ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಂಗೀತ ನಿರ್ದೇಶಕ ಎಂದು ಖ್ಯಾತರಾಗಿರುವ ಅರ್ಜುನ್ ಜನ್ಯ ಪೈಲ್ವಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು ಈ ಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರಂತೆ.
ಪೈಲ್ವಾನ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದಕ್ಕೂ ಮುನ್ನ ಚಿತ್ರ ತಂಡ ದೊಡ್ಡದಾಗಿ ಆಡಿಯೋ ಬಿಡುಗಡೆಗೆ ಮಾಡುವ ಆಲೋಚನೆ ಇದ್ದು ಇದೇ ತಿಂಗಳ 27ರಂದು ಆಡಿಯೋ ಬಿಡುಗಡೆಗೆ ಕೃಷ್ಣ ಅಂಡ್ ಟೀಂ ಪ್ಲ್ಯಾನ್ ಮಾಡಿಕೊಂಡಿದೆ.
ಪೈಲ್ವಾನ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರಕ್ಕೆ ಅರ್ಜುನ್ ಜನ್ಯ ಹೆಚ್ಚು ಶ್ರಮ ವಹಿಸಿ ಹೊಸ ರೀತಿಯಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ಮೂಲಕ ಹೊಸತನದ ಪ್ರಯೋಗವನ್ನು ಜನ್ಯ ಮಾಡಿದ್ದಾರೆ ಎನ್ನುವ ಮಾತು ಇದೆ.

ಪೈಲ್ವಾನ್ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸಿದ್ದು ಕರುಣಾಕರ್ ಅವರ ಛಾಯಾಗ್ರಹಣ ಇದೆ ಸ್ವಪ್ನ ಕೃಷ್ಣ ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿದ್ದು ಅವರಿಗೆ ಜೋಡಿಯಾಗಿ ಆಕಾಂಕ್ಷ ಸಿಂಗ್ ನಟಸಿದ್ದಾರೆ. ಹಿಂದಿಯ ಖ್ಯಾತ ನಟರಾದ ಸುನಿಲ್ ಶೆಟ್ಟಿ,ಕಬೀರ್ ದುಹಾನ್, ಹಾಗು ಕನ್ನಡದ ಶರತ್ ಲೋಹಿತಾಶ್ವ, ನಟಿಸಿರುತ್ತಾರೆ.
ವಿವೇಕ್ ಎಸ್ ಶೆಟ್ಟಿ