ಕುಡಿಯುವ ನೀರಿಗಾಗಿ ಮಹಿಳೆಯರ ನಡುವೆ ಜಗಳವಾಗಿ ಕಿವಿ ಹರಿದು ಹೋಗಿರುವ ಘಟನೆ ನಡೆದಿರುತ್ತದೆ.

ಕೋಲಾರ:- ಕುಡಿಯುವ ನೀರಿನ ವಿಚಾರವಾಗಿ ಇಬ್ಬರು ಮಹಿಳಾ ಮಣಿಯರು ಕಿತ್ತಾಡಿಕೊಂದು ಎರಡೂ ಕಿವಿಗಳು ಹರಿದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಬಂಗಾರಪೇಟೆ ತಾಲೂಕಿನ ಎನ್‌.ಜಿ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಕದರಿಗಾನಕುಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಗ್ರಾಮದಲ್ಲಿ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದು. ದಿನನಿತ್ಯ ನಲ್ಲಿಯಲ್ಲಿ ನೀರು ಹಿಡಿಯುವ ವಿಚಾರವಾಗಿ ಸಣ್ಣ, ಪುಟ್ಟ ಗಲಾಟೆಗಳು ವಾಗ್ವಾದಗಳು ನಡೆಯುತ್ತಿತ್ತು ಎನ್ನಲಾಗಿದ್ದು.
ಕಳೆದ ಮಂಗಳವಾರ ಮೇ 7 ರಂದು ಗ್ರಾಮದ ನಲ್ಲಿಯಲ್ಲಿ ನೀರು ಹಿಡಿಯು ವಿಚಾರವಾಗಿ ಗ್ರಾಮದ ಇಂದ್ರಾಣಿ ಮತ್ತು ಶಶಿಕಲಾ, ಯಶೋಧಮ್ಮ ನಡುವೆ ಗಲಾಟೆಯಾಗಿದೆ ಈ ಸಂಧರ್ಭದಲ್ಲಿ ಇಂದ್ರಾಣಿಯ ಎರಡೂ ಕಿವಿಗಳನ್ನು ಹರಿದು ಗಾಯಮಾಡಲಾಗಿದೆ. ಗಾಯಾಳು ಇಂದ್ರಾಣಿಯನ್ನು ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿಗೆ ಸೇರಿಸಲಾಗಿರುವುದಾಗಿ ಹೇಳಲಾಗಿದೆ.
ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಇಂತಿಷ್ಟೇ ಬಿಂದಿಗೆ ನೀರು ಎಂದು ಅಂದಾಜಿಸಿ ನೀರನ್ನು ನಲ್ಲಿಗಳಿಂದ ಸಂಗ್ರಹಣೆ ಮಾಡಿಕೊಳ್ಳುತ್ತಾರೆ. ಆದರೆ ಗಾಯಳು ಇಂದ್ರಾಣಿ ಒಂದು ಬಿಂದಿಗೆ ನೀರು ಹೆಚ್ಚಾಗಿ ಹಿಡಿದುಕೊಂಡಿದ್ದಾರೆ ಎಂದು ಗಲಾಟೆಗಳಾಗಿ ಕಿವಿಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ.
ಈ ಘಟನೆ ನಡೆದು ವಾರ ಕಳೆದಿದ್ದು ಗಾಯಳು ಇಂದ್ರಾಣಿ ದೂರನ್ನಾಧರಿಸಿ ಬೇತಮಂಗಲ ಠಾಣೆಯಲ್ಲಿ ಶಶಿಕಲಾ ಹಾಗೂ ಯಶೋಧಮ್ಮ ಮಹಿಳೆಯರ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಕೊಂಡಿದ್ದಾರೆ. ಇವರಿಬ್ಬರಿಗೂ ಜಾಮೀನೂ ಸಹ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಬೆತಮಂಗಲ ಠಾಣಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Don`t copy text!