ಕಿತ್ತು ಹೋಗಿರುವ ರಸ್ತೆಯಲ್ಲೇ ಓಡಾಡುತ್ತಿರುವ ತಹಶೀಲ್ದಾರ್ ಮತ್ತು ಅಧಿಕಾರಿಗಳು.

ತಾಲೂಕಿಗೆ ಮುಖ್ಯಸ್ಥರು, ನ್ಯಾಯಿಕ ದಂಡಾಧಿಕಾರಿಗಳು ತಹಶೀಲ್ದಾರ್ ಸಾಹೇಬ್ರೆ ಒಡಾಡುವಂತ ರಸ್ತೆನೇ ಸರಿಯಿಲ್ಲ ಅನ್ನುವುದಾದರೆ ಇನ್ನೂ ಆಡಳಿತ ಹೇಗಿರುತ್ತದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ ಇಂತಹೊಂದು ಸಮಸ್ಯೆ ಇರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಕಚೇರಿ ಆವರಣದಲ್ಲಿ!

ತಾಲೂಕಿಗೆ ಮುಖ್ಯಸ್ಥರು, ನ್ಯಾಯಿಕ ದಂಡಾಧಿಕಾರಿಗಳು ತಹಶೀಲ್ದಾರ್ ಸಾಹೇಬ್ರೆ ಒಡಾಡುವಂತ ರಸ್ತೆನೇ ಸರಿಯಿಲ್ಲ ಅನ್ನುವುದಾದರೆ ಇನ್ನೂ ಆಡಳಿತ ಹೇಗಿರುತ್ತದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ ಇಂತಹೊಂದು ಸಮಸ್ಯೆ ಇರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಕಚೇರಿ ಆವರಣದಲ್ಲಿ.
ಇಲ್ಲಿ ಪ್ರತಿನಿತ್ಯ ಸಾವಿರಾರು ಜನ ಒಡಾಡುತ್ತಾರೆ,ಜೊತೆಗೆ ರಾಜಕಾರಣಿಗಳು,ಅಧಿಕಾರಿಗಳು ಸರ್ಕಾರಿ ನೌಕರರು ಒಡಾಡುತ್ತಾರೆ ಆದರೂ ರಸ್ತೆ ನಿರ್ಮಾಣದ ವಿಚಾರದಲ್ಲಿ ಯಾರು ಗಮನ ಹರಿಸದಿರುವುದು ವಿಷಾದದ ಸಂಗತಿ ಎನ್ನಲಾಗಿದೆ.

ಮುಳಬಾಗಿಲು ಪಟ್ಟಣದ ಮುಖ್ಯ ರಸ್ತೆಯಿಂದ ತಾಲೂಕು ಕಚೇರಿಗೆ ಹೋಗುವ ರಸ್ತೆಯಲ್ಲಿ ಹಾಕಿರುವಂತ ಜಲ್ಲಿಕಲ್ಲು ಹೊರಬಂದು ರಸ್ತೆಯಲ್ಲ ಹರಡುಕೊಂಡಿದೆ. ಚಪ್ಪಲಿ ಇಲ್ಲದ ವೃದ್ಧರು ವಿಕಲ ಚೇತನರು ಈ ರಸ್ತೆಯಲ್ಲಿ ಸಾಗಲು ಹರಸಾಹಸ ಪಡಬೇಕಾಗುತ್ತದೆ.ದಾರಿಯುದ್ದಕ್ಕೂ ಜಲ್ಲಿಕಲ್ಲಿನ ಹಾಸು ಸ್ವಾಗತಿಸುತ್ತದೆ.ಇನ್ನೂ ವಾಹನಗಳು ಒಡಾಡಿದರೆ ಪಾದಚಾರಿಗಳ ಮೇಲೆ ಧೂಳು ಬಿಳುವುದು ಸಾಮನ್ಯವಾಗಿದೆ ಜೋತೆಗೆ ಆಗಾಗ ಕಲ್ಲಿನೇಟು ಬೀಳುವುದು ಇರುತ್ತದೆ. ವಾಹನ ಸಾಗುವಾಗ ವಾಹನದ ಟೈರಿಗೆ ಜಲ್ಲಿಕಲ್ಲು ಸಿಕ್ಕಿ ಸಿಡಿದಾಗ ಪಾದಚಾರಿಗೆ ಬೀಳುವುದಂತು ಗ್ಯಾರಂಟಿ ಎನ್ನುತ್ತಾರೆ ಇಲ್ಲಿನ ಪಾದಚಾರಿಗಳು.
ರಸ್ತೆ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆಯಲ್ಲಿ ಆರ್ಥಿಕ ಚೈತನ್ಯ ಇಲ್ವಾ ಅಥಾವ ಜನರಿಗೆ ಅನಕೂಲ ಮಾಡಿಕೊಡಬೇಕು ಎಂಬ ಕನಿಷ್ಠ ಅರಿವು ತಾಲೂಕು ಅಡಳಿತಕ್ಕೆ ಇಲ್ವಾ ಅನ್ನುವುದೆ ಈಗಿರು ಪ್ರಶ್ನೆ.

ಸಾಕ್ಷತ್ ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!