ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ 8 ನೇ ಬಾರಿಗೆ ಗೆಲ್ಲುವುದು ಖಚಿತ ದಳಸನೂರುಗೋಪಾಲಕೃಷ್ಣ

ಶ್ರೀನಿವಾಸಪುರ(ಕೋಲಾರಜಿಲ್ಲೆ):-ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ಭಿನ್ನಾಭಿಪ್ರಾಯಗಳು ಇಲ್ಲ ಕೇಳಿಬರುತ್ತಿರುವ ಉಹಾಪೋಹಗಳು ಸುಳ್ಳು ಎಂದು ಕಾಂಗ್ರೆಸ್ ಮುಖಂಡ ಹಾಗು ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ ಹೇಳಿದರು.
ಮಂಗಳವಾರ ಶ್ರೀನಿವಾಸಪುರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು 8 ನೇ ಬಾರಿಗೆ ಕೆ.ಹೆಚ್.ಮುನಿಯಪ್ಪ ಗೆಲ್ಲುವುದು ಖಚಿತ ಎಂದು ಹೇಳಿದರು.ಯಾವುದೇ ಕಾರಣಕ್ಕೂ ಬಿ.ಜೆ.ಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಜನಸಾಮನ್ಯರಿಗೆ ಸಿಗುವಂತ ಮುನಿಯಪ್ಪ ಗೆಲ್ಲಬೇಕಿದೆ, ಹಿಂದಿನ ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿರುವಂತ ಜನಪರ ಕಾರ್ಯಕ್ರಮಗಳು ಮೋದಿ ಸರ್ಕಾರ ನಿಲ್ಲಿಸಿದೆ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮೋದಿ ಆಡಳಿತ ಇದೆ ಎಂದು ಆರೋಪಿಸಿದರು.
ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟು ಸುಲಭ ಇಲ್ಲ ಎಂದ ಅವರು ಕರ್ನಾಟಕದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಈ ಬಗ್ಗೆ ಅನುಮಾನ ಬೇಡ ಎಂದರು.ಕೋಲಾರ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿರುವ ವ್ಯಕ್ತಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು ಇದೇನಾ ಬಿ.ಜೆ.ಪಿ ಸಿದ್ಧಾಂತ ಎಂದು ಲೇವಡಿಮಾಡಿದರು. ಅಂತಹ ವ್ಯಕ್ತಿಗಳಿಂದ ಜಿಲ್ಲೆಯ ಗೌರವಕ್ಕೆ ಚುತಿಬರುತ್ತದೆ ಎಂದರು.
ಕೆ.ಹೆಚ್.ಮುನಿಯಪ್ಪನವರ ಗೆಲುವಿಗೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾಡಿರುವ ಕಾರ್ಯಕ್ರಮಗಳು ಶ್ರೀರಕ್ಷೇಯಾಗುತ್ತದೆ ಜಿಲ್ಲೆಯಲ್ಲಿ ನಮ್ಮ ಪ್ರಶ್ನಾತೀತ ನಾಯಕರಾಗಿರುವ ರಮೇಶ್ ಕುಮಾರ್ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಮಾಡಿರುವಂತ ಕಾರ್ಯಕ್ರಮಗಳು ಜಿಲ್ಲೆಯ ಜನತೆ ಮರೆಯುವಂತೆ ಇಲ್ಲ ಕೆ.ಸಿ.ವ್ಯಾಲಿ ಯೋಜನೆ.ಎತ್ತಿನ ಹೋಳೆ ಯೋಜನೆ ಶ್ರೀನಿವಾಸಪುರದಲ್ಲಿ 18 ಸಾವಿರ ಮನೆಗಳ ನಿರ್ಮಾಣ,ಶ್ರೀನಿವಾಸಪುರ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸಿರುವುದು ಕುಡಿಯುವ ನೀರಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರಿಫ್, ಶೇಷಾಪುರ ಗೋಪಾಲ್,ಮುತ್ತಕಪಲ್ಲಿ ಸರ್ಧಾರ್,ಅನ್ನಿಸ್ ಮಂಚನಿಳ್ಳಕೋಟೆಮುನಿಶ್ವಾಮಿ,ತಾಲೂಕು ಪಂಚಾಯಿತಿ ಸದಸ್ಯ ಶ್ರೀರಾಮ್ ವೀರಬದ್ರಸ್ವಾಮಿ ಮುಂತಾದವರು ಇದ್ದರು.

ರಮೇಶಕುಮಾರ್ ಅವರೊಂದಿಗೆ ಗುರುತಿಸಿಕೊಂಡಿರುವ ಪ್ರಮುಖ ಮುಖಂಡರಾದ ಕೋಚಿಮುಲ್ ಮಾಜಿ ಅಧ್ಯಕ್ಷ ಬೇಟಪ್ಪ , ಎ.ಪಿ.ಎಂ.ಸಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್ ಪ್ರಕಾಶ್, ಕೆ.ನಾರಯಣಸ್ವಾಮಿ, ಪಿ.ಎಲ್.ಡಿ .ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಆಶೋಕ್ ಪುರಸಭೆ ಸದಸ್ಯ ಸಿಮೆಂಟ್ ರಮೇಶ್ ಇನ್ನು ಹಲವರು ಕಾಂಗ್ರೆಸ್ ಮುಖಂಡರು ಸುದ್ಧಿಗೋಷ್ಠಿಯತ್ತ ಸುಳಿಯದೆ ದೂರ ಉಳದಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಬಿನ್ನಮತ ಇನ್ನು ಬಗೆಹರೆದಿಲ್ಲ ಎನ್ನುವಂತಿತ್ತು.

ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!