ಖ್ಯಾತ ನಟ ಚಿರಂಜಿವಿಗೆ BJP ಮೇಗಾ ಆಫರ್!?

ಹೈದರಾಬಾದ್:– ತೆಲಗು ಚಿತ್ರ ರಂಗದ ಖ್ಯಾತ ನಟ ಮೆಗಾಸ್ಟಾರ್ ಚಿರಂಜಿವಿ ಅವರಿಗೆ ಬಿಜೆಪಿ ಮೆಗಾ ಆಫರ್ ನೀಡಿದೆ. ಚಿರಂಜಿವಿ ಅವರು ಭಾರತೀಯ ಜನತಾ ಪಕ್ಷ ಸೇರುವುದಾದರೆ, ಆಂಧ್ರಪ್ರದೇಶದ ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನ ನೀಡುವುದಾಗಿ ಮತ್ತು ಮುಂದಿನ ಚುನಾವಣೆಗೆ ಎಲ್ಲಾ ರೀತಿಯ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಕಟಿಸಿ ಗೆಲ್ಲಿಸಿ ಮುಖ್ಯಮಂತ್ರಿ ಮಾಡುವುದಾಗಿ ಪಕ್ಷದ ಮುಖಂಡರು ಚಿರಂಜಿವಿ ಅವರನ್ನು ಭೇಟಿ ಮಾಡಿ ಮಾತುಕತೆ ನಡಸಿದೆ ಎನ್ನಲಾಗಿದೆ.
ಇದರಿಂದ ಆಂಧ್ರದ ರಾಜಕೀಯ ವಲಯದಲ್ಲಿ ಚಿರಂಜಿವಿ ಅವರ ರಾಜಕೀಯದ ರೀ ಎಂಟ್ರಿ ಬಗ್ಗೆ ಕಥೆಗಳು ಪುಂಖಾನು ಪುಂಖವಾಗಿ ಕೇಳಿಬರುತ್ತಿವೆ.ಈ ಎಲ್ಲಾ ಪರಿಸ್ಥಿಗಳ ಜಾಡು ನೋಡಿದರೆ ಎಲ್ಲವು ಸಾದ್ಯ ಎನ್ನಲಾಗುತ್ತಿದೆ.
ಹಿಂದೆ ಪ್ರಜಾರಾಜ್ಯ ಸ್ಥಾಪಿಸಿದ್ದ ಚಿರಂಜಿವಿ ಸ್ವತಹಃ ಎರಡು ಕಡೆ ಸ್ಪರ್ದಿಸಿ ಅವಿಭಜಿತ ಆಂಧ್ರಪ್ರದೇಶದ ಅಷ್ಟು ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು ಆದರೆ ಚಿರಂಜಿವಿ ತಮ್ಮ ಸ್ವಂತ ಉರಾದ ಕರಾವಳಿ ಆಂಧ್ರದ ಪಾಲಕೊಲ್ಲುವಿನಲ್ಲಿ ಸೋತು, ತಿರುಪತಿಯಲ್ಲಿ ಗೆಲವು ಸಾಧಿಸಿ 18 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದರು.ನಂತರದಲ್ಲಿ ನಡೆದ ರಾಜಕೀಯ ಬದಲಾವಣೆಯಲ್ಲಿ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲಿನ ಗೋಳಿಸಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ,ಕೇಂದ್ರ ಉಪಿಎ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಆನಂತರದಲ್ಲಿ ಆಂಧ್ರ ವಿಬಜನೆಯಾಗಿ ಚಿರಂಜಿವಿ ತಮ್ಮ ರಾಜ್ಯಸಭ ಸದಸ್ಯತ್ವ ಮುಗಿದ ನಂತರ ಸಿನಿಮಾಗಳತ್ತ ಮುಖಮಾಡಿದ್ದರು. ಅವರು ಸದ್ಯ ತಮ್ಮ 151 ಸಿನಿಮಾ ಸೈರಾ ನರಸಿಂಹರೆಡ್ಡಿ ಎಂಬ ಸ್ವಾತಂತ್ರ ಹೋರಾಟಗಾರನ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

ಸೈರಾನರಸಿಂಹ ರೆಡ್ದಿ ಪಾತ್ರದಲ್ಲಿ ಚಿರು

ಆಂಧ್ರದಲ್ಲಿ ಯೈ.ಎಸ್.ಆರ್.ಸಿ.ಪಿ ಪವರ್ ಫುಲ್. ಈಗ ಆಂಧ್ರದಲ್ಲಿ ಯೈ.ಎಸ್.ಆರ್.ಸಿ.ಪಿ ಪಕ್ಷದ ಪ್ರಜಂಡ ವಿಜಯ ಸಾಧಿಸಿ ಸದ್ಯದ ಪರಿಸ್ಥಿಯಲ್ಲಿ ರಾಜಕೀಯವಾಗಿ ಅಲ್ಲಿ ಯೈ.ಎಸ್.ಆರ್.ಸಿ.ಪಿ ಪ್ರಭಲವಾದ ಪ್ರಭಾವಿ ಪಕ್ಷವಾಗಿ ಪವರ್ ಫುಲ್ ಸರ್ಕಾರ ರಚಿಸಿದೆ,ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತ ವೈಖರಿಗೆ ತತ್ತರಿಸಿರುವ ಅಲ್ಲಿನ ವಿರೋಧ ಪಕ್ಷಗಳಾದ ತೆಲಗುದೆಶಂ, ಜನಸೇನಾ ಶಾಸಕರು, ಮಾಜಿ ಶಾಸಕರು, ಪ್ರಭಾವಿ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಯತ್ತ ಮುಖಮಾಡಿದ್ದಾರೆ,
ತೆಲಗರ ಆತ್ಮಗೌರವದ ಪ್ರತೀಕ ಎಂದು ಬಿಂಬಿತವಾಗಿ, ನಾಲ್ಕು ದಶಕಗಳ ಇತಿಹಾಸ ಇದ್ದ ತೆಲಗುದೆಶಂ ಪಕ್ಷದ ಹೀನಾಯ ಸೋಲು ಮುಖಂಡರನ್ನು ಚಿಂತೆಗಿಡುಮಾಡಿದೆ.ಆ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ದ್ವನಿಯೆ ಇಲ್ಲದಂತಾಗಿದೆ.ಚುನಾವಣೆಗೂ ಮುನ್ನ ಹುಟ್ಟಿದ್ದ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಹೇಳುಹೆಸರಿಲ್ಲದೆ ಸೋತಿದೆ. ಅದರ ಸಂಸ್ಥಾಪಕ ಪವನ್ ಸ್ವತಃ ಎರಡು ಕಡೆ ಸ್ಪರ್ದಿಸಿ ಸೋತು ಸುಣ್ಣವಾಗಿದ್ದಾರೆ ಗೆದ್ದಿರುವ ಒರ್ವ ಶಾಸಕ ವರಪ್ರಸಾದ್ ರಾವ್ ಬೆಜೆಪಿ ಸೇರಲು ಮುಂದಾಗಿದ್ದಾರೆ. ಇತ್ತಿಚಿಗಷ್ಟೆ ತೆಲಗುದೇಶಂನ ನಾಲ್ಕು ಜನ ರಾಜ್ಯಸಭಾ ಸದಸ್ಯರು ಇತ್ತಿಚಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಶತಾಯ ಗತಾಯ ಆಂಧ್ರದಲ್ಲಿ ಬಿಜೆಪಿ ಕಮಲ ಅರಳಲೆ ಬೇಕು.
ಈ ಹಿನ್ನಲೆಯಲ್ಲಿ ಡೆಲ್ಲಿ ಬಿಜೆಪಿ ಮುಖಂಡರು ರಣತಂತ್ರ ರೂಪಿಸಿದ್ದಾರೆ ಇದರ ಮೊದಲ ಭಾಗವೆ ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಪರವಾಗಿ ಸಾಫ್ಟ್ ಕಾರ್ನರ್ ತಂತ್ರಗಾರಿಕೆ ಮಾಡಿ ಜಗನ್ ಮೊಹನ್ ರೆಡ್ಡಿ ಮೂಲಕ ಮೊನ್ನೆಯ ಚುನಾವಣೆಯಲ್ಲಿ ತೆಲಗುದೆಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಜಕೀಯ ಅಶ್ವಮೇದದ ಕುದುರೆಯನ್ನು ಕಟ್ಟಿಹಾಕಿಸಿದ್ದಾರೆ. ಸದ್ಯ ಈಗ ಆಂಧ್ರದಲ್ಲಿ ಪ್ರತಿಪಕ್ಷವೆ ಇಲ್ಲ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಕಾಲಿ ಇರುವ ಪ್ರತಿಪಕ್ಷ ಸ್ಥಾನದಲ್ಲಿ ಬಿಜೆಪಿಯನ್ನು ಬೆಳೆಸಲು ಡೆಲ್ಲಿ ಮುಖಂಡರು ಸಮರ್ಥನಾಯಕನ್ನಾಗಿ ಚಿರಂಜಿವಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಚಿರಂಜಿವಿ ಕುಟುಂಬದ ಯಾವೊಬ್ಬ ಸದಸ್ಯ ಚಿರಂಜಿವಿ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೆ ಪ್ರತಿಕ್ರೀಯೆ ನೀಡಿಲ್ಲ. ಜೊತೆಗೆ ಭವಿಷ್ಯತ್ತಿನಲ್ಲಿ ಯಾವತ್ತು ಚಿರಂಜಿವಿ ರಾಜಕೀಯಕ್ಕೆ ಬರುವುದಿಲ್ಲ ಹಾಗು ಬರುವಂತ ಯಾವ ಲಕ್ಷಣಗಳು ಇಲ್ಲ ಎಂದು ಆಪ್ತ ವಲಯದವರಿಂದ ಮಾತುಗಳು ಕೇಳಿಬರುತ್ತಿವೆ. ಜೋತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿರಂಜಿವೆ ತಮ್ಮ ಪವನ್ ಜನಸೇನಾ ಪಕ್ಷ ಕಟ್ಟಿದ್ದರು ರಾಜಕೀಯದಿಂದ ಅಂತರ ಕಾಪಾಡಿಕೊಂಡಿದಲ್ಲದೆ ಎಲ್ಲಿವೂ ಕಾಣಿಸಿಕೊಳ್ಳದೆ ದೂರವೆ ಉಳದಿದ್ದರು.

ಪಟ್ಟು ಬಿಡದ ಬಿಜೆಪಿ
ಕೇಂದ್ರ ಬಿಜೆಪಿ ಮುಖಂಡರು ಚಿರಂಜಿವಿ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಆಶಾಭವನೆಯಿಂದ ಹೇಳುತ್ತಾರೆ ಎನ್ನಲಾಗುತ್ತಿದೆ. ಆಂಧ್ರದಲ್ಲಿ ಕಾಪು ಜನಾಂಗ(ಬಲಿಜ) ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ನಿರ್ಣಾಯಕರು ಈ ಹಿನ್ನಲೆಯಲ್ಲಿ ಅದೆ ಜನಾಂಗಕ್ಕೆ ಸೇರಿದವರಾದ ಚಿರಂಜಿವಿಗೆ ಆಂಧ್ರದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನ 2024 ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನ ಘೋಷಣೆ ಮಾಡಿ ಈ ಮೂಲಕ ಚುನಾವಣೆ ಗೆಲ್ಲಲು ತಂತ್ರಗಾರಿಗೆ ಹಣೆಯಲಾಗಿದಿಯಂತೆ. ಬಿಜೆಪಿಗೆ ಆಂಧ್ರದಲ್ಲಿ ಉತ್ತಮ ನೆಲಗಟ್ಟು ಮಾಡಿಕೊಂಡು ಪಕ್ಷದ ಬಾವುಟ ಹಾರಿಸುವ ಲೆಕ್ಕಾಚಾರ ಡೆಲ್ಲಿ ಕಮಲ ನಾಯಕರ ಯೋಜನೆಯಂತೆ.
ಆಕರ್ಷಣ ಕಮಲ ಅಡಿಯಲ್ಲಿ ತುರ್ತಾಗಿ ಚಿರಂಜಿವಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಕೇಂದ್ರದ ಬಿಜೆಪಿ ಮುಖ್ಯಸ್ಥರು ಎಲ್ಲಾ ರಿತಿಯ ಸಾಹಸಗಳನ್ನು ಮಾಡುತಿದ್ದಾರೆ.ಅಗತ್ಯವಾದ ತಂತ್ರಗಳನ್ನು ಹೂಡಿ ಅವರ ಮೇಲೆ ಒತ್ತಡ ತಂದಾದರು ಚಿರಂಜಿವಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವತ್ತ ಕಾರ್ಯಚರಣೆ ಇದೆ ಎನ್ನಲಾಗುತ್ತಿದೆ. ತಕ್ಷಣಕ್ಕೆ ರಾಜ್ಯಸಭಾ ಸ್ಥಾನ ನೀಡುವಂತ ಯೋಜನೆ ಇದೆ ಎನ್ನಲಾಗುತ್ತಿದೆ. ಈ ಎಲ್ಲಾ ಪರಿಣಾಮಗಳನ್ನು ಗಮನಿಸಿದರೆ ಭವಿಷ್ಯತ್ ಕಾರ್ಯಚರಣೆ ಏನಾಗಬಹುದು ಎಂದು ಹೇಳಲಾಗದು ಅಕರ್ಷಣ ಕಮಲಕ್ಕೆ ಚಿರಂಜಿವಿ ಒಳಗಾಗುತ್ತಾರ ಅಥಾವ ರಾಜಕೀಯದಿಂದ ದೂರ ಉಳಿಯುವಂತ ಗಟ್ಟಿ ನಿರ್ಧಾರ ಕೈ ಗೊಳ್ಳುತ್ತಾರಾ ಕಾದು ನೋಡಬೇಕಿದೆ

ವಿಶೇಷ ವರದಿ:-ವಾರಣಾಸಿ ನಾಗರ್ಜುನ

Leave a Reply

Your email address will not be published. Required fields are marked *

Don`t copy text!