ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಮನೆ ಮೇಲೆ ಡ್ರೋಣ್ ಹಾರಟ ಅನುಮಾನಕ್ಕೆ ಅನವು?

ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯ ಉಂಡವಳ್ಳಿಯಲ್ಲಿ ಕೃಷ್ಣ ನದಿಯ ದಡದಲ್ಲಿರುವ ತಮ್ಮ ಮನೆಯ ಮೇಲೆ ಮೇಲೆ ಡ್ರೋನ್‌ಗಳನ್ನು ಹಾರಟ ಮಾಡಿರುವ ಬಗ್ಗೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಆಂಧ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ.
ದ್ರೋನ್ ಮೂಲಕ ದೃಶ್ಯಗಳನ್ನು ಸೆರೆಹಿಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ವ್ಯಕ್ತಿಗಳು ಆಕ್ರಮಣ ಮಾಡುವ ದುರುದ್ದೇಶಪೂರಿತ ಉದ್ದೇಶವನ್ನು ಹೊಂದಿರಬಹುದು ಎಂದು ತೆಲಗುದೆಶಂ ಮುಖಂಡರು ಆರೋಪಿಸಿದ್ದಾರೆ.ಈ ಸಂಭಂಧ ಟಿಡಿಪಿ ಕಾರ್ಯಕರ್ತರು ನಾಯ್ಡು ನಿವಾಸದ ಬಳಿ ಆಂಧ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿರುತ್ತಾರೆ.

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಮರಾವತಿ ನಿವಾಸದ ಮೇಲೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಡ್ರೋನ್ ಕ್ಯಾಮರಾ ಅಳವಡಿಸಿದ್ದಾರೆ ಈ ಡ್ರೋನ್ ಕ್ಯಾಮರಾ ಮೂಲಕ ತೆಲುಗು ದೇಶಂ ಪಕ್ಷದ ಮುಖ್ಯಸ್ಥನ ನಿವಾಸಕ್ಕೆ ಯಾರು ಬಂದೋಗುತ್ತಿದ್ದಾರೆ? ಎಂಬುದನ್ನು ಸರ್ಕಾರ ಕ್ಯಾಮರಾದಲ್ಲಿ ಚಿತ್ರೀಕರಿಸುತ್ತಿದೆ ಎಂದು ಟಿಡಿಪಿ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ. ಈ ಮಧ್ಯೆ ತನ್ನ ನಿವಾಸದ ಸುತ್ತ ಡ್ರೋನ್ ಅಳವಡಿಸಿದ್ದಕ್ಕೆ ಆಕ್ರೋಶಗೊಂಡ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರೇ ಖುದ್ದು, ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿಪಿ) ಫೋನ್ ಮಾಡಿ ಏನು ನಡೆಯುತ್ತಿದೆ ಎಂದು ವಿಚಾರಿಸಿದ್ದಾರೆ. ಈ ವಿಚಾರವೂ ಸದ್ಯವೀಗ ಆಂಧ್ರಪ್ರದೇಶ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಬೆನ್ನಲ್ಲೇ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ನೀರಾವರಿ ಸಚಿವ ಮಂತ್ರಿ ಅನಿಲ್ ಕುಮಾರ್ ವಿವರಣೆ ನೀಡಿ, ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಕೃಷ್ಣಾ ನದಿಯ ಸಮೀಪ ಇರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಲಿದೆ ಇದಕ್ಕಾಗಿ ಇದನೆಲ್ಲದರ ಮಾಹಿತಿ ಪಡೆಯಲು ನಾವು ಚಂದ್ರಬಾಬು ನಾಯ್ಡು ಮನೆ ಮೇಲೆ ಡ್ರೋನ್ ಕ್ಯಾಮರಾ ಅಳವಡಿಸಬೇಕಾಗಿ ಬಂತು ಎಂದು ಸ್ಪಷ್ಟನೆ ನೀಡಿರುತ್ತಾರೆ.

ಚಂದ್ರಬಾಬು ಆರೋಪ .
ತಮ್ಮ ನಿವಾಸದ ಮೇಲೆ ಡ್ರೋನ್‌ ಕ್ಯಾಮರಾಗಳ ಹಾರಿಸುವ ಮೂಲಕ ನಮ್ಮ ಕಾರ್ಯಚರಣೆ ಬಗ್ಗೆ ಹಾಗು ನಮಗೆ ಒದಗಿಸಿರುವಂತ ಭದ್ರತೆಯನ್ನು ಸರ್ಕಾರ ವಿಕ್ಷಿಸುತ್ತಿದೆ ಎಂದು ಆಂಧ್ರ ಮಾಜಿ ಸಿಎಂ ಪ್ರತಿಪಕ್ಷ ನಾಯಕ ಚಂದ್ರಬಾಬು ಆರೋಪಿಸಿದ್ದಾರೆ. ಈ ಎಲ್ಲಾ ಪಿತೂರಿಯ ಹಿಂದೆ ಯಾರಿದ್ದಾರೆಂದು ತಿಳಿಯಬೇಕೆಂದು ಅವರು ಒತ್ತಾಯಿಸಿರುತ್ತಾರೆ. ಭದ್ರತೆ ಇದ್ದರು ನಮ್ಮ ನಿವಾಸದ ಸುತ್ತಲು ಡ್ರೋನ್‌ಗಳು ಹಾರಾಟ ನಡೆಸುತ್ತಿರುವ ಬಗ್ಗೆ ಅವರು ಡಿಜಿಪಿ ಗೌತಮ್ ಸಾವಂಗ್ ಮತ್ತು ಗುಂಟೂರು ಎಸ್‌ಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಗ್ರಹಿಸಿರುತ್ತಾರೆ. ಡಿಜಿಪಿ ಮತ್ತು ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಹೀಗೆ ಡ್ರೋನ್‌ಗಳು ಹಾರಾಡಲು ಸಾಧ್ಯವಿಲ್ಲ. ಡ್ರೋನ್‌ಗಳನ್ನು ಹಾರಿಸುವಂತ ಜನರು ಯಾರು? ಅವರಿಗೆ ಯಾರು ಅನುಮತಿ ನೀಡಿದ್ದಾರೆ? ಹೆಚ್ಚಿನ ಭದ್ರತಾ ವಲಯದೊಂದಿಗೆ ಆಡುತ್ತೀರಾ? ಹಾರುವ ಡ್ರೋನ್‌ಗಳಲ್ಲಿ ಸಿಕ್ಕಿಬಿದ್ದವರು ಯಾರು, ಮತ್ತು ಅವುಗಳನ್ನು ಕಣ್ಗಾವಲು ಹಾಕಿಕೊಂಡವರು, ಪಿತೂರಿಯ ಹಿಂದಿನ ಸೂತ್ರದಾರ ಯಾರು ಈ ತಕ್ಷಣವೇ ಮಾಹಿತಿ ಪಡೆಯುವಂತೆ ಪೋಳಿಸರನ್ನು ಒತ್ತಾಯಿಸಿರುತ್ತಾರೆ. ನಂತರ ಅವರು ಟಿಡಿಪಿ ಪೊಲಿಟ್‌ಬ್ಯುರೊ ಸದಸ್ಯರು, ಸಂಸದರು ಮತ್ತು ಇತರ ಮುಖಂಡರೊಂದಿಗೆ ದೂರಸಂಪರ್ಕದಲ್ಲಿ ಮಾತನಾಡಿದರು.
ಪ್ರವಾಹ ನಿಯಂತ್ರಿಸಲು ವಿಫಲವಾಗಿರುವ ಆಂಧ್ರ ಸರ್ಕಾರ
ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಜಗನ್ ಸರ್ಕಾರ ಶೋಚನೀಯವಾಗಿ ವಿಫಲವಾಗಿದೆ. ನೀರನ್ನು ತಡೆಯಲು ದೋಣಿಗಳು ಗೇಟ್‌ಗಳನ್ನು ನಿರ್ಬಂಧಿಸಿದ್ದೀರಾ ಎಂದು ಪ್ರಶ್ನಿಸಿರುವ ಅವರು ಅನಿಯಮಿತ ಪ್ರವಾಹ ನಿರ್ವಹಣೆಯನ್ನು ತಡೆಯಲು ವಿಫಲವಾಗಿರುವ ಮುಖ್ಯಮಂತ್ರಿ ಜಗನ್ ಪ್ರವಾಹ ನಿರ್ವಹಣೆಯ ಬಗ್ಗೆ ಸಮೀಕ್ಷೆ ಮಾಡಿದ್ದಾರ? ಈ ಮೊದಲು 3 ಲಕ್ಷ ಕ್ಯೂಸೆಕ್‌ಗಳನ್ನು ಬಿಟ್ಟಿದ್ದರೆ ಇವತ್ತು ಸಮಸ್ಯೆಯಾಗುತ್ತಿರಲಿಲ್ಲ ನನ್ನ ಮೇಲಿನ ದ್ವೇಷಕ್ಕಾಗಿ ಪ್ರವಾಹದೊಂದಿಗೆ ಹುಡುಗಾಟ ಆಡುತ್ತಿದ್ದಾರೆ ಇದರಿಂದ ಜನರು ಪ್ರವಾಹಕ್ಕೆ ಸಿಲುಕುತ್ತಾರೆ ಜನರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ತಮ್ಮ ಬದ್ರತೆ ವಿಚಾರದಲ್ಲೂ ಸರ್ಕಾರದ ನಿರ್ಲಿಪ್ತ ಧೋರಣೆ ಇದೆ ನನ್ನ ಭದ್ರತೆಗೆ ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಲಾಗಿದೆ ಆದರೂ ಸರ್ಕಾರದ ನಿರ್ಲಕ್ಷ್ಯತೆ ಹಾಗೆ ಇದೆ.ದ್ರೋಣ್ ವಿಚಾರದಲ್ಲೂ ಮತ್ತೋಮ್ಮೆ ಸಾಬಿತಾಗಿದೆ.ಮುಖ್ಯಮಂತ್ರಿ ಜಗನ್ ಮನೆಯಲ್ಲಿರುವ ಕಿರಣ್ ಎನ್ನುವ ವ್ಯಕ್ತಿ ಸೂಚನೆಯಂತೆ ದ್ರೋಣ್ ವಿದ್ಯಮಾನ್ಯಗಳು ನಡೆದಿರುತ್ತದೆ ಇದೆಲ್ಲವನ್ನು ನಿರ್ವಹಿಸಿದ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ತಪ್ಪೋಪ್ಪಿಕೊಂಡಿರುತ್ತಾರೆ.ಎಂದು ಚಂದ್ರಬಾಬು ಹೇಳಿರುತ್ತಾರೆ.

ವರದಿ ಸಂಗ್ರಹ :-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!