ಖ್ಯಾತ ವಕೀಲ ಕೇಂದ್ರ ಮಾಜಿ ಸಚಿವ ರಾಮ್ ಜೇಠ್ಮಲಾನಿ ನಿಧನ.

ಖ್ಯಾತ ನ್ಯಾಯವಾದಿ ರಾಮ್ ಜೆಠ್ಮಲಾನಿ ಅವರು ತಮ್ಮ 96 ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿರುತ್ತಾರೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಖ್ಯಾತ ವಕೀಲರಾಗಿ ಮತ್ತು ಕೇಂದ್ರ ಸರ್ಕಾದ ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ(96) ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಜೇಠ್ಮಲಾನಿ ಅವರು ವಯೋಸಹಜ ಕಾಯಿಲೆಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಕೆಲ ತಿಂಗಳುಗಳಿಂದ ಹಾಸಿಗೆ ಹಿಡದಿದ್ದರು, ಭಾನುವಾರ ಬೆಳಗ್ಗೆ 7:45 ಗಂಟೆಗೆ ಅವರ ನಿವಾಸದಲ್ಲಿ ನಿಧನರಾಗಿರುವುದಾಗಿ ಅವರ ಪುತ್ರ ಮಹೇಶ್ ಜೇಠ್ಮಲಾನಿ ಹೇಳಿದ್ದಾರೆ.
ಸೆಪ್ಟೆಂಬರ್ 14 ಕಕ್ಕೆ 96 ವರ್ಷಗಳನ್ನು ಪೊರೈಸಲಿದ್ದ ಅವರು ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳ ಮೊದಲು ನಿಧನರಾಗಿದ್ದಾರೆ ಎಂದು ಅವರ ಮಗ ಹೇಳಿದ್ದಾರೆ.
ರಾಮ್ ಜೆಥ್ಮಲಾನಿ ತಮ್ಮ 17 ನೇ ವಯಸ್ಸಿನಲ್ಲಿ ತಮ್ಮ ಎಲ್.ಎಲ್.ಬಿ ಪದವಿ ಪಡೆದರು, ಮತ್ತು ಭಾರತದ ವಿಭಜನೆಯಾಗುವವರೆಗೂ ಹುಟ್ಟುರಿನಲ್ಲಿ (ಇಂದಿನ ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಸಿಂಧ್‌ನ ಶಿಕಾರ್‌ಪುರದಲ್ಲಿ ಜನನ) ಕಾನೂನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ವಿಭಜನೆಯು ಅವನನ್ನು ನಿರಾಶ್ರಿತರಾಗಿಸಿದಾಗ ಮುಂಬೈಗೆ ಬಂದು ತಮ್ಮ ಕುಟುಂಬದೊಂದಿಗೆ ಹೊಸದಾಗಿ ಜೀವನವನ್ನು ಪ್ರಾರಂಭಿಸಿದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದಾರೆ, ಅವರಲ್ಲಿ ಮಹೇಶ್ ಜೆಠ್ಮಲಾನಿ ಮತ್ತು ರಾಣಿ ಜೆಠ್ಮಲಾನಿ ಕೂಡ ಪ್ರಸಿದ್ಧ ವಕೀಲರು.
ಜಠ್ಮಲಾನಿ ಅವರು ಮುಂಬೈಯಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾಗಿ 6 ಮತ್ತು 7 ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಭಾರತದ ಕಾನೂನು ಸಚಿವರಾಗಿ ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ, ನಂತರ ಅವರು 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಲಕ್ನೋ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ, 2010 ರಲ್ಲಿ ಅವರು ಮತ್ತೆ ಬಿಜೆಪಿಗೆ ಬಂದರು ಮತ್ತು ರಾಜಸ್ಥಾನದಿಂದ ಟಿಕೆಟ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಈ ಕಾರಣದಿಂದಾಗಿ ಅವರು ಅವಕಾಶವಾದಿ ರಾಜಕಾರಣಿ ಎಂದು ಟೀಕಿಗೆ ಒಳಗಾಗಿದ್ದರು.
2010 ರಲ್ಲಿ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಯಾಗಿ 2017 ರವರೆಗೆ ವಕೀಲರಾಗಿ ಮತ್ತು ಬಾರ್ ಕೌನ್ಸಿಲ್‌ ನ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಎರಡು ವರ್ಷಗಳ ಹಿಂದೆಯಷ್ಟೆ ನಿವೃತ್ತರಾಗಿದ್ದರು.

ರಾಮ್ ಜೆಠ್ಮಲಾನಿ

ಭಾರತದ ಕಾನೂನು ವ್ಯವಸ್ಥೆಯಲ್ಲಿ ಪ್ರಖ್ಯಾತ ನ್ಯಾಯವಾದಿಗಳಾಗಿದ್ದ ಅವರು ಪ್ರಸಿದ್ಧ ಕ್ರಿಮಿನಲ್ ವಕೀಲ ಆದರೂ ಸಹ ಅನೇಕ ಸಿವಿಲ್ ಪ್ರಕರಣಗಳನ್ನು ವಾದಿಸಿದ್ದಾರೆ ಎನ್ನಲಾಗಿದೆ.1993 ರಿಂದ 1998 ರವರೆಗೆ, ಹರ್ಷದ್ ಮೆಹ್ತಾ ಹಗರಣ ಮತ್ತು ನರಸಿಂಹ ರಾವ್ ಲಂಚ ಪ್ರಕರಣದಲ್ಲಿ ಹರ್ಷದ್ ಮೆಹ್ತಾ ಅವರನ್ನು ಪ್ರತಿನಿಧಿಸಿದ ವಕೀಲರಲ್ಲಿ ಪ್ರಮುಖರಾಗಿದ್ದರು.
1975-1977ರಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿಯನ್ನು ವಿರೋಧಿಸಿದ ಅವರು ತುರ್ತು ಪರಿಸ್ಥಿಗೆ ಕಾರಣರಾಗಿದ್ದ ಅಂದಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದರು.

ಸುದ್ಧಿ ಸಂಗ್ರಹ :ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!