ಕೋಲಾರದಲ್ಲಿ ಲೋಕಸಭೆ ಮತ ಎಣಿಕೆಗೆ ಸಕಲ ಸಿದ್ದತೆ ಜಿಲ್ಲಾಧಿಕಾರಿ ಮಂಜುನಾಥ್.

ಇಡಿ ದೇಶವೆ ಎದರು ನೋಡುತ್ತಿರುವ ಲೋಕಸಭೆ ಚುನಾವಣೆ ಫಲಿತಾಂಶದ ಮತ ಎಣಿಕೆಗೆ ಕೆಲವೆ ಗಂಟೆಗಳು ಬಾಕಿ ಇದೆ.

ಕೋಲಾರ ನಗರದ ಸರಕಾರಿ ಬಾಲಕರ ಕಾಲೇಜು

ಕೋಲಾರದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ನೀಡಲು ಎಲ್ಲಾ ರಿತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿಗೆ ಕೋಲಾರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿರುತ್ತಾರೆ.
ಕೋಲಾರ ನಗರದ ಸರಕಾರಿ ಬಾಲಕರ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸುಮಾರು 700 ಮಂದಿ ಸಿಬ್ಬಂದಿಗಳನ್ನು ಕಾರ್ಯದಲ್ಲಿ ತೋದಗಿಸಿಕೊಳ್ಳುವುದಾಗಿ ಈ ಪೈಕಿ 500 ಅಧಿಕಾರಿಗಳು, 200 ಮಂದಿ ಸಹಾಯಕರು ಹಾಗೂ ಬ್ಂಧೋಬಸ್ಥಿಗಾಗಿ 1,000 ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಎಜೆಂಟರು 600 ಮಂದಿ ಇರುತ್ತಾರೆ. ಚುನಾವಣಾ ಗುರುತಿನ ಚೀಟಿ ಹೊಂದಿರುವವರು ಮಾತ್ರ ಕೊಠಡಿಯೊಳಗೆ ಪ್ರವೇಶಿಸಬೇಕು, ಬೇರೆಯವರಿಗೆ ಅವಕಾಶ ಇರುವುದಿಲ್ಲ.
ಅಧಿಕಾರಿಗಳು, ಸಿಬ್ಬಂದಿ ಮೇ 23ರಂದು ಬೆಳಗ್ಗೆ 6ಕ್ಕೆ ಹಾಜರಿರಲು ಸೂಚಿಸಲಾಗಿದೆ. ಬೆಳಗ್ಗೆ 7.30ಕ್ಕೆ ಚುನಾವಣಾ ವೀಕ್ಷ ಕರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು ಎಂದು ಹೇಳಿದರು. 8 ವಿಧಾನಸಭಾ ಕ್ಷೇತ್ರಗಳ 2100 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಅಂದು ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳಿಂದ ಮತಯಂತ್ರಗಳನ್ನು ಹೊರ ತೆಗೆದು, 8 ಗಂಟೆಗೆ ಪೋಸ್ಟಲ್‌ ಬ್ಯಾಲೆಟ್‌ಗಳನ್ನು ಎಣಿಕೆ ಮಾಡಲಾಗುವುದು. ಆ ನಂತರ 8.30ಕ್ಕೆ ಪ್ರಥಮ ಸುತ್ತು ಮತ ಎಣಿಕೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಕ್ಷೇತ್ರಕ್ಕೆ ತಲಾ 12 ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ,ಮುಳಬಾಗಿಲು,ಮಾಲೂರು,ಕೆಜಿಎಫ್‌, ಕೋಲಾರ ಕ್ಷೇತ್ರಗಳಿಗೆ ತಲಾ 14 ಟೆಬಲ್‌ಗಳಲ್ಲಿ ಎಣಿಕೆ ನಡೆಯಲಿದ್ದು, ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೂ ಇಬ್ಬರು ವೀಕ್ಷಕರನ್ನು ನೇಮಿಸಲಾಗಿದೆ ಎಂದರು.
5-6 ಗಂಟೆ ಸಮಯ ಬೇಕಾಗುತ್ತದೆ ಎಂದ ಅವರು ಮತ ಎಣಿಕೆ ನಿರ್ವಹಿಸಲು ಪ್ರತಿ ಟೇಬಲ್‌ಗೂ ಒಬ್ಬರು ಮೇಲ್ವಿಚಾಕರ, ಒರ್ವ ಎಣಿಕಾ ಸಹಾಯಕನನ್ನು ನೇಮಿಸಲಾಗಿದೆ. ಎಜೆಂಟರು ಮತ ಎಣಿಕಾ ಕೊಠಡಿಯೊಳಗೆ ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದ್ದು,ಈಗಾಗಲೇ 4 ಮಂದಿ ಕೌಂಟಿಂಗ್‌ ವೀಕ್ಷ ಕರು ಚುನಾವಣಾ ಆಯೋಗದಿಂದ ನೇಮಕಗೊಂಡಿದ್ದಾರೆ. ಪ್ರತಿ ಎಣಿಕಾ ಕೇಂದ್ರದಲ್ಲಿಯೂ ಕಂಪ್ಯೂಟರ್‌ ವ್ಯವಸ್ಥೆಯು ಕಲ್ಪಿಸಲಾಗಿದೆ. ಪಾಸ್‌ಗಳಿದ್ದವರು ಮಾತ್ರವೇ ಎಣಿಕಾ ಕೇಂದ್ರದೊಳಗೆ ಪ್ರವೇಶಿಸಬಹುದಾಗಿದ್ದು, 100 ಮೀಟರ್‌ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಎಣಿಕಾ ನಡೆಸುವ ಅಧಿಕಾರಿಗಳು ಹಾಗೂ ಎಜೆಂಟರು ಮತದಾನದ ರಹಸ್ಯ ಕಾಪಾಡಬೇಕು. ರಹಸ್ಯ ಬಯಲುಗೊಳಿಸಿದರೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು. ಪ್ರತಿ ವಿಧಾನಸಭೆ ಕ್ಷೇತ್ರದ ಇವಿಎಂ ಜತೆಗೆ ತಲಾ 1 ವಿವಿ ಪ್ಯಾಟ್‌ ಎಣಿಕೆಯೂ ನಡೆಯುತ್ತದೆ. 17 ರಿಂದ 23 ಸುತ್ತು ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನ ಎಣಿಕೆ ವಿವರ ಘೋಷಿಸಲಾಗುವುದು ಎಂದರು
ಪ್ರತಿ ಸುತ್ತು ಎಣಿಕೆ ಮುಗಿದಾಗ ದ್ವನಿವರ್ಧಕದ ಮೂಲಕ ಆಯಾಸುತ್ತಿನ ಎಣಿಕೆ ವಿವರ ತಿಳಿಸಲಾಗುವುದು ಎಂದರು. ಮಧ್ಯಾನಃದ ಹೋತ್ತಿಗೆ ಬಹುತೇಕ ಫಲಿತಾಂಶ ನೀರಿಕ್ಷಿಸಬಹುದಾಗಿರುತ್ತದೆ.
ಬಿಗಿ ಪೋಲಿಸ್ ಬಂದೋಬಸ್ತ್
ಬಂದೋಬಸ್ತ್‌ಗಾಗಿ ಸೆಂಟ್ರಲ್‌ ಫೋರ್ಸ್‌ನ 30 ಮಂದಿ,ಕೆಎಸ್‌ಆರ್‌ಪಿ 50 ಮಂದಿ ಸೇರಿದಂತೆ ಸ್ಥಳೀಯ 1000 ಮಂದಿ ಪೊಲೀಸರನ್ನು ನಿಯೋಜಿಸಲಾಗಿರುವುದಾಗಿ ತಿಳಿಸಿದರು.

ಬಹುಶಃ ಮೇ23 ಯಾವತ್ತು ಬರುತ್ತದೋ ಎಂದು ಇಡಿ ದೇಶ ಎದರು ನೋಡುತ್ತಿತ್ತು, ಆ ದಿನ ಪ್ರಾರಂಭವಾಗಲು ಕೆಲವೆ ಗಂಟೆಗಳು ಬಾಕಿ ಉಳದಿದೆ. ಉಹೆಗೂ ನಿಲುಕದ ಹಲವಾರು ಸಂಶಯಗಳು ಪ್ರಶ್ನೆಗಳು ಮತದಾರನ ತಲೆ ತಿನ್ನುತ್ತಿದೆ ಈ ಎಲ್ಲಾ ಕಾರಣಗಳಿಗೂ ಅಂತ್ಯ ಹುಡುಕುವ ಮತದಾರ ಫಲಿತಾಂಶದ ಅಂದಾಜು ಸಿಗುವರಿಗೂ ಅಂದರೆ ಬಹುತೇಕ ಮಧ್ಯಾನಃ ವರಿಗೂ ಬಹುತೇಕರು ಟಿ.ವಿ ಮುಂದೆ ಆಸಿನರಾಗಿವ ಹಿನ್ನಲೆಯಲ್ಲಿ ದೇಶದಲ್ಲಿ ಮಾರುಕಟ್ಟೆಗಳಲ್ಲಿ ಜನ ಸಂದಣಿ ಇರುವುದಿಲ್ಲ!

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!