ಪದವಿ ವಿದ್ಯಾರ್ಥಿನಿ ಮಾಲೂರು ಪುರಸಭೆ ಸದಸ್ಯೆ

ಕೋಲಾರ ಜಿಲ್ಲೆಯ ಮಾಲೂರು ಪುರಸಭೆಗೆ 19ರ ಹರೆಯದ ಪದವಿ ಒದುತ್ತಿರುವ ವಿದ್ಯಾರ್ಥಿನಿ ಚುನಾಯಿತರಾಗಿದ್ದಾರೆ ಬಿಜೆಪಿ ಸದಸ್ಯೆಯಾಗಿ ಆಯ್ಕೆಯಾಗಿರುವ ಪಿ.ಸುಮಿತ್ರ.
ಮಾಲೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ 2 ನೆ ವರ್ಷದ ಕಲಾ ಪದವಿಯಲ್ಲಿ ವ್ಯಾಸಂಗ. ಮಾಡುತ್ತಿದ್ದು ಮಾಲೂರು ಪಟ್ಟಣದ ವಾರ್ಡ್ ನಂಬರ್ 27 ರಲ್ಲಿ ಸ್ಪರ್ಧಿಸಿದ್ದ ಸುಮಿತ್ರಾ ಪ್ರತಿಸ್ಪರ್ಧಿ ಕಾಂಗ್ರೆಸ್ ಗಾಯಿತ್ರಿ ಅವರ ವಿರುದ್ದ 121 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಸುಮಿತ್ರಾ ತಂದೆ ಪಚ್ಚಪ್ಪ ಇಟ್ಟಿಗೆ ಫ್ಯಾಕ್ಟ್ರಿ ಉದ್ಯಮಿ ಹಾಗು ಸಕ್ರಿಯ ರಾಜಕಾರಣದಲ್ಲಿ ಇದ್ದು ಇದೆ ವಾರ್ಡನಲ್ಲಿ ಕಳೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆದ ಬೆಳವಣಿಗೆಯಲ್ಲಿ ಬಿಜೆಪಿ ಸೇರಿರುವ ಅವರು ತಮ್ಮ ಮಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿರುತ್ತಾರೆ.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!