ಮಾಲೂರಿಗೆ ಮತ್ತೆ ಬಂದ ಆನೆಗಳು

ಕಾಡನೆಗಳ ಹಿಂಡು

ಮಾಲೂರಿನಲ್ಲಿ ಮತ್ತೆ ಐದು ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಮಾಲೂರು ಪಟ್ಟಣಕ್ಕೆ ಹೆಚ್ಚಿನ ದೂರ ಇಲ್ಲದ ಗ್ರಾಮಗಳಾದ ಕಾಟೇರಿ ಸೊಣ್ಣಹಳ್ಳಿ ಹಾಗೂ ಅರಳೇರಿ ಗ್ರಾಮದ ಕಾಡಿನ ಬಳಿ ಭಾನುವಾರ ಮುಂಜಾನೆ ಕಾಡನೆಗಳ ಹಿಂಡು ಪ್ರತ್ಯಕ್ಷ.ವಾಗಿವೆ. ಅರಳೇರಿ ಗ್ರಾಮದ ಬಳಿ ಟೊಮೆಟೋ ಬೆಳೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ನಾಶಮಾಡಿರುವ ಆನೆ ಹಿಂಡು ಸುತ್ತಮುತ್ತಲು ದಾಂದಲೆ ಏಬ್ಬಿಸಿವೆ.ಇದರಿಂದ ಭಯಬಿತರಾಗಿರುವ ಗ್ರಾಮಗಳ ಜನತೆ ಆತಂಕ ಗೊಂಡಿರುತ್ತಾರೆ. ಮುಂಜಾನೆಯೆ ಆನೆಗಳ ದಾಂದಲೆ ಬಗ್ಗೆ ಗ್ರಾಮಸ್ಥರು ಅರಣ್ಯಾದಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರು ಸಮಯಕ್ಕೆ ಅಧಿಕಾರಿಗಳು ಬಾರದೆ ಹೋಗಿರುವುದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

Don`t copy text!