ಶ್ರೀನಿವಾಸಪುರ ಪುರಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಬೈರಪಲ್ಲಿ ಮತ್ತು ಕೊಳ್ಳೂರು ಗ್ರಾಮಸ್ಥರು.

ಮೇ 29 ರಂದು ನಡೆಯಲಿರುವ ಶ್ರೀನಿವಾಸಪುರ ಪುರಸಭೆ ಚುನಾವಣೆಯನ್ನು ಬಹಿಷ್ಕರಿಸಲಿರುವುದಾಗಿ ಬೈರಪಲ್ಲಿ ಮತ್ತು ಕೊಳ್ಳೂರು ಗ್ರಾಮಸ್ಥರು ಹೇಳಿರುತ್ತಾರೆ.
ಈಗ್ಗೆ 3 ವರ್ಷಗಳ ಹಿಂದೆ ಕೋಲಾರ ಜಿಲ್ಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಜೆ.ತಿಮ್ಮಸಂದ್ರ ಪಂಚಾಯಿತಿಯ ಕೊಳ್ಳೂರು ಮತ್ತು ರೋಣೂರು ಹೋಬಳಿಯಲ್ಲಿ ಆರಿಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಂತ ಬೈರಪಲ್ಲಿ ಗ್ರಾಮಗಳನ್ನು ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿತ್ತು. ಸೇರ್ಪಡೆ ಮಾಡಲಾಯಿತಾದರು ನಂತರದಲ್ಲಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾದರು ಎನ್ನುವುದು ಗ್ರಾಮಸ್ಥರ ವಾದ, ರಸ್ತೆ ನಿರ್ಮಾಣ ಬೀದಿ ದೀಪಗಳು ಕುಡಿಯುವ ನೀರು ಸಂಭಂದಪಟ್ಟಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಧಿಕಾರಿಗಳು ಹಿತಾಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗಲೆ ನಮ್ಮ ಗ್ರಾಮಗಳಿಗೆ ಉತ್ತಮ ಸೌಕರ್ಯಗಳು ಸಿಗುತಿತ್ತು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ ಮೇಲೆ ಗ್ರಾಮಗಳಿಗೆ ಸಂಕಷ್ಠಗಳು ಎದುರಾಗಿದೆ ಎನ್ನುತ್ತಾರೆ ಬೈರಪಲ್ಲಿಯ ಯುವಮುಖಂಡ ಪಟೇಲ್ ಆಶೋಕ್ ರೆಡ್ದಿ.

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!