ಗೂಡ್ಸೆ ಸ್ವತಂತ್ರ ಭಾರತದ ಮೊತ್ತಮೊದಲ ಹಿಂದು ಉಗ್ರ ನಟ ರಾಜಕಾರಣಿ ಕಮಲ್ ಹಾಸನ್ ವಿವಾದತ್ಮಕ ವ್ಯಾಖ್ಯಾನ.

ಅವರಕುರಚಿ (ತಮಿಳುನಾಡು ಕರೂರ್ ಜಿಲ್ಲೆ ):- ಸ್ವತಂತ್ರ ಭಾರತದ ಮೊತ್ತಮೊದಲ ಹಿಂದು ಉಗ್ರ ನಾತೂರಾಂ ಗೋಡ್ಸೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ವಿವಾದಸ್ಪದವಾಗಿ ಹೇಳಿದ್ದಾರೆ.
ಅವರು ತಮಿಳುನಾಡಿನ ಕರೂರು ಜಿಲ್ಲೆಯ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿ ಹೇಳಿದ್ದಾರೆ. ಅವರು ತಮ್ಮ ಪಕ್ಷವಾದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಅಭ್ಯರ್ಥಿ ಮೋಹನ್ ರಾಜ್ ಅವರ ಪರವಾಗಿ ಭಾನುವಾರ ಸಂಜೆ ಮತಯಾಚನೆ ಮಾಡುವ ಸಂಧರ್ಭದಲ್ಲಿ ಮಾತನಾಡಿ “ನಾನೊಬ್ಬ ಹೆಮ್ಮೆಯ ಭಾರತೀಯ” ಎಂದಿರುವ ಅವರು. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ಹಿಂದು ಉಗ್ರತ್ವದ ಮಾತನ್ನು ಹೇಳುತ್ತಿಲ್ಲ. ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತು ಮಾತನಾಡುತ್ತಿದ್ದೇನೆ ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದಲೇ ಭಯೋತ್ಪಾದನೆ ಶುರುವಾಯಿತು ಎಂದು ಕಮಲ್ ಹೇಳಿದ್ದಾರೆ.1948 ರಲ್ಲಿ ನಡೆದ ಗಾಂಧಿ ಹತ್ಯೆಗೆ ಕಾರಣ ತಿಳಿದುಕೊಳ್ಳಲು ನಾನು ರಾಜಕೀಯಕ್ಕೆ ಬಂದಿರುತ್ತೇನೆ ಎಂದ ಅವರು “ಉತ್ತಮ ಭಾರತೀಯರಿಗೆ ಸಮಾನತೆ ಬೇಕಾಗಿದೆ. ಮತ್ತು ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳ ಧ್ಯೇಯಗಳು ಈಡೇರಬೇಕಿದೆ. ಅದಕ್ಕಾಗಿ ನಾನು ಹೋರಾಡುತ್ತೇನೆ ಎಂದರು.ತಮ್ಮ ಭಾಷಣದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದ ಬಗ್ಗೆಯೂ ತೀವ್ರಧಾಟಿಯಲ್ಲಿ ವಿಮರ್ಷಿಸಿದ್ದಾರೆ.

ತಮಿಳುನಾಡಿನಲ್ಲಿ ಉಪಚುನಾವಣೆ ಎದುರಿಸಲಿರುವ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಸಂಖ್ಯೆ 134 ವಿಧಾನಸಭಾ ಕ್ಷೇತ್ರದ ಅರವಕುರಿಚಿಯೂ ಒಂದಾಗಿದ್ದು ಫಲಿತಾಂಶ ಮೇ 23 ಹೊರಬಿಳಲಿದೆ ಅವರಕುರ್ಚಿ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಎನ್ನಲಾಗಿದೆ. ಎ.ಡಿ.ಎಮ್.ಕೆ ಪಕ್ಷದ 2017 ಸೆಂತಿಲ್ ಬಾಲಜಿ ಗೆಲವು ಸಾಧಿಸಿದ್ದರಾದರೂ ಜಯಲಲಿತಾ ಸಾವಿನ ನಂತರ ತಮಿಳುನಾಡಿನಲ್ಲಾದ ರಾಜಕೀಯ ಬದಲಾವಣೆಗಳಿಂದ ಶಾಸಕ ಸೆಂತಿಲ್ ಬಾಲಾಜಿಯನ್ನು ಸ್ಪೀಕರ್ ಅನರ್ಹ ಗೋಳಿಸಿದ ಪರಿಣಾಮ ಚುನಾವಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ನಾಥುರಾಮ ಗೋಡ್ಸೆಯನ್ನು ಸ್ವಾತಂತ್ರ್ಯ ಭಾರತದ ಪ್ರಥಮ ಹಿಂದು ಭಯೋತ್ಪಾದಕ ಎಂದು ನಟ ಮತ್ತು ಎಮ್ಎನ್ಎಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿರುವ ಬಿ.ಜೆ.ಪಿ ಕಮಲಹಾಸನ್ ಅವರನ್ನು 5 ದಿನಗಳ ಕಾಲ ನಿಷೇಧಿಸುವಂತೆ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ. ಕಮಲ್ ಹಾಸನ್ ಅವರ ಮಾತುಗಳಿಂದ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೋಳಿದೆ ಎಂದು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ದೂರು ದಾಖಲಿಸಿದ್ದಾರೆ.ಕಮಲ್ ಹಾಸನ್ ವ್ಯಾಖಾನದ ಬಗ್ಗೆ ಹಿಂದು ಸಂಘಟನೆಗಳಿಂದ ತೀವ್ರವಾದ ವಿರೋಧವ್ಯಕ್ತವಾಗಿದೆ

Leave a Reply

Your email address will not be published. Required fields are marked *

Don`t copy text!