ಬಿ.ಜೆ.ಪಿ ಅಭ್ಯರ್ಥಿ ಶ್ರೀನಿವಾಸಪುರದಲ್ಲಿ ಬಿರುಸಿನ ಪ್ರಚಾರ

ಶ್ರೀನಿವಾಸಪುರ ತಾಲೂಕಿನ ಶಿವಪುರದಲ್ಲಿ ಬಿ.ಜೆ.ಪಿ ಅಬ್ಯರ್ಥಿ ಬಿರುಸಿನ ಪ್ರಚಾರ ನಡೆಸಿದರು. ಬಹುತೇಕ ಬೋವಿಸಮಾಜದ ಜನರೆ ಇರುವ ಶಿವಪುರ ಗ್ರಾಮಕ್ಕೆ ಯುಗಾದಿಯಂದು ಭೇಟಿಕೊಟ್ಟಿದ್ದ ಬಿ.ಜೆ.ಪಿ ಅಭ್ಯರ್ಥಿ ಮುನಿಸ್ವಾಮಿ ಮತ ನೀದಿ ಗೆಲ್ಲಿಸಿದರೆ ಪ್ರಮಾಣಿಕವಾಗಿ ನಿಮ್ಮ ಸೇವೆ ಸಲ್ಲಿಸುವುದಾಗಿ ಹೇಳಿದರು. ಸಂಸದ ಮುನಿಯಪ್ಪ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡದೆ ತಮ್ಮ ಸ್ವಯಂ ಅಭಿವೃದ್ಧಿಯಾಗಿರುತ್ತಾರೆ ಅವರನ್ನು ಒಮ್ಮೆ ಬದಲಾಯಿಸಿ ಬಿ.ಜೆ.ಪಿ ಅಭ್ಯರ್ಥಿಯಾಗಿರುವ ನನಗೆ ಒಂದು ಅವಕಾಶ ನೀಡಿ ಎಂದರು.ಈ ಸಂಧರ್ಭದಲ್ಲಿ ಹಲವಾರು ಯುವಕರು ಮತ್ತು ಸ್ಥಳಿಯ ಸಂಸ್ಥೆಗಳಿಗೆ ಚುನಾಯಿತರಾಗಿದ್ದ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ತಾಲೂಕು ಬಿ.ಜೆ.ಪಿ ಮುಖಂಡ ವೈದ್ಯ ವೆಣುಗೋಪಾಲ್,ಲಕ್ಷ್ಮಣಗೌಡ,ಎಸ್ ಎಲ್ ಎನ್ ಮಂಜು ಶಿವಪ್ಪ ಮುಂತಾದವರು ಇದ್ದರು

Leave a Reply

Your email address will not be published. Required fields are marked *

Don`t copy text!