ಪಟ್ಟಣದ ಸ್ವಚ್ಚತೆಯಲ್ಲಿ ಪೌರ ಕಾರ್ಮಿಕರ ಪಾತ್ರ, ಜವಬ್ದಾರಿ ಹೆಚ್ಚಾಗಿದೆ

ಶ್ರೀನಿವಾಸಪುರ: ಪಟ್ಟಣದ ಸ್ವಚ್ಚತೆಗೆ ಮತ್ತು ಜನತೆಯ ಆರೋಗ್ಯ ರಕ್ಷಣೆಗಾಗಿ ಪೌರ ಕಾರ್ಮಿಕರು ಜವಬ್ದಾರಿಯುತವಾಗಿ ಕಾರ್ಯ ನಿರ್ವಹಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು. ಅವರು ಪುರಸಭೆ ಕಚೇರಿ ಅವರಣದಲ್ಲಿ
ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ಮಳೆ ಗಾಳಿ ಬೀಸಲು ಲೆಕ್ಕಿಸದೆ ಸುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು ಕೇವಲ ಜನರ ಮೆಚ್ಚುಗೆ ಮಾತ್ರವಲ್ಲದೆ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳುವಾಗ ತಪ್ಪದೆ ಸುರಕ್ಷತಾ ಕವಚ ಧರಿಸಬೇಕು. ಸೋಂಕು ತಗಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.ಕಾರ್ಮಿಕರು ದುಶ್ಚಟಗಳಿಂದ ದೂರ ಇದ್ದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾನ್ನಾಗಿ ರೂಪಿಸಬೇಕು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಎಂದು ಹೇಳಿದರು

ಪೌರ ಪುರಸಭೆ ಸದಸ್ಯ ಬಿ.ವೆಂಕಟರೆಡ್ಡಿ ಮಾತನಾಡಿ, ಕೆಲಸದಲ್ಲಿ ಮೇಲು ಕೀಳು ಭಾವನೆ ಕೂಡದು. ಎಲ್ಲ ಕೆಲಸಗಳಿಗೂ ತನ್ನದೇ ಆದ ಗೌರವವಿದೆ. ಪೌರ ಕಾರ್ಮಿಕರು ಕೀಳರಿಮೆ ಬಿಟ್ಟು ಹೆಮ್ಮೆಯಿಂದ ತಮ್ಮ ನಿಗದಿತ ಕೆಲಸ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಪುರಸಭೆ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಭಿಯಂತರ ಡಿ.ಶೇಖರ್‌ ರೆಡ್ಡಿ, ಎಂಜಿನಿಯರ್‌ ಶ್ರೀನಿವಾಸ್‌, ಸದಸ್ಯರಾದ ವಿ.ಮುನಿರಾಜು, ಕೆ.ಅನೀಸ್‌ ಅಹ್ಮದ್‌, ನಾಗರಾಜ್‌, ಸರ್ದಾರ್‌, ಅನಂದ್‌, ನಾಗೇಶ್‌, ಶಂಕರ್‌, ಪ್ರಸಾದ್‌, ಶಾರದ, ವನಜಾಕ್ಷಿ, ಅಕ್ರಮ್‌ ಪಾಷ, ಪಟ್ಟಣ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ,ಉಪಾಧ್ಯಕ್ಷ ಬಾಲಕೃಷ್ಣ ಇದ್ದರು.

Leave a Reply

Your email address will not be published. Required fields are marked *

Don`t copy text!