ಕೋಲಾರದ ಸಾಯಿ ಮಂದಿರದಲ್ಲಿ ವೈಶಿಷ್ಟ ಪೂರ್ಣವಾಗಿ ಗುರುಪೌರ್ಣಿಮೆ.

ಕೋಲಾರ:- ಗುರು ಪೂರ್ಣಿಮಾ ಅಂಗವಾಗಿ ಜುಲೈ.16 ರಂದು ಕೋಲಾರ ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಾಬಾ ದರ್ಶನಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಬಾಬಾ ದರ್ಶನ ಹಾಗೂ ಪೂಜಾ ಕೈಂಕರ್ಯಗಳಿಗೆ ಅಡಚಣೆಯಾಗದಂತೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಅವರು ಗುರುಪೌರ್ಣಮಿ ಅಂಗವಾಗಿ ಬಾಬಾ ದೇವಾಲಯದಲ್ಲಿ ಏರ್ಪಡಿಸಿರುವ ಕಾರ್ಯಕ್ರಮಗಳ ಕುರಿತಾಗಿ ಪತ್ರಕರ್ತರಿಗೆ ಮಾಹಿತಿ ಮಾತನಾಡಿದ ಅವರು ದೇವಾಲಯದಲ್ಲಿ ನಾನಾ ರಿತಿಯ ವೈಶಿಷ್ಟ ಬಗೆಯ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ,ಭಕ್ತಾಧಿಗಳಿಗಾಗಿ ಮಂದಿರ ಮುಂಜಾನೆಯಿಂದಲೇ ತೆರೆದಿರುತ್ತದೆ ಎಂದು ತಿಳಿಸಿದರು.
ಈ ಬಾರಿ ಗುರು ಪೂರ್ಣಿಮಾ ರಾತ್ರಿ ಚಂದ್ರಗ್ರಹಣ ಇರುವ ಹಿನ್ನಲೆಯಲ್ಲಿ ದೇವಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಮಹಾಮಂಗಳಾರತಿ ಆಗುತ್ತಿದ್ದಂತೆ ಪ್ರಸಾದ ವಿನಿಯೋಗ ಪ್ರಾರಂಭವಾಗುತ್ತದೆ, ಎಂದರು.

ಅನ್ನ ಪ್ರಸಾದ ಸೇರಿದಂತೆ ಬಗೆ ಬಗೆಯ ಪ್ರಸಾದ ತಯಾರಿಸಿ ವಿತರಣೆ
ಬಾಬಾ ಮಂದಿರಕ್ಕೆ ಹೊಂದಿಕೊಂಡಂತಿರುವ ರೈಲ್ವೆ ನಿಲ್ದಾಣದ ಮುಂದಿನ ಮೈದಾನದಲ್ಲಿ ಭಕ್ತಾದಿಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಮಲ್ಲಿಗೆ ಇಡ್ಲಿ, ಸಿಹಿ ಕಡುಬು, ರಾಗಿದೋಸೆ, ವೆಜಟಬಲ್ ಬಾತ್, ಬೋಂಡಾ, ಪಾಯಸ,ಬೂಂದಿ, ಅನ್ನರಸ, ಅನ್ನಮಜ್ಜಿಗೆಯ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೃಹತ್ ಪೆಂಡಾಲ್, 600 ಟೇಬಲ್ ಹಾಗೂ ಒಂದು ಸಾವಿರದ ಐನೂರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ 300 ಮಂದಿ ಅಡುಗೆಯವರು ಕಾರ್ಯನಿರ್ವಹಿಸಲಿದೆ ಎಂದ ಅವರು ಪ್ರಸಾದ ತಯಾರಿಕೆಯಲ್ಲಿ ಶುಚಿತ್ವಕ್ಕೂ ಆದ್ಯತೆ ನೀಡಲಾಗಿದೆ ಹಾಗೆ ಮಿನರಲ್ ವಾಟರ್ ಕೇವಲ ಕುಡಿಯುವಲಿಕ್ಕೆ ಮಾತ್ರ ಅಲ್ಲದೆ ಪ್ರಸಾದ ತಯಾರಿಕೆಯಲ್ಲಿ ಸಂಪೂರ್ಣವಾಗಿ ಮಿನರಲ್ ವಾಟರ್ ಬಳಸಲಾಗಿದೆ ಎಂದರು. ದೇವಾಲಯದಿಂದ ಊಟದ ವ್ಯವಸ್ಥೆ ಇರುವ ಪೆಂಡಾಲ್‍ಗೆ ಬರುವಂತ ವೃದ್ದರನ್ನು ಕರೆತರಲು ಬಾಬಾ ಭಕ್ತ ಮಂಡಳಿಯ ಮಹಿಳಾ ಸೇವಾದಳದ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.
ಎಲ್ಲಾ ಮಾಹಿತಿಯನ್ನು ಕುರಿತು ನೀಡಿದ ಸಂದರ್ಭದಲ್ಲಿ ದೇವಾಲಯ ಸಮಿತಿ ತಂಡದ ಜಿ.ಪಿ.ಮುನಿಸ್ವಾಮಿ, ರವಿಶಂಕರ್ ಗುಪ್ತಾ, ಬಣಕನಹಳ್ಳಿ ನಟರಾಜ್,ಅಣ್ಣಿಹಳ್ಳಿ ನಾಗರಾಜ್, ತುರಾಂಡಹಳ್ಳಿ ಸರ್ವೇಶ್ ಮತ್ತಿತರರು ಹಾಜರಿದ್ದರು.

ವರದಿ:-ವಿವೇಕ್ ಎಸ್ ಶೆಟ್ಟಿ .

Leave a Reply

Your email address will not be published. Required fields are marked *

Don`t copy text!