ಅದ್ದೂರಿಯಾಗಿ ನಡೆದ ಶ್ರೀನಿವಾಸಪುರದ ದ್ವಾರಸಂದ್ರ ಲಕ್ಷ್ಮೀನರಸಿಂಹ ಜಾತ್ರಾ ಮಹೋತ್ಸವ

ಶ್ರೀನಿವಾಸಪುರ:- ತಾಲೂಕಿನ ಕಸಬಾ ಹೋಬಳಿಯ ದ್ವಾರಸಂದ್ರದ ಖ್ಯಾತ ವೈಷ್ಣವ ದೇವಸ್ಥಾನ ಶ್ರೀ ಲಕ್ಷ್ಮೀ ನಾರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಹಾಗು ಶ್ರದ್ಧಾಭಕ್ತಿಗಳಿಂದ ನಡೆದಿರುತ್ತದೆ.

ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಈ ತಿಂಗಳ 16 ರಿಂದ ಅಂಕುರಾರ್ಪಣೆ,ಧ್ವಜಾರೋಹಣದ ಮೂಲಕ ಪ್ರಾರಂಭವಾಗಿರುವಂತ ಕಾರ್ಯಕ್ರಮಗಳು ಶುಕ್ರವಾರ ನೃಸಿಂಹ ಜಯಂತಿ, ಸಂಜೆ ಗರುಡೋತ್ಸವ ಹಾಗು ಶನಿವಾರ ಬ್ರಹ್ಮರಥೋತ್ಸ ನಡೆದಿರುತ್ತದೆ. ಬ್ರಹ್ಮರಥೋವದಲ್ಲಿ ದೊಡ್ದ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದು ಸುಡು ಬಿಸಿಲು ಲೆಕ್ಕಿಸದೆ ಭಕ್ತರು ಪಾಲ್ಗೋಂಡಿದ್ದರು.

ರಥೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಬಹುದೊಡ್ದಸಂಖ್ಯೆಯಲ್ಲಿ ನರಸಿಂಹಸ್ವಾಮಿ ಭಕ್ತರು ಹಾಗು ದೇವಾಲಯದ ಕನ್ವಿನರ್ ನರೇಂದ್ರ,ತಹಶೀಲ್ದಾರ್ ರಾಜೀವ್,ಗ್ರಾಮದ ಹೀರಿಯರಾದ ಪಟೇಲ್ ಈಶ್ವರರೆಡ್ಡಿ, ಗಿಡ್ನಹಳ್ಳಿ ರಾಮಚಂದ್ರಾರೆಡ್ಡಿ ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಗ್ರಾಂ ಪಂ ಸದಸ್ಯರಾದ ನಾರಯಣಸ್ವಾಮಿ ಯುವ ಮುಖಂಡ ಮಂಜುನಾಥರೆಡ್ಡಿ ಸೇರಿದಂತೆ ಹಲವರು ಪಾಲ್ಗೋಂಡಿದ್ದರು.

ವರದಿ: ಚ,ಶ್ರೀನಿವಾಸಮೂರ್ತಿ ಮತ್ತು ಹೆಮಂತ್ ರೆಡ್ಡಿ

Leave a Reply

Your email address will not be published. Required fields are marked *

Don`t copy text!