ತುಮಕೂರಿನಲ್ಲಿ ದೇವೇಗೌಡರಿಗೆ ಆಂತರಿಕ ಬಂಡಾಯದ ಬಿಸಿ

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ದಿಸಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಮೈತ್ರಿ ಧರ್ಮದ ಅನ್ವಯದಂತೆ ಲೈನ್ ಕ್ಲೀಯರ್ ಆಗಿದೆ ಆದರೆ ಜೆಡಿಎಸ್‌ ಕ್ಷೇತ್ರ ಬಿಟ್ಟುಕೊಟ್ಟಿರುವ ಬಗ್ಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ವಿರೋಧ ಹಾಗೆ ಇದೆ ಮೆಲ್ನೋಟಕ್ಕೆ ಬಹಿರಂಗ ಬಂಡಾಯ ಶಮನವಾಗಿದೆ, ಆಂತರಿಕ ಬಂಡಾಯ ಕೊತ ಕೊತ ಕುದಿಯುತ್ತಿದೆ ಎನ್ನಲಾಗಿದೆ.

ಮೈತ್ರಿ ವಿರೋಧಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ತೊಡೆ ತಟ್ಟಿದ್ದ ಸಂಸದ ಎಸ್‌.ಪಿ. ಮುದ್ದಹನುಮೇಗೌಡ,ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರೆದಿದ್ದಾರೆ. ಈ ಹಿನ್ನಲೆಯಲ್ಲಿ ಮುದ್ದಹನುಮೇಗೌಡರನ್ನು ಬೆಂಬಲಿಸಿದ್ದ ಮಧುಗಿರಿ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಕೂಡ ಕಣದಿಂದ ಹಿಂದೆ ಸರಿದು ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿದ್ದಾರೆ.ಇದು ಮೆಲ್ನೋಟಕ್ಕೆ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ದೇವೇಗೌಡರ ಹಾದಿ ಸುಗಮವಾಗಲಿದೆ ಎನ್ನುವಂತಾದರು ಆಂತರಿಕ ಬೇಗುದಿ ಶಮನವಾಗಿಲ್ಲವಂತೆ.

ರಾಹುಲ್‌ ರಿಂದ ಮುದ್ದಹನುಮೇಗೌಡರಿಗೆ ಮನವೊಲಿಕೆ:
ಮುದ್ದಹನುಮೇಗೌಡರ ಮನವೊಲಿಕೆಗೆ ರಾಜ್ಯ ನಾಯಕರು ಮಾಡಿದ ಯಾವುದೇ ಪ್ರಯತ್ನಗಳೂ ಫಲ ನೀಡಿರಲಿಲ್ಲ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಸಂಧಾನ ಕೂಡ ಯಶಸ್ವಿಯಾಗದ ಕಾರಣ. ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಮನವಿಗೆ ಕೆ.ಎನ್‌. ರಾಜಣ್ಣ ಸ್ಪಂದಿಸಿದರಾದರೂ, ಮುದ್ದಹನುಮೇಗೌಡರಿಂದ ಯಾವುದೇ ಪ್ರತಿಕ್ರೀಯೆ ಬಾರದ ಹಿನ್ನಲೆಯಲ್ಲಿ, ಅಂತಿಮವಾಗಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಖುದ್ದು ದೂರವಾಣಿ ಮೂಲಕ ಮುದ್ದಹನುಮೇಗೌಡರನ್ನು ಸಂಪರ್ಕಿಸಿ,ನಾಮಪತ್ರ ವಾಪಾಸ್ಸು ಪಡೆಯುವಂತೆ ತಿಳಿಸಿದ್ದಾರೆ ಅದರಂತೆ ಶುಕ್ರವಾರ ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ನಿರ್ಧಾರ ಪ್ರಕಟಿಸಿ ಮುದ್ದಹನುಮೇಗೌಡ, ಹೈಕಮಾಂಡ್‌ ಮಾತಿಗೆ ಗೌರವ ನೀಡಿ ನಾಮಪತ್ರ ವಾಪಸ್ಸು ಪಡೆದಿರುತ್ತಾರೆ.

ದಳಪತಿಗಳ ವಿನಂತಿಗೆ ಮನ್ನಣೆ ನೀಡಿದ ಮುದ್ದಹನುಮೇಗೌಡ

ಇತ್ತ ಕಾಂಗ್ರೆಸ್‌ ನಾಯಕರ ಮನವಿಗೆ ಮುದ್ದಹನುಮೇಗೌಡ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ತುಮಕೂರು ಜೆಡಿಎಸ್‌ ಮುಖಂಡರು ಒಗ್ಗೂಡಿ ಮುದ್ದಹನುಮೇಗೌಡರನ್ನು ಭೇಟಿ ಮಾಡಿದ್ದ, ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌. ಶ್ರೀನಿವಾಸ್‌, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್‌, ವಿಧಾನಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜು ಅವರು ಬೆಂಗಳೂರಿನ ಸಂಸದರ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು. ಈ ವೇಳೆ, ನಿಮ್ಮ ದೇವೇಗೌಡರನ್ನೇ ಹಿಂದಕ್ಕೆ ಕರೆಸಿಕೊಳ್ಳಬಹುದಿತ್ತಲ್ವಾ? ಎಂದು ಮುದ್ದಹನುಮೇಗೌಡರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಸ್ಥಳಿಯ ವಿಶ್ವಾಸಕ್ಕೆ ಗೌರವಿಸಿ ನಾಮಪತ್ರ ಹಿಂಪಡೆದಿರುವುದಾಗಿ ಹೇಳಲಾಗಿದೆ.

ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!