ಸರ್ಕಾರಿ ನಿವಾಸ ತೆರವು ಮಾಡಿದ ಮಾಜಿ ಮಂತ್ರಿ ಸುಷ್ಮಾ.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರ ರಾಜಧಾನಿಯ ಸಫ್ದರ್ ಜಂಗ್ ಲೇನ್ ನಲ್ಲಿನ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
“ಸಫ್ದರ್ ಜಂಗ್ ಲೇನ್ ನಲ್ಲಿ ನೀಡಲಾಗಿದ್ದ ಕೇಂದ್ರ ಸಚಿವಾಲಯದ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಹೊರಬಂದಿದ್ದೇನೆ. ಹೀಗಾಗಿ ಈ ಮೊದಲಿನ ನಿವಾಸ ಹಾಗೂ ದೂರವಾಣಿ ಸಂಖ್ಯೆಯಲ್ಲಿ ನಾನು ಲಭ್ಯವಿರುವುದಿಲ್ಲ” ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಹೇಳಿಕೊಂಡಿದ್ದಾರೆ.
ಲೋಕಸಭೆಯಲ್ಲಿ 2009 ಮತ್ತು 2014ರಲ್ಲಿ ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್, ಆರೋಗ್ಯದ ಕಾರಣಗಳಿಗಾಗಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ನಿಯಮದ ಪ್ರಕಾರ ಮಾಜಿ ಸಂಸದರು ಲೋಕಸಭೆ ವಿಸರ್ಜನೆಯಾದ ತಿಂಗಳಲ್ಲಿ ನಿವಾಸವನ್ನು ತೆರವುಗೊಳಿಸಬೇಕಾಗುತ್ತದೆ. 16ನೇ ಲೋಕಸಭೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೇ 25ರಂದು ವಿಸರ್ಜಿಸಿದ್ದರು.

ಅರುಣ್ ಜೇಟ್ಲಿಯವರು ನಿವಾಸ ತೆರವು
ಈ ತಿಂಗಳ ಆರಂಭದಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಯವರೂ ಸಹ ಅಧಿಕೃತ ನಿವಾಸ ತೆರವುಗೊಳಿಸಿ ದಕ್ಷಿಣ ದೆಹಲಿಯ ತಮ್ಮ ಖಾಸಗಿ ಬಂಗಲೆಗೆ ತೆರಳಿದ್ದು. ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ವತಃ ಸಂಪುಟದಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದ ಜೇಟ್ಲಿಯವರು ರಾಜ್ಯಸಭೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಸುದ್ಧಿ ಸಂಗ್ರಹ:-ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!