ಮತದಾರರನ್ನು ನಿರ್ಲಕ್ಷ್ಯ ಮಾಡಬೇಡಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ಬಿಜೆಪಿ ಮುಖಂಡರು ಚುನಾವಣೆ ಎದುರಿಸೋಣ ಎಂಬ ಮಾತು ಆಡುತ್ತಿದ್ದಾರೆ ದೇಶದ ಇತರೆ 4 ರಾಜ್ಯಗಳಲ್ಲಿ ಮುಂದಿನ 4-5 ತಿಂಗಳಲ್ಲಿ ವಿಧಾನ ಸಭೆ ಚುನಾವಣೆ ಬರುವ ಸಂಭವ ಇದ್ದು ಈ ಸಮಯಕ್ಕೆ ನಮ್ಮ ರಾಜ್ಯದಲ್ಲೂ ಸಹ ವಿಧಾನಸಭೆ ಚುನಾವಣೆ ಬರಬಹುದು ಯಾವುದಕ್ಕೂ ನಾವು ಪೂರ್ವ ತಯಾರಿ ಆಗಿರಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ತಮ್ಮ ಕಾರ್ಯಕರ್ತರಿಗೆ ಕರೆ ಇತ್ತರು.

ಶ್ರೀನಿವಾಸಪುರ ಪುರಸಭೆ ಚುನಾವಣೆಯಲ್ಲಿ ಚುನಾಯಿತ ಸದಸ್ಯರಿಗೆ ಅಭಿನಂಧನೆ ಸಲ್ಲಿಸಲು ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಯಾವುದೆ ಸಮಯದಲ್ಲಿ ಚುನಾವಣೆ ಘೋಷಣೆ ಆದರು ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಪಕ್ಷವನ್ನು ಸಂಘಟನೆ ಮಾಡುವುದರ ಮೂಲಕ ಚುನಾವಣೆಯನ್ನು ಎದುರಿಸಲು ಸಿದ್ದರಾಗಬೇಕಾಗಿದೆ ಎಂದು ತಿಳಿಸಿದರು.
ಪುರಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಅಧ್ಯರ್ಯ ಪಡುವ ಅಗತ್ಯ ಇಲ್ಲ ನಿಮ್ಮೊಂದಿಗೆ ನಾನಿರುತ್ತೇನೆ ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಅವಕಾಶಗಳು ಬರುತ್ತದೆ ಎಂದು ಅವರು ಚುವಾವಣೆ ಫಲಿತಾಂಶ ಕುರಿತಾಗಿ ಸೋತ ಹಾಗು ವಿಜೇತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದರು.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 11 ಸ್ಥಾನಗಳು ನೀಡಿರುವ ಮತದಾರರಿಗೆ ಮತ್ತು ಪಟ್ಟಣದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಿ ನಮ್ಮ ನಿರೀಕ್ಷೆಯಂತೆ ಸಿ.ರವಿ, ಪೂಲ ಶಿವಾರೆಡ್ಡಿ, ಜಗದೀಶ್ ಬಾಬು, ಪ್ರಸನ್ನಕುಮಾರ್, ಮತ್ತಿತರರು ಗೆಲ್ಲುವ ಅಭ್ಯರ್ಥಿಗಳಾಗಿದ್ದು ಪರಾಭವಗೊಂಡಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ನೀವು ಅಧ್ಯರ್ಯ ಪಡಬೇಕಾಗಿಲ್ಲ ನಾನು ನಿಮ್ಮೊಂದಿಗೆ ಇರುತ್ತೇನೆ ಸೋಲು ಚಾಲೆಂಜ್ ಆಗಿ ತೆಗೆದುಕೊಂಡು ಪಕ್ಷದ ಸಂಘಟನೆಗೆ ಮುಂದಾಗಬೇಕೆಂದು ಸಲಹೆ ಇತ್ತರು.
ಮತದಾರರನ್ನು ನಿರ್ಲಕ್ಷ ಮಾಡಬೇಡಿ ಸಮಸ್ಯೆಗಳಿಗೆ ಸ್ಪಂದಿಸಿ
ಗೆಲವು ಸಾಧಿಸಿರುವ ಸದಸ್ಯರು ನಿಮ್ಮ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಚರಂಡಿ, ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ ಇನ್ನಿತರೆ ಅಭಿವೃದ್ದಿ ಕಾರ್ಯಗಳು ಮಾಡುವಲ್ಲಿ ಆದ್ಯತೆ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮತದಾರರಿಗೆ ಬೆಸರ ಉಂಟಾಗುವಂತೆ ವರ್ತಿಸಬೇಡಿ ಮತ ಹಾಕಿದವರು ನಮ್ಮವರೆ ಉಳಿದವರು ನಮ್ಮವರೆ ಸಮಸ್ಯೆಗಳನ್ನು ಹೇಳಿದಾಗ ಆಲಿಸಿ ಅವರ ಸಮಸ್ಯಗಳು ಕಾನೂನಾತ್ಮಕವಾಗಿದ್ದು ಸಾದ್ಯ್ಯವಾಗುವುದಾದರೆ ಆ ಕೆಲಸ ಮಾಡಿಸಿಕೊಡಲು ಸಹಕಾರ ನೀಡಿ. ನೀವು ನಿರ್ಲಕ್ಷ್ಯ ಮಾಡಬಾರದು ಜನಪ್ರತಿನಿಧಿಗಳು ಸೇವಕರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನೀವು ಜನರ ಸೇವೆ ಮಾಡಬೇಕೆಂದು ನೂತನ ಸದಸ್ಯರಿಗೆ ಕಿವಿ ಮಾತನ್ನು ಹೇಳಿದರು.

ಚುನಾಯಿತ ಸದಸ್ಯರೊಂದಿಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ

ಪುರಸಭಾ ಆಡಳಿತ ಚುಕ್ಕಾಣಿ ದೈವ ಕೃಪೆ ಇದರ ಬಗ್ಗೆ ಹೆಚ್ಚೇನೂ ಹೇಳಲ್ಲ
ಸ್ವತಂತ್ರ ಅಭ್ಯರ್ಥಿ ಬಿ.ವಿ.ರೆಡ್ಡಿ ನಮ್ಮ ಪಕ್ಷಕ್ಕೆ ಬೆಂಬಲ ನೀಡುವ ನಂಬಿಕೆ ಇದೆ ಉಳಿದ 3 ಮಂದಿ ಅಭ್ಯರ್ಥಿಗಳು ಒಲವು ತೋರುವುದರ ಬಗ್ಗೆ ಚರ್ಚಿಸೋಣ ಸಾದ್ಯವಾದಷ್ಟು ಪ್ರಯತ್ನಿಸಿ ಪುರಸಭಾ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಮುಂದೆ ನೋಡೋಣ ಎಂದರು.
ಈ ಸಂದರ್ಭದಲ್ಲಿ ಪರಾಭವಗೊಂಡ ಮತ್ತು ವಿಜೇತ ಅಭ್ಯರ್ಥಿಗಳಿಗೆ ಅಭಿನಂದಿಸಿದರು. ಈ ಸಮಯದಲ್ಲಿ ಮುಖಂಡರಾದ ಇಂದಿರಾಭವನ್ ರಾಜಣ್ಣ, ವಕೀಲ ಶಿವಪ್ಪ, ಮೀಸಗಾನಳ್ಳಿವೆಂಕಟರೆಡ್ಡಿ ,ಬಿ.ಎಲ್.ಸೂರ್ಯನಾರಾಯಣ, ಮುಖಂಡರಾದ ಪೂಲ ಶಿವಾರೆಡ್ಡಿ, ಸಿ.ರವಿ, ನಯಾಜ್,ಹೋಳೂರು ಸಂತೋಷ್ ಮುಂತಾದವರು ಇದ್ದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!