ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ ಪ್ರಾಭಲ್ಯ

ಕಾಂಗ್ರೆಸ್ ಹಾಲಿ ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ್ ಹಾಗೂ J.D.S ನ ಇಬ್ಬರು ಮಾಜಿ ಶಾಸಕರಾದ ಶ್ರೀನಿವಾಸಪುರದ ವೆಂಕಟಶಿವಾರೆಡ್ಡಿ ಮಾಲೂರಿನ ಮಂಜುನಾಥ್ ಗೌಡ ಹಾಗು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥಗೆ ತೀವ್ರವಾದ ಮುಖಭಂಗವಾಗಿದೆ.

ಮಾಲೂರು ಶಾಸಕ ಹಾಗೂ ಹಾಲಿ ಕೋಚಿಮುಲ್ ಒಕ್ಕೂಟದ ಅಧ್ಯಕ್ಷ ನಂಜೇಗೌಡ ಗೆಲವು ಸಾದಿಸಿದ್ದಾರೆ. ಮಾಲೂರು ನಿರ್ದೇಶಕರಾಗಿ ನಂಜೇಗೌಡ,ಮುಳಬಾಗಲು ಕಾಡೇನಹಳ್ಳಿ ನಾಗರಾಜ್,ಕೋಲಾರ ಹರೀಶ್,ಶ್ರೀನಿವಾಸಪುರ ಹನುಮೇಶ್,ಕೋಲಾರ ಮಹಿಳಾ ನಿರ್ದೇಶಕಿ ಕಾಂತಮ್ಮ.
ಚಿಕ್ಕಬಳ್ಳಾಪುರ ವೆಂಕಟೇಶ್, ಬಾಗೇಪಲ್ಲಿ ಮಂಜುನಾಥ್ ರೆಡ್ಡಿ, ಚಿಂತಾಮಣಿ ಅಶ್ವತ್ಥನಾರಾಯಣ ರೆಡ್ಡಿ, ಶಿಢ್ಲಘಟ್ಟ ಆರ್ . ಶ್ರೀನಿವಾಸ್ ಗೆಲುವು.
ಕೋಲಾರ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ 9 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ 6 ಹಾಗೂ ಜೆಡಿಎಸ್‍ನ 2 ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಣದ ಓರ್ವ ಅಭ್ಯರ್ಥಿ ಆಯ್ಕೆಯಾಗಿದ್ದು, ಈಗಾಗಲೇ 4 ಮಂದಿ ಅವಿರೋಧ ಆಯ್ಕೆಯಾಗಿರುವುದರೊಂದಿಗೆ ಒಕ್ಕೂಟದಲ್ಲಿ 10 ಸ್ಥಾನಗಳೊಂದಿಗೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಒಟ್ಟು 13 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಂತರ ಉಳಿದ 9 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಕೋಲಾರ ಕ್ಷೇತ್ರದ ಡಿ.ವಿ.ಹರೀಶ್, ಶ್ರೀನಿವಾಸಪುರ ಕ್ಷೇತ್ರದ ಹನುಮೇಶ್, ಮಹಿಳಾ ಕ್ಷೇತ್ರದಿಂದ ಕಾಂತಮ್ಮ, ಶಿಢ್ಲಘಟ್ಟದಿಂದ ಶ್ರೀನಿವಾಸ್, ಮಾಲೂರಿನಿಂದ ಕೆ.ವೈ.ನಂಜೇಗೌಡ, ಬಾಗೇಪಲ್ಲಿನ ಮಂಜುನಾಥರೆಡ್ಡಿ ಆಯ್ಕೆಯಾದರು.
ಚಿಂತಾಮಣಿ ತಾಲ್ಲೂಕಿನಿಂದ ಮಾಜಿ ಶಾಸಕ ಸುಧಾಕರ್ ಬಣದಿಂದ ಕಣಕ್ಕಿಳಿದಿದ್ದ ಅಶ್ವಥ್ಥನಾರಾಯಣರೆಡ್ಡಿ ಹಾಗೂ ಜೆಡಿಎಸ್‍ನ ಇಬ್ಬರು ಆಯ್ಕೆಯಾಗಿದ್ದು, ಮುಳಬಾಗಿಲು ಕ್ಷೇತ್ರದಿಂದ ಕಾಡೇನಹಳ್ಳಿ ನಾಗರಾಜ್,ಚಿಕ್ಕಬಳ್ಳಾಪುರದ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಈಗಾಗಲೇ ಬಂಗಾರಪೇಟೆ ಕ್ಷೇತ್ರದಿಂದ ಕಾಂಗ್ರೆಸ್‍ನ ಜಯಸಿಂಹ ಕೃಷ್ಣಪ್ಪ, ಗೌರಿಬಿದನೂರಿನಿಂದ ಕಾಂತರಾಜು, ಗುಡಿಬಂಡೆಯ ಅಶ್ವಥ್ಥರೆಡ್ಡಿ, ಮಹಿಳಾ ಕ್ಷೇತ್ರದಿಂದ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಜಿದ್ದಾಜಿದ್ದಿನ ಚುನಾವಣೆ ನಡೆದಿದ್ದು, ಭಾರಿ ಪ್ರಮಾಣದ ಹಣ,ಚಿನ್ನಾಭರಣ, ಬುಲೆಟ್ ದ್ವಿಚಕ್ರವಾಹನ ಸೇರಿದಂತೆ ಮತದಾರರಿಗೆ ಆಮಿಷಗಳನ್ನು ಒಡ್ಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿತ್ತು.ಶತಾಯಗತಾಯ ಗೆಲ್ಲುವ ಆಶಯದೊಂದಿಗೆ ಕಣಕ್ಕಿಳಿದಿದ್ದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ ರಾಜೇಂದ್ರಗೌಡ, ಜೆಡಿಎಸ್ ಮಾಜಿ ಶಾಸಕ ಮಂಜುನಾಥಗೌಡರ ಬೆಂಬಲದಿಂದ ಕಣಕ್ಕಿಳಿದಿದ್ದ ಡಾ.ಪ್ರಸನ್ನ ಸೋಲುಂಡಿದ್ದಾರೆ. ಕೋಲಾರ ಜಿಲ್ಲಾ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಆಪ್ತ ಪಾಳ್ಯಂ ಬೈರಾರೆಡ್ಡಿ ಸೋತಿದ್ದಾರೆ.
ಮತದಾನ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೂ ನಡೆದಿದ್ದು, ಸಂಜೆ ಮತ ಎಣಿಕೆ ನಡೆಯಿತು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಗರದ ಗೋಕುಲ ವಿದ್ಯಾಸಂಸ್ಥೆ ಸುತ್ತ ಆಗಮಿಸಿದ್ದ ಅಭ್ಯರ್ಥಿಗಳ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ತೀವ್ರ ಪ್ರತಿಷ್ಟೆಯ ಕಣಗಳಾಗಿದ್ದ ಕೋಲಾರ ಕ್ಷೇತ್ರದಲ್ಲಿ ಡಿ.ವಿ.ಹರೀಶ್, ಶ್ರೀನಿವಾಸಪುರದಲ್ಲಿ ಹನುಮೇಶ್, ಮಾಲೂರಿನ ಶಾಸಕ ಕೆ.ವೈ.ನಂಜೇಗೌಡರ ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದರು.
ಗೆಲುವು ಘೋಷಣೆಯಾಗಿ ಅಭ್ಯರ್ಥಿಗಳು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಮಾಲೂರು ತಾಲ್ಲೂಕಿನಿಂದ ವಿಜಯಿ ಅಭ್ಯರ್ಥಿ ಕೆ.ವೈನಂಜೇಗೌಡ 102 ಮತ ಪಡೆದರೆ ಅವರ ಪ್ರತಿಸ್ವರ್ಧಿ ಜೆಡಿಎಸ್‍ನ ಎ.ವಿ.ಪ್ರಸನ್ನ ಎ.ವಿ.ಪ್ರಸನ್ನ 44ಮತ ಪಡೆದಿದ್ದು, ಇಲ್ಲಿ ಒಟ್ಟು 146 ಮತಗಳು ಚಲಾವಣೆಯಾಗಿ ಒಂದು ಮತ ತಿರಸ್ಕತಗೊಂಡಿತ್ತು.
ಕೋಲಾರಕ್ಷೇತ್ರ
ಕೋಲಾರ ಕ್ಷೇತ್ರದಲ್ಲಿ ವಿಜಯಿ ಅಭ್ಯರ್ಥಿ ಡಿ.ವಿ.ಹರೀಶ್ 128 ಮತ ಪಡೆದರೆ ಪ್ರತಿಸ್ವರ್ಧಿ ಆರ್.ರಾಮಕೃಷ್ಣೇಗೌಡ 90 ಮತ ಪಡೆದು ಸೋಲುಂಡಿದ್ದು, ಇಲ್ಲಿ 221 ಮತಗಳು ಚಲಾವಣೆಯಾಗಿದ್ದು, 3 ಮತಗಳು ತಿರಸ್ಕತಗೊಂಡವು.
ಮುಳಬಾಗಿಲುಕ್ಷೇತ್ರ
ಜೆಡಿಎಸ್‍ನ ಕಾಡೇನಹಳ್ಳಿ ನಾಗರಾಜ್ 83 ಮತಗಳೊಂದಿಗೆ ವಿಜಯಿಯಾಗಿದ್ದು, ಅವರ ಪ್ರತಿಸ್ವರ್ಧಿ ಆರ್.ಆರ್.ರಾಜೇಂದ್ರಗೌಡ 72 ಮತಪಡೆದು ಸೋಲುಂಡರು ಇಲ್ಲಿ ಒಟ್ಟು156 ಮತಗಳು ಚಲಾವಣೆಯಾಗಿದ್ದು, ಒಂದು ಮತ ತಿರಸ್ಕತವಾಯಿತು.
ಶ್ರೀನಿವಾಸಪುರ ಕ್ಷೇತ್ರ
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹನುಮೇಶ್ 82 ಮತ ಪಡೆದು ವಿಜಯಿಯಾಗಿದ್ದು, ಅವರ ಪ್ರತಿಸ್ವರ್ಧಿ ಬೈರಾರೆಡ್ಡಿ 70 ಮತಗಳನ್ನು ಪಡೆದು ಸೋಲುಂಡರು. ಇಲ್ಲಿ ಒಟ್ಟು 152 ಮತಗಳು ಚಲಾವಣೆಯಾಗಿತ್ತು.
ಶಿಡ್ಲಘಟ್ಟತಾಲ್ಲೂಕು
ಶಿಢ್ಲಘಟ್ಟ ತಾಲ್ಲೂಕಿನಲ್ಲಿ ಕಾಂಗ್ರೆಸ್‍ನ ಆರ್.ಶ್ರೀನಿವಾಸ್ 87 ಮತ ಪಡೆದು ಜಯಶೀಲಾಗಿದ್ದ, ಅವರ ಪ್ರತಿಸ್ವರ್ಧಿ ಮುನಿಯಪ್ಪ 86 ಮತ ಪಡೆದು ಸೋಲುಂಡಿದ್ದಾರೆ. ಇಲ್ಲಿ ಒಟ್ಟು 174 ಮತಗಳು ಚಲಾವಣೆಯಾಗಿದ್ದು, 1 ಮತ ತಿರಸ್ಕತಗೊಂಡಿದೆ.
ಚಿಕ್ಕಬಳ್ಳಾಪುರ ಕ್ಷೇತ್ರ
ಚಿಕ್ಕಬಳ್ಳಾಫುರ ತಾಲ್ಲೂಕಿನಲಲ್ಲಿ ಕಣಕ್ಕಿಳಿದಿದ್ದ ಜೆಡಿಎಸ್‍ನ ಎನ್.ಸಿ.ವೆಂಕಟೇಶ್ 80 ಮತ ಪಡೆದು ಜಯಶೀಲರಾಗಿದ್ದು, ಅವರ ಪ್ರತಿಸ್ವರ್ಧಿ ಕೆ.ವಿ.ನಾಗರಾಜ್ 77 ಮತಪಡೆದು ಸೋಲುಂಡಿದ್ದಾರೆ. ಇಲ್ಲಿ 158 ಮತಗಳು ಚಲಾವಣೆಯಾಗಿದ್ದು, 1 ಮತ ತಿರಸ್ಕತಗೊಂಡಿದೆ.
ಚಿಂತಾಮಣಿ ಕ್ಷೇತ್ರ
ಚಿಂತಾಮಣಿ ತಾಲ್ಲೂಕಿನಿಂದ ಕಣಕ್ಕಿಳಿದಿದ್ದ ಮಾಜಿಶಾಸಕ ಸುಧಾಕರ್ ಬಣದ ವೈ.ಬಿ.ಅಶ್ವಥ್ ನಾರಾಯಣ 113 ಪಡೆದು ಜಯಸಾಧಿಸಿದ್ದು, ಅವರ ಪ್ರತಿಸ್ವರ್ಧಿ ಟಿ.ಎನ್.ರಾಜಗೋಪಾಲ್ 84ಮತ ಪಡೆದು ಸೋತಿದ್ದಾರೆ. ಇಲ್ಲಿ ಒಟ್ಟು 198 ಮತ ಚಲಾಣೆಯಾಗಿದ್ದಿಮ 1 ಮತ ತಿರಸ್ಕಗೊಂಡಿದೆ.
ಬಾಗೇಪಲ್ಲಿ ಕ್ಷೇತ್ರ
ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್‍ನ ಮಂಜುನಾಥರೆಡ್ಡಿ 40 ಮತ ಪಡೆದು ವಿಜಯಿಯಾಗಿದ್ದು, ಪ್ರತಿಸ್ವರ್ಧಿ ಜಿ.ಎಸ್.ಚೌಡರೆಡ್ಡಿ 17 ಮತ ಪಡೆದು ಸೋಲುಂಡಿದ್ದಾರೆ ಇಲ್ಲಿ 57 ಮತ ಚಲಾವಣೆಯಾಗಿತ್ತು.
ಮಹಿಳಾ ಮೀಸಲು ಕ್ಷೇತ್ರ
ಕೋಲಾರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕಾಂತಮ್ಮ ಆರ್ 23 ಮತ ಪಡೆದು ವಿಜಯಿಯಾಗಿದ್ದು, ಪ್ರತಿಸ್ವರ್ಧಿ ಪ್ರಭಾವತಿ ಎಸ್ 22 ಮತ ಪಡೆದು ಸೋಲುಂಡರೆ ಮತ್ತೊಬ್ಬ ಅಭ್ಯರ್ಥಿ ರತ್ನಮ್ಮ 5 ಹಾಗೂ ಶಾಂತಮ್ಮ ಶೂನ್ಯಮತ ಪಡೆದರು.
ಇಡೀ 9 ಕ್ಷೇತ್ರಗಳಿಗೆ ಒಟ್ಟು ಚಲಾವಣೆಯ ಮತಗಳು 1,312 ಮತ್ತು 7 ಮತಗಳು ತಿರಸ್ಕತಗೊಂಡಿವೆ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶ್ರೀನಿವಾಸಪುರದ ಅಭ್ಯರ್ಥಿಯ ಹನುಮೇಶ್ ಅವರನ್ನು ಗೆಲ್ಲಿಸಲು ಸ್ವತಃ ಸ್ಪೀಕರ್ ರಮೇಶ್ ಕುಮಾರ್ ಅಖಾಡಕ್ಕೆ ಇಳಿದು ಕಾರ್ಯತಂತ್ರ ರೂಪಿಸಿ ಗೆಲ್ಲಿಸಿಕೊಂಡಿರುವುದು, ಅವರ ರಾಜಕೀಯ ಬದ್ದತೆಗೆ ಸಾಕ್ಷಿ

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!