ಮೀನು ಸಾಕಾಣಿಕೆ ಹಾಗೂ ಮಾರಾಟಗಾರರಿಗೆ ವಂಚನೆ ಆರೋಪ.

ಕೋಲಾರ: ಮೀನು ಸಾಕಾಣಿಕೆ ಹಾಗೂ ಮಾರಾಟಗಾರರನ್ನು ವಂಚಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಂಡು, ಕೆರೆ ಬಿಡಿಸಿಕೊಡಬೇಕು ಎಂದು ಮೀನು ಮಾರಾಟಗಾರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆಯಲ್ಲಿ ಸುಮಾರು ವರ್ಷಗಳಿಂದ ಮೀನು ಸಾಕಾಣೆ ಮತ್ತು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೆವೆ. ಪಾಲಾರ್ ಮೀನುಗಾರರ ಅಭಿವೃದ್ಧಿ ಮಾರಾಟ ಸಹಕಾರ ಸಂಘ ಸ್ಥಾಪನೆ ಮಾಡಿಕೊಂಡು ಕೆರೆ ಹರಾಜು ಮೂಲಕ ಕೂಗಿಕೊಂಡು ವಹಿವಾಟು ನಡೆಸಲಾಗುತ್ತಿತ್ತು ಎಂದು ಮಾರಾಟಗಾರ ಪಾಪಣ್ಣ ತಿಳಿಸಿದರು.
ಸುಮಾರು ವರ್ಷಗಳಿಂದ ಕೆರೆ ಬತ್ತಿ ಹೋಗಿದ್ದರಿಂದ ಮೀನು ವಾಹಿವಾಟು ಸ್ಥಗಿತಗೊಂಡಿತ್ತು, ಇದರಿಂದ ಸಂಘದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದೆ, ಇದನ್ನು ಪುನರ್ ಸ್ಥಾಪನೆ ಮಾಡಲು ಆರ್ಥಿಕವಾಗಿ ಶಕ್ತಿಯಿಲ್ಲ. ಇದನ್ನು ಪುನರ್ ಸ್ಥಾಪನೆ ಮಾಡಲು ಜಿಲ್ಲಾ ಸಹಕಾರ ನಿಬಂಧಕರು ಆಡಳಿತಾಧಿಕಾರಿಯನ್ನಾಗಿ ವೆಂಕಟೇಶ್‍ಬಾಬುನನ್ನು ನೇಮಕ ಮಾಡಿದ್ದಾರೆ’ ಎಂದರು.
ಸಂಘದಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿರುವುದನ್ನು ಗಮನಿಸಿದ ವೆಂಕಟೇಶ್‍ಬಾಬು ವಿಶೇಷಾಧಿಕಾರಿಯಾಗಿ ಮುಂದುವರೆಯಲು ಅಗುವುದಿಲ್ಲ ಎಂದು ನಿಬಂಧಕರಿಗೆ ಮನವಿ ಸಲ್ಲಿಸಿದ್ದ, ಜಿಂ.ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್ ನಾಯ್ಡು, ಮಹೇಶ್ ಹಾಗೂ ಟೆಂಡರ್‍ದಾರ ಪ್ರಕಾಶ್ ನಾಯ್ಡು ಒತ್ತಡಕ್ಕೆ ಮಣಿದು ಅರ್ಹತೆಯಿಲ್ಲದಿದ್ದರೂ ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಅಸಲಿ ಶೇರುದಾರರನ್ನು ಯಾಮಾರಿಸಿ ನಕಲಿ ಮತದಾರರ ಪಟ್ಟಿ ತಯಾರಿಸಿ ಸಂಘದ ಚುನಾವಣೆ ನಡೆಸಲು ಮುಂದಾಗಿದ್ದರು, ಆನಂತರ ನ್ಯಾಯಾಲಯದ ಮೂಲಕ ಚುನಾವಣೆಯನ್ನು ರದ್ದುಗೊಳಿಸಿತು, ಈಗ ಪ್ರಕಾಶ್ ನಾಯ್ಡು ತನ್ನ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನೆ ಶೇರುದಾರರನ್ನಾಗಿಸಿಕೊಂಡು ಕಸುಬುದಾರರನ್ನು ಮೂಲೆಗುಂಪು ಮಾಡಿದ್ದಾರೆ, ಇದರಿಂದ ಸಂಘವನ್ನು ರದ್ದುಗೊಳಿಸಲಿ ನಾವು ಪಾವತಿಸಿರುವ ಶೇರು ಹಣ ಪಾವಸ್ ಮಾಡಬೇಕು ಎಂದು ಆಗ್ರಹಿಸಿದರು.
ರಾಜಕೀಯ ಪ್ರಭಾವಿ ಮುಖಂಡ ಪ್ರಕಾಶ್ ನಾಯ್ಡು ಕೆರೆಯನ್ನು ?58 ಲಕ್ಷಕ್ಕೆ ಹರಾಜು ಮೂಲಕ ಪಡೆದುಕೊಂಡಿದ್ದಾನೆ. ನಮ್ಮಿಂದ ಮೀನು ಮಾರಾಟ ಮಾಡಿಸಿ ದಿನಗೂಲಿ ಸಹ ಸಮರ್ಪಕವಾಗಿ ಕೊಡುತ್ತಿಲ್ಲ, ಇದರಿಂದ ಜೀವನ ನಡೆಸಲು ಸಮಸ್ಯೆ ಎದುರಾಗಿದೆ, ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ವಿ.ಮಹೇಶ್, ಜಯಪ್ರಕಾಶ್ ನಾಯ್ಡು  ಹಾಗೂ ಟೆಂಡರ್‍ದಾರ ಪ್ರಕಾಶ್ ನಾಯ್ಡು ಅವರೊಂದಿಗೆ ಸಂಘದ ಅಧ್ಯಕ್ಷ ಶರವಣ, ನವೀನ್ ರಾಮ್ ಶಾಮೀಲಾಗಿದ್ದು, ಸಂಘವನ್ನು ಕಾನೂನುಬಾಹಿರವಾಗಿ ಪುನರ್‍ಸ್ಥಾಪನೆ ಮಾಡಲು ಮುಂದಾಗಿದ್ದಾರೆ, ಸಂಘ ಸೂಪರ್‍ಸೀಡ್ ಅಗಲು ಇವರೇ ಕಾರಣರಾಗಿದ್ದು ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸುತ್ತೆವೆ ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಸಂಸದರಾದ ಮಹೇಶ್ ಹಾಗೂ ಜಯಪ್ರಕಾಶ್ ನಾಯ್ಡು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಟವರನ್ನು ವಂಚಿಸಲು ಮುಂದಾಗಿದ್ದಾರೆ, ಸಂಘದ ವಸ್ತವಾಂಶ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಬೈಲಾ ನಿಯಮಗಳನ್ನು ಉಲ್ಲಂಘಿಸಿ ಹೊರ ಊರಿನವರನ್ನೆಲ್ಲಾ ಸಂಘದ ಶೇರುದಾರರನ್ನಾಗಿ ಮಾಡಿಕೊಂಡಿದ್ದು, ಸಂಘ ಸ್ಥಾಪನೆಯಾಗಲು ಕಾರಣರಾದ ಬಡವರನ್ನು ಮೂಲೆಗುಂಪು ಮಾಡಿದ್ದಾರೆ, ಇದರಿಂದ ಸಂಘದ ಶೇರುಗಳನ್ನು ವಾಪಸ್ ಮಾಡಿಸಬೇಕು ಎಂದು ಮನವಿ ಮಾಡಿದರು.
ವೆಂಕಟೇಶಪ್ಪ, ತಿಮ್ಮರಾಯಪ್ಪ, ಭೂವಮ್ಮ, ರತ್ನಮ್ಮ, ಚೆನ್ನಮ್ಮ, ಸರಸಮ್ಮ, ಸಾಲಕ್ಕ, ನಾರಾಯಣಪ್ಪ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Don`t copy text!