಾಮಿ, ಬಾಬು ಕಾಂಗ್ರೆಸ್ ಪಕ್ಷ ಬಿ.ಫಾರಂ ಪಡೆದು ನಾಮಪತ್ರ ಸಲ್ಲಿಸಿದರೆ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಬಿ ಫಾರಂ ನಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಜೆ.ಡಿ.ಎಸ್ ಬಿ.ಫಾರಂ ಪಡೆದವರು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶ್ರೀನಿವಾಸಪ್ಪ ಪೂಲುಶಿವಾರೆಡ್ಡಿ ಮೇಸ್ತ್ರಿ ಅಪ್ಪೂರೊಳ್ಲರಾಜಣ್ಣ, ಹಳೇಪೇಟೆ ಅನಂದಗೌಡ,ಜಗದೀಶ್ ಬಾಬು, ನಯಾಜ್‍ಶಾಕಲ್, ಮುಂತಾದವರು ನಾಮಪತ್ರ ಸಲ್ಲಿಸಿರುತ್ತಾರೆ.

ಇದುವರಿಗೂ ಒಟ್ಟು ನಾಮತ್ರಗಳು ಸಲ್ಲಕೆಯಾಗಿದ್ದು:- 107 ಜನ ಅಭ್ಯರ್ಥಿಗಳು 108 ನಾಮಪತ್ರಗಳು ಸಲ್ಲಿಸಿರುತ್ತಾರೆ. ಕಾಂಗ್ರೆಸ್ ನಿಂದ 23,ಬಿ.ಜೆ.ಪಿ 09,ಜೆ.ಡಿ.ಎಸ್ ನಿಂದ 24,ಸಿ.ಪಿ.ಐ.ಎಂ ನಿಂದ 04, ಬಿ.ಎಸ್.ಪಿ ಯಿಂದ 04 ಪಕ್ಷೇತರರು 43 ಜನ ನಾಮಪತ್ರ ಸಲ್ಲಿಸಿರುತ್ತಾರೆ.
ಇದರ ಜೋತೆಗೆ ಸ್ಪೀಕರ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕೆಲ ಯುವಕಾಂಗ್ರೆಸ್ ಕಾರ್ಯಕರ್ತರಿಗೆ ಸಂಸದ ಮುನಿಯಪ್ಪ ಮಣೆ ಹಾಕಿಲ್ಲ ಎನ್ನಲಾಗಿದ್ದು ಇವರಲ್ಲಿ ಕಾಂಗ್ರೆಸ ಟಿಕೆಟ್ ವಂಚಿತರಾದ ವಕೀಲ ಕೆ.ನಾರಯಣಸ್ವಾಮಿ, ನೆಹರು ರಸ್ತೆ ವಾರ್ಡನಿಂದ ಬಿ.ಎಲ್.ರಾಮಣ್ಣ ಅವರ ಮಗ ಭಾಸ್ಕರ್ ವಾರ್ಡ ನಂ 5 ಕಟ್ಟೆಕೆಳಗಿನ ಪಾಳ್ಯ ರಲ್ಲಿ ಕಾಂಗ್ರೆಸ್ ರೆಬಲ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುತ್ತಾರೆ. ತಡ ಸಂಜೆಯಾದರೂ ಮುಗಿಯದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಮುಗಿದಿರಲಿಲ್ಲ.

ಬಿ.ಎಲ್ ಕುಟುಂಬದ ಸಹೋದರರು ಒಂದೇವಾರ್ಡನಲ್ಲಿ ಮುಖಾಮುಖಿಯಾಗಿ:- ಪಟ್ಟಣದ ಪ್ರತಿಷ್ಠಿತ ರಾಜಕೀಯ ಕುಟುಂಬ ಎಂದು ಹೆಸರಾಗಿದ್ದ ಬಿ.ಎಲ್.ಕುಟುಂಬದ ಸಹೋದರರ ಮಕ್ಕಳು ಕಟ್ಟೆಕೆಳಗಿನ ವಾರ್ಡನಲ್ಲಿ ಮುಖಾಮುಖಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಕಾಶ್ ಲೋಕಸಭೆ ಚುನಾವಣೆಯಿಂದ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅಂತರ ಕಾಯಿದುಕೊಂಡಿದ್ದರು ಇದರ ಪರಿಣಾಮ ಅವರಿಗೆ ಸಂಸದರ ಕಡೆಯಿಂದ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದೆ. ಅವರ ಸ್ವಂತ ಚಿಕ್ಕಪ್ಪ ಉದ್ಯಮಿ, ಗುತ್ತಿಗೇದಾರ ಹಾಗು ಸ್ಪೀಕರ್ ರಮೇಶ್ ಕುಮಾರ್ ಆಪ್ತರಾಗಿರುವ ಬಿ.ಎಲ್.ರಾಮಣ್ಣ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕೊನೆಗಳಿಗೆಯಲ್ಲಿ ಅವರ ಪುತ್ರ ಭಾಸ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿರುತ್ತಾರೆ.

ಸತತ ಸೋಲಿನಿಂದ ಕೆಂಗಟ್ಟಿರುವ ಜೆ.ಡಿ.ಎಸ್ ಸಂಘಟನೆ ಇಲ್ಲದ ಪರಿಣಾಮ ಕೆಲ ವಾರ್ಡಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಪರದಾಡಿರುವ ಪ್ರಸಂಗ ಸಹ ನಡೆದಿರುತ್ತದೆ ಅಭ್ಯರ್ಥಿಗಳನ್ನು ಹುಡುಕಿಕೊಂಡು ಮನೆ ಮನೆ ಅಲೆದಾಡಿದಿರುವುದಾಗಿಗೆ ಕೆಲ ಕಾರ್ಯಕರ್ತರು ಹೇಳುತ್ತಾರೆ.

ವರದಿ ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!