ಶ್ರೀನಿವಾಸಪುರದ ಕಿಟ್ ಕಂಪ್ಯೂಟರ್ ಶಾಲೆಗೆ ಡಿಸ್ಟಿಂಗ್ಷನ್ ಪಲಿತಾಂಶ

ಶ್ರೀನಿವಾಸಪುರ: ಆಗಸ್ಟ್ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್ ಪರೀಕ್ಷೆಗಳಲ್ಲಿ( ಅಫಿಸ್ ಅಟೊಮೇಶನ್) ಇಲ್ಲಿನ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) 4 ಡಿಸ್ಟಿಂಗ್‍ಷನ್ ನೊಂದಿಗೆ ಮತ್ತು ಶೇಕಡ 99 ರಷ್ಟು ಫಲಿತಾಂಶ ಸಾಧಿಸಿರುವುದಾಗಿ ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಶ್ರೀನಿವಾಸಪುರದ ಖ್ಯಾತ ಕಂಪೂಟರ‍್ ಶಿಕ್ಷಣ ಸಂಸ್ಥೆಯಾಗಿರುವ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) ಕಳೆದ ಆಗಸ್ಟ್ ಮಾಹೆಯಲ್ಲಿ ರಾಜ್ಯಮಟ್ಟದಲ್ಲಿ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್ ಪರೀಕ್ಷೆ ಹಾಗು ಬೆರಳಚ್ಚು ಪರಿಕ್ಷೇಗಳಲ್ಲಿ ಉತ್ತನ ಸಾಧನೆ ಮಾಡಿರುತ್ತದೆ.
ಕಂಪ್ಯೂಟರ್ ಪರೀಕ್ಷೆಗಳಲ್ಲಿ( ಅಫಿಸ್ ಅಟೊಮೇಶನ್) ಸಂಸ್ಥೆಯ 78 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ 4 ಡಿಸ್ಟಿಂಗ್‍ಷನ್, ಪ್ರಥಮ ದರ್ಜೆಯಲ್ಲಿ-23, ದ್ವಿತೀಯ ದರ್ಜೆಯಲ್ಲಿ 42, ತೃತೀಯ ದರ್ಜೆಯಲ್ಲಿ 08 ಅಭ್ಯರ್ಥಿಗಳು ತೇರ್ಗಡೆಯಾಗಿರುತ್ತಾರೆ.ಇದರಿಂದಾಗಿ ಶಾಲೆಗೆ ಶೇಕಡ 99 ರಷ್ಟು ಫಲಿತಾಂಶ ದೊರೆತಿದೆ ಎಂದ ಅವರು ತೇರ್ಗಡೆ ಹೊಂದಿರುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ ಇದು ಶಾಲೆಗೆ ಸಾಧನೆಯ ಮೈಲಿಗಲ್ಲಾಗಿಎ ಎಂದರು. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಪ್ರತಿಕ್ರೀಯಿಸಿ ಬೋಧಸಿದ ಪ್ರಾಂಶುಪಾಲ ಎನ್. ಕೃಷ್ಣಮೂರ್ತಿ ಮತ್ತು ಕೇಂದ್ರ ವ್ಯವಸ್ಥಾಪಕರಾದ ಆರ್. ರಾದರನ್ನು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಕಂಪ್ಯೂಟರ್ ಪರೀಕ್ಷೆಗಳಲ್ಲಿ ಡಿಸ್ಟಿಂಗ್ಷನ್ ಪಡೆದ ವಿದ್ಯಾರ್ಥಿಗಳು.ವೇಣು, ನವೀನ್ ಕುಮಾರ್,ಹಸೀನ, ಪಲ್ಲವಿ

ಬೆರಳಚ್ಚು ಪರಿಕ್ಷೇಯಲ್ಲೂ ಸಾಧನೆಗೈದ ಕಿಟ್ ಸಂಸ್ಥೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) 2 ಡಿಸ್ಟಿಂಗ್‍ಷನ್ ನೊಂದಿಗೆ ಶೇಕಡ 74 ರಷ್ಟು ಫಲಿತಾಂಶ ಸಾಧಿಸಿರುತ್ತದೆ.
ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಶಾಲೆಯಿಂದ 32 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ 2 ಡಿಸ್ಟಿಂಗ್‍ಷನ್ ಪ್ರಥಮ ದರ್ಜೆಯಲ್ಲಿ-04, ದ್ವಿತೀಯ ದರ್ಜೆಯಲ್ಲಿ 15, ದ್ವಿತೀಯ ದರ್ಜೆಯಲ್ಲಿ 03 ಅಭ್ಯರ್ಥಿಗಳು ತೇರ್ಗಡೆಹೊಂದಿದ್ದು, ಶಾಲೆಗೆ ಶೇಕಡ 75 ರಷ್ಟು ಫಲಿತಾಂಶ ಬಂದಿರುವುದಾಗಿ ಪ್ರಾಂಶುಪಾಲರಾದ ಕೃಷ್ಣಮೂರ್ತಿ ತಿಳಿಸಿರುತ್ತಾರೆ.
ಆಂಗ್ಲ ಬೆರಳಚ್ಚು ಜೂನಿಯರ್ ಪರಿಕ್ಷೇಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಶ್ರೀಲಕ್ಷ್ಮೀ, ಆಂಗ್ಲ ಬೆರಳಚ್ಚು ಸೀನಿಯರ್ ಅರ್‍ಬಾಜ್

ವರದಿ:- ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!