ಸೆಪ್ಟೆಂಬರ್‌ ತಿಂಗಳ ಅಂತ್ಯಕ್ಕೆ ಬ್ಯಾಂಕುಗಳ ಸಾಲು ರಜೆಗಳು.

10 ಸಾರ್ವಜನಿಕ ರಂಗದ ಬ್ಯಾಂಕ್‌ಗಳ ವಿಲೀನವನ್ನು ಕೇಂದ್ರ ಸರಕಾರ ಘೋಷಿಸಿರುವುದನ್ನು ವಿರೋಧಿಸಿ ನಾಲ್ಕು ಪ್ರಮುಖ ಬ್ಯಾಂಕ್‌ ಯೂನಿಯನ್‌ಗಳು ಸೆಪ್ಟೆಂಬರ್‌ 26 ಮತ್ತು 27 ರಂದು ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿವೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ದೇಶದಾದ್ಯಂತ ಹಲವಾರು ಬ್ಯಾಂಕ್‌ಗಳು ಸೆಪ್ಟೆಂಬರ್‌ 26 ಮತ್ತು 27ರಂದು ಮುಷ್ಕರ ನಡೆಸಲಿವೆ. 4ನೇ ಶನಿವಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 28 ಹಾಗೂ 29ರಂದು ಭಾನುವಾರವಾಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮುಷ್ಕರ, ರಜೆ ಹೀಗೆ ಸೆಪ್ಟೆಂಬರ್‌ ತಿಂಗಳ ಅಂತ್ಯಕ್ಕೆ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಹಣಕಾಸು ಸಂಬಂಧಿ ವ್ಯವಹಾರ ನಡೆಸಬೇಕಾಗಿರುವವರು ಮುಂಜಾಗ್ರತೆ ವಹಿಸುವೂದು ಸೂಕ್ತ.
ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿ ದೇಶದಾದ್ಯಂತ ಹಲವಾರು ಬ್ಯಾಂಕುಗಳ ನೌಕರರು ಸೆಪ್ಟೆಂಬರ್‌ 26 ಮತ್ತು 27ರಂದು ಮುಷ್ಕರ ನಡೆಸಲಿದ್ದಾರೆ ಜೋತೆಗೆ 4ನೇ ಶನಿವಾರ ಸೆಪ್ಟೆಂಬರ್‌ 28 ಹಾಗೂ 29ರಂದು ಭಾನುವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಸರಣಿಯಾಗಿ ನಾಲ್ಕು ದಿನ ಬ್ಯಾಂಕ್‌ಗಳು ತೆರೆಯುವುದಿಲ್ಲ.

ಇದರ ಜೊತೆಗೆ ಸಾಮಾನ್ಯ ರಜೆಗಳೂ ಸೇರಿಕೊಳ್ಳಲಿದ್ದು ಬ್ಯಾಂಕ್‌ಗಳು ನಾಲ್ಕು ದಿನ ಬಾಗಿಲು ತೆರೆಯುವುದಿಲ್ಲ. ಇದರಿಂದ ತಿಂಗಳಾಂತ್ಯದಲ್ಲಿ ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಅಡಚಣೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Don`t copy text!