ಸತ್ತರೂ ವಿಷ್ಣು ಮೇಲಿನ ಅಭಿಮಾನ ಬಿಡದ ಅಭಿಮಾನಿ

ವಿಷ್ಣು ಸೇನಾ ಸಮಿತಿಯ ಯಮಲೂರು ಅಧ್ಯಕ್ಷ ರಮೇಶ್ ತಾನು ಸತ್ತರೂ ಅಭಿಮಾನವನ್ನು ಜೊತೆಗಿಟ್ಟುಕೊಂಡು ಹೋಗಿ ತನ್ನ ಸಮಾಧಿ ಕಟ್ಟೆಗೆ ತನ್ನ ಅಭಿಮಾನದ ನಟ ವಿಷ್ಣುವರ್ಧನ್ ಭಾವಚಿತ್ರ ಜೊತೆ ತನ್ನ ಫ್ಫೋಟೋ ಹಾಕಿರುವುದು ಈಗ ದೊಡ್ಡದಾಗಿ ವೈರಲ್ ಆಗಿದೆ.

ನಟ ನಟಿಯರಿಗೆ ಅಭಿಮಾನಿಗಳು ಇರುವುದು ಸಾಮನ್ಯ ನಟರ ಚಿತ್ರ ಬಿಡುಗಡೆಯಾದಾಗ ಭಾವಚಿತ್ರಕ್ಕೆ ಹೂಮಾಲೆ ಹಾಕುವುದು ಸಿನಿಮಾದಲ್ಲಿ ನಟ ಹಾಕಿರುವ ಡ್ರೆಸ್ ಹಾಕುವುದು ಅವರ ಶೈಲಿ ಅನುಕರಿಸುವುದು ಅನಕೂಲವಾದರೆ ಒಂದಷ್ಟು ಜನಕ್ಕೆ ಊಟ ಹಾಕಿಸುವುದು ಅವರ ಹೆಸರಲ್ಲಿ ಸಮಾಜ ಸೇವೆ ಮಾಡುವುದು,ರಸ್ತೆ ಅಥವಾ ಮನೆಗೆ ಅವರ ಹೆಸರು ಇಡುವುದು,ಮಕ್ಕಳಿಗೆ ನಟರ ಹೆಸರಿಡುವುದು ಅವರ ಹೆಸರಲ್ಲಿ ಬಡಮಕ್ಕಳಿಗೆ ನೆರವು ಕೊಡುವಂತಹದು ಹೀಗೆ ಅನೇಕ ರೀತಿಯ ಅಭಿಮಾನ ನೋಡಿರುತ್ತೇವೆ ಕೇಳಿರುತ್ತೇವೆ ಹೀಗೆ ನಾನಾ ರೀತಿಯ ಪ್ರೀತಿ ಅಭಿಮಾನ ಇದೆಲ್ಲವು ಸಾಮಾನ್ಯ ಆದರೆ ಇಲ್ಲೊಬ್ಬ ಅಭಿಮಾನಿ ಮಾತ್ರ ಕೋಟಿಗೊಬ್ಬ.ಸಾಯೋ ತನಕ ಮಾತ್ರವಲ್ಲ ಸತ್ತ ಮೇಲೂ ತಾನು ಮೆಚ್ಚಿದ ಹೀರೋ ನನ್ನ ಜೊತೆಗಿರಬೇಕು ಅಂತ ಬಯಸೋ ಅಭಿಮಾನಿಗಳಿರೋದು ಬಹುಶಃ ಭಾರತದ ಇನ್ಯಾವುದೇ ನಟನಿಗೆ ಸಿಗದ ಅಭಿಮಾನಿ ಖ್ಯಾತ ನಟ ದಿವಂಗತ ಡಾ.ವಿಷ್ಣುವರ್ಧನ ಅವರಿಗೆ ಸಿಕ್ಕಿರುತ್ತಾನೆ .

ಯಮಲೂರು ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿದ್ದಂತಹ ಶ್ರೀ ರಮೇಶ್ ಅವರು ಸಾಯೋ ಮುಂಚೆ ನನ್ನ ಸಮಾಧಿಗೆ ನೆಡುವ ಗುರುತು ಕಲ್ಲಿನಲ್ಲಿ ಯಜಮಾನ ವಿಷ್ಣು ಫೋಟೋ ಸಹ ಇರಬೇಕು ಅಂತ ಬಯಸಿದ್ದರಂತೆ ಅದರಂತೆ ಅವರ ಕುಟುಂಬದವರು ರಮೇಶ್ ಅವರ ಕೊನೆ ಆಸೆಯನ್ನು ಈಡೇರಿಸಿದ್ದಾರೆ! ಇಂತಹ ಅಭಿಮಾನಕ್ಕೆ ಸಾಟಿಯುಂಟೇ?
ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿದ್ದ ರಮೇಶ್ ನಿಧನರಾಗಿ ಒಂದು ವರ್ಷ ಕಳೆದಿದೆ. ಅವರ ಸಮಾಧಿ ಮೇಲೆ ಅವರ ಭಾವಚಿತ್ರದ ಜೊತೆ ವಿಷ್ಣು ದಾದನ ಭಾವಚಿತ್ರವನ್ನೂ ಹಾಕಲಾಗಿದೆ. ಕುಟುಂಬಸ್ತರು ಹೇಳುವಂತೆ ಇದು ಅವರ ಆಸೆ ಆಗಿತ್ತಂತೆ.ಹಾಗಾಗಿ ರಮೇಶ್ ಸಮಾಧಿಗೆ ಹಾಕಲಾಗಿರುವ ಗ್ರಾನೈಟ್ ಕಲ್ಲಿನಲ್ಲಿ ರಮೇಶ್ ಭಾವಚಿತ್ರದ ಜೋತೆಗೆ ಅತನ ಅಭಿಮಾನದ ನಟ ವಿಷ್ಣು ಫೋಟೊ ಸಹ ಹಾಕಲಾಗಿದೆ.

ಸುದ್ಧಿ ಸಂಗ್ರಹ: ವಿವೇಕ್ ಎಸ್ ಶೆಟ್ಟಿ / ಫೋಟೋ ಕೃಪೆ: ವಿರಕಪುತ್ರಶ್ರೀನಿವಾಸ್

Leave a Reply

Your email address will not be published. Required fields are marked *

Don`t copy text!