K.C ವ್ಯಾಲಿ ಯೋಜನೆಯಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡುವರ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಿ DC ಖಡಕ್ ವಾರ್ನಿಂಗ್

ಜಿಲ್ಲಾಧಿಕಾರಿ ಜೆ.ಮಂಜುನಾಥ್‌

ಕೋಲಾರ: ಕೆಸಿವ್ಯಾಲಿ ನೀರು ಹರಿಯುತ್ತಿರುವ ರಾಜಕಾಲುವೆಯಲ್ಲೂ ಅಕ್ರಮವಾಗಿ ಪಂಪು ಮೋಟಾರು ಇಟ್ಟು ನೀರು ಎತ್ತುವ ಕೆಲಸ ಮಾಡುತ್ತಿರುತ್ತಾರೆ. ಕೂಡಲೇ ಅದನ್ನು ಜಪ್ತಿ ಮಾಡಿ ದೂರು ದಾಖಲಿಸಿ ಎಂದು ಡಿಸಿ ಜೆ.ಮಂಜುನಾಥ್‌ ಖಡಕ್ಕಾಗಿ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆ.ಸಿ ವ್ಯಾಲಿ ಯೋಜನೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಅವರು ಕೆ.ಸಿ ವ್ಯಾಲಿ ನೀರು ಹರಿಯುವ ಕಾಲುವೆಗಳ ಪಕ್ಕದಲ್ಲಿ ಕೆಲ ರೈತರು ಸಣ್ಣ ಪ್ರಮಾಣದ ಕಾಲುವೆಗಳನ್ನು ತೆಗೆದುಕೊಂಡು ನೀರು ಹರಿಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಯಾವುದೇ ಸಂದಾನಕ್ಕೆ ಹೋಗದೇ ನೇರವಾಗಿ ನೋಟಿಸ್‌ ಕೊಟ್ಟು ಕಾನೂನು ರಿತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ನರಸಾಪುರ ಭಾಗದಲ್ಲಿ ಕೆಲ ಕೆರೆಗಳಿಗೆ ನೀರು ಹರಿದಿದೆ. ಅಕ್ಕಪಕ್ಕದ ರೈತರು ನೇರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಸಣ್ಣ ನೀರಾವರಿ ಅಥವಾ ಗುತ್ತಿಗೆದಾರರು ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು, ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ, ಕೆಲವರಿಗೆ ಮಾತಿನಲ್ಲಿ ಹೇಳಿದರೆ ಕೇಳೊದಿಲ್ಲ. ನಿರ್ದಾಕ್ಷ ಣ್ಯವಾಗಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಕೆಸಿ ವ್ಯಾಲಿ ಯೋಜನೆ ಅನುಷ್ಠಾನಕ್ಕೆ 1300 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗಳಿಗೆ ನೀರು ಹರಿಸಿದರೆ ಮಾತ್ರಕ್ಕೆ ಕೆಲಸ ಮುಗಿತು ಅಂತ ಭಾವಿಸಬಾರದು. ಹಳ್ಳಿಗಳಲ್ಲಿ ರಸ್ತೆ ಪಕ್ಕದಲ್ಲೇ ರಾಜಕಾಲುವೆ ಹರಿದು ಹೋಗಿದ್ದು, ಮುಂಜಾಗ್ರತಾ ಕ್ರಮವಾಗಿ ಸುರಕ್ಷ ತಾ ಕ್ರಮವಹಿಸಿಲ್ಲ. ಇದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ಎಇಇ ವಿರುದ್ಧ ಡಿಸಿ ಕಿಡಿ: ಸಣ್ಣ ನೀರಾವರಿ ಇಲಾಖೆಯ ಎಇಇ ಕೇಂದ್ರ ಸ್ಥಾನದಲ್ಲಿ ಲಭ್ಯ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮಂತ್ರಿಗಳು ಬಂದಾಗಲೂ ಸಭೆಗಳಿಗೆ ಬರುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಹ ಸಿಗುವುದಿಲ್ಲ. ಇಲಾಖೆ ಪ್ರಗತಿ ನೋಡಿದರೆ ಏನು ಇರುವುದಿಲ್ಲ. ಮಳೆಗಾಲದಲ್ಲೂ ಅವರು ಬೆಂಗಳೂರಿನಲ್ಲಿ ಯಾವ ಕೆರೆ ಅಭಿವೃದ್ಧಿಪಡಿಸಲು ಹೋಗುತ್ತಾರೆ.

ಸರಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಕ್ರಮಗಳು ಇಲ್ಲವೇನು. ಎಇಇ ಕೋಲಾಕ್ಕೆ ಬಂದಾಗ ನನ್ನನ್ನು ಭೇಟಿ ಮಾಡಕ್ಕೇಳಿ ಎಂದು ಸಣ್ಣ ನೀರಾವರಿ ಇಲಾಖೆ ಕಿರಿಯ ಎಂಜನಿಯರ್‌ಗೆ ಸೂಚಿಸಿದರು. ಯಾವುದೇ ಯೋಜನೆ ಅನುಷ್ಠಾನಗೊಳಿಸಬೇಕಾದರೆ ಮುಂದಾಲೋಚನೆ ಇರಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಳೆ ನೀರು ಹರಿಯುವಷ್ಟು ಸಾಮರ್ಥ್ಯ‌ ಇರುವ ರಾಜಕಾಲುವೆ ಎಲ್ಲೂ ಇಲ್ಲ. ಪ್ರಕ್ರ‍್ತಿತಿಯಲ್ಲಿ ಹೇಳಿ ಮಳೆ ಬರುತ್ತದೇನು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಹದಂತಹ ಮಳೆ ಬಂದಾಗ ಕೆ.ಸಿ.ವ್ಯಾಲಿ ಯೋಜನೆಯಿಂದ ಯಾವುದೇ ಪ್ರಾಣಹಾನಿ ಆಗದಂತೆ ಎಚ್ಚರಿಕೆಯಿಂದ ಈ ಯೋಚನೆ ರೂಪಿಸಬೇಕು. ನರಸಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಎಂಜನಿಯರ್‌ಗಳು ಗುತ್ತಿಗೆದಾರರಿಂದ ಮಾಡಿಸಬೇಕು ಎಂದು ಹೇಳಿದರು. ಯೋಜನೆಯಿಂದ ದಿನಕ್ಕೆ 252 ಎಂಎಲ್‌ಡಿ ನೀರು ಹರಿಯುತ್ತಿದೆ. ಅದರಲ್ಲಿ ಯಾವುದೇ ಅನುಮಾನಬೇಡ. ಮುಂದೆ ಆಗುವ ಅನಾಹುತಗಳು ಸಂಭವಿಸದಂತೆ ಎಚ್ಚರವಹಿಸಬೇಕು. ನೀರು ತುಂಬಿರುವ ಕೆರೆಗಳಲ್ಲಿ ಮೀನುಗಾರಿಕೆ ಉದ್ಯಮವಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಅನುಮತಿ ನೀಡಿದವರು ಯಾರು. ಆಯಾ ವ್ಯಾಪ್ತಿಯ ಪಂಚಾಯಿತಿ ಅಧಿಕಾರಿಗಳು ಮೀನುಗಾರಿಕೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ರಾಜ ಕಾಲುವೆಗಳು ಹಿಂದೆ ಎಷ್ಟು ಅಗಲ ಇತ್ತು, ಈಗ ಎಷ್ಟಿವೆ ಎಂಬುದರ ಬಗ್ಗೆ ಕಂದಾಯ, ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎರಡು ದಿನದಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!