ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಹಲವು ವಿಶೇಷಗಳನ್ನೊಗೊಂಡಿದೆ.

ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಹಲವು ವಿಶೇಷಗಳನ್ನೊಗೊಂಡಿದೆ ಎಂದು ಸಿನಿಮಾ ವಿಷ್ಲೇಶಕರು ಹೇಳುತ್ತಿದ್ದಾರೆ.
ಕಾರಣವೇನೆಂದರೆ ದರ್ಶನ್ ಅಭಿಮಾನಿಗಳಲ್ಲಿ ಭಾರಿ ನೀರೀಕ್ಷೆ ಹುಟ್ಟಿಸಿರುವ ಯಜಮಾನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಖಡಕ್, ಮಾಸ್ ಹಾಗು ಪವರ್ ಫುಲ್ ಡೈಲಾಗ್ ಮತ್ತು ಆಕ್ಷನ್ ತುಂಬಿರುವ ಟ್ರೈಲರ್ ನೋಡಿಯೇ ಅಭಿಮಾನಿಗಳನ್ನು ಹುಚ್ಚಎಬ್ಬಿಸುವಂತೆ ಮಾಡಿದಿಯಂತೆ,ಯಜಮಾನ್ ಸಿನಿಮಾ.

ಮಾರುಕಟ್ಟೆಯಲ್ಲಿ ಯಜಮಾನ ಚಿತ್ರದ ಹಾಡುಗಳು ಈಗಾಗಲೆ ದೂಳೆಬ್ಬಿಸಿದೆ ಈಗ ಟ್ರೈಲರ್ ಸರದಿ, ಟ್ರೈಲರ್ ನೋಡುತ್ತಿರುವ ಅಭಿಮಾನಿಗಳು ಮೈ ಜುಮ್ ಎನ್ನಿಸುವಂತ ಫೀಲ್ ಕೊಡುತ್ತಿದೆ ಎನ್ನುತ್ತಾರೆ, 2.5 ನಿಮಿಷದ ಟ್ರೈಲರ್ ಚಿತ್ರದ ಬಗ್ಗೆ ಭಾರಿ ಕುತೂಹಲವನ್ನು ಸೃಷ್ಠಿಸಿದಿಯಂತೆ.
ಇದಕ್ಕೆ ತಕ್ಕ ಹಾಗೆ ಚಿತ್ರದಲ್ಲಿರೋ ವಿಲನ್ ಗಳು ಯಜಮಾನನ ತಾಕತ್ತನ್ನು ಕೆಣಕುತ್ತಿದ್ದರೆ ಈ ಚಿತ್ರದಲ್ಲಿ ಆಕ್ಷನ್ ಬರಪೂರವಾಗಿದೆ ಎನ್ನುವ ಮಾತನ್ನು ಅಭಿಮಾನಿಗಳು ಹೇಳುತಿದ್ದಾರೆ. ಮೊದಲ ಬಾರಿಗೆ ದರ್ಶನ ಗೆ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಹಾಕೋ ಚಾಲೆಂಜ್ ಕುತೂಹಲ ಕೆರಳಿಸುತ್ತೆ ಎನ್ನಲಾಗಿದೆ.
ದರ್ಶನ್ ಡೈಲಾಗ್ ಡಿಲವರಿ ಸೂಪರ್ ಎನ್ನಲಾಗಿದ್ದು ಗಂಟೆ ಎಳೆದುಕೊಂಡು ಹೋಗುತ್ತ ‘ಆಕಾಶಕ್ಕೆ ತಲೆ ಕೊಟ್ಟು ಭೂಮಿಗೆ ಬೇರಿಳಿಸಿ ನಿಯತ್ತಿಂದ ಕಟ್ಟಿರೋ ಸ್ವಂತ ಬ್ರಾಂಡೋ ಸೌಂಡ್ ಜಾಸ್ತಿನೇ ಇರುತ್ತೆ’ ಎನ್ನೋ ಪಂಚಿಂಗ್ ಡೈಲಾಗ್ ನಿಂದ ಆರಂಭವಾಗುವ ಟ್ರೈಲರ್ ಒಂದು ಕ್ಷಣ ಅಭಿಮಾನಿಗಳನ್ನು ರೋಮಾಂಚನಗೋಳಿಸುತ್ತಂತೆ.

ಒಟ್ಟಿನಲ್ಲಿ ಡಿ ಬಾಸ್ ಅಭಿಮಾಯಿಗಳು ನೋಡಿದ ಟ್ರೈಲರ್ ನ್ನೇ ಪದೇ ಪದೇ ನೋಡುತ್ತಾ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಟ್ರೈಲರ್ ಮೂಲಕ ಮತ್ತೊಂದು ಗುಟ್ಟು ಬಿಟ್ಟುಕೊಟ್ಟಿರುವ ಚಿತ್ರ ತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಿದ್ದಾರೆ ಮಾರ್ಚ್ 1 ರಂದು ಯಜಮಾನ ಬೆಳಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾನೆ.

ಈ ಚಿತ್ರವನ್ನು ‘ಕೆಜಿಎಫ್ ‘ ಚಿತ್ರ ವಿತರಣೆ ಮಾಡಿದ ಡಿಸ್ಟ್ರಿಬ್ಯೂಟರ್ ಕಾರ್ತಿಕ್ ಗೌಡ ಹಂಚಿಕೆ ಮಾಡಲಿದ್ದಾರೆ. ದರ್ಶನ್ ವೃತ್ತಿ ಜೀವನದ ’50ನೇ’ ಚಿತ್ರವಾಗಿ ಈಗಾಗಲೇ ಹೊಸ ಮೈಲಿಗಲ್ಲು ಸ್ಥಾಪಿಸಲು ಹೊರಟಂತಿರುವ ‘ಯಜಮಾನ’ನಿಗೆ ಈಗ ಹಾರಲು ಹೊಸ ರೆಕ್ಕೆಯೊಂದು ಸಿಕ್ಕಂತಾಗಿದೆ.

ಸದ್ಯಕ್ಕೆ ಭಾರೀ ಹೈಪ್ ಕ್ರಿಯೇಟ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರ್ನಾಟಕ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ‘ಯಜಮಾನ’ನಿಗೆ ಜೋಡಿಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ದರ್ಶನ್-ರಶ್ಮಿಕಾ ಜೊತೆ ‘ಡಾಲಿ’ ಖ್ಯಾತಿಯ ಧನಂಜಯ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ನಟರ ದಂಡೆ ಇರುವುದು ಕೂಡ ಈ ಚಿತ್ರಕ್ಕೆ ವಿಶೇಷ ಎನ್ನಲಾಗಿದೆ.
ಮತ್ತೊಂದು ವಿಶೇಷ ಏನೆಂದರೆ ಮೊದಲನೆ ಬಾರಿಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಂಗೀತ ನಿಡುವುದರೊಂದಿಗೆ ಪೊನ್ ಕುಮಾರನ್ ಜೊತೆಗೆ ನಿರ್ದೇಶನ ಸಹ ಮಾಡುತ್ತಿದ್ದಾರೆ.ಮೀಡಿಯಾ ಹೌಸ್ ಲಾಂಚನದಲ್ಲಿ ಶೈಲಜಾ ನಾಗ್ ಹಾಗು ಬಿ.ಸುರೆಶ ನಿರ್ಮಿಸಿದ್ದಾರೆ.
ಒಟ್ಟಿನಲ್ಲಿ ದಚ್ಚು ಅಭಿಮಾನಿಗಳಿಗೆ ಚಿತ್ರ ಬಿಡುಗಡೆ ಮಾರ್ಚ್ 1 ರಂದು ಹಬ್ಬದ ಸಂಭ್ರಮ, ಅಭಿಮಾನಿಗಳು ಹೊಸವರ್ಷ ಯುಗಾದಿ ಹಬ್ಬವನ್ನೂ ಆಚರಣೆ ಮಾಡುತ್ತಾರೆ ಎಂದರೆ ಸುಳ್ಳಾಗದು.

Leave a Reply

Your email address will not be published. Required fields are marked *

Don`t copy text!