ಕೋಲಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣ

ಕೋಲಾರದ ಜಿಲ್ಲಾಡಳಿತ ಭವನ

ಐತಿಹಾಸಿಕ ಸಾಮಾಜಿಕ ಸೇರಿದಂತೆ ಹಲವಾರು ವೈಶಿಷ್ಟಗಳಿಗೆ ಹೆಸರು ವಾಸಿಯಾಗಿರಿವ ಕೋಲಾರ ಜಿಲ್ಲೆಯಲ್ಲಿ ಇದಿಗಾ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ನಿರ್ಮಾಣಕ್ಕೆ ಸರ್ಕಾರ ಹಾಗು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಜಂಟಿಯಾಗಿ ಮುಂದಾಗಿರುತ್ತವೆ.

ಕ್ರೀಡೆಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಕೋಲಾರ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ದರ್ಜೆ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ತಿಳಿಸಿದರು. ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರಿಕೆಟ್‌ ವಿಶ್ವದಲ್ಲಿ ಅತ್ಯುತ್ತಮ ಕ್ರಿಡೆಯಂದು ಮಾನ್ಯತೆ ಪಡೆದಿದೆ ಇದನ್ನು ಭಾರತದಲ್ಲೂ ಹೆಚ್ಚು ಪ್ರಿತಿ ಮಾಡಿ ಆಡುತ್ತಾರೆ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರೀಡಾಂಗಣ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ದರ್ಜೆ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಲು ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ಹೊಳಲಿ ಗ್ರಾಮದ ಬಳಿ ಇರುವ 16 ಎಕರೆ ಸರಕಾರಿ ಗೋಮಾಳ ಜಮೀನಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸಂಬಂದ ಪಟ್ಟಂತೆ ಕರ್ನಾಟಕ ಭೂ ಮಂಜೂರಾತಿ 1969ರ ನಿಯಮ 22(ಎ) 1, 6ರ ಅನ್ವಯ ಮಾರ್ಗಸೂಚಿ ಬೆಲೆಯ ಅನ್ವಯ ಶೇ.5ರಷ್ಟು 16 ಎಕರೆ ಜಮೀನಿಗೆ ವಾರ್ಷಿಕ ಗುತ್ತಿಗೆ ದರ ನಿಗದಿಪಡಿಸಲಾಗಿದೆ. ಜತೆಗೆ ಎರಡು ವರ್ಷಕ್ಕೊಮೆ ಶೇ.10 ಗುತ್ತಿಗೆ ದರವನ್ನು ಹೆಚ್ಚಿಸಿಕೊಂಡು ಹೋಗುವಂತಹ ಷರತ್ತಿಗೆ ಒಳಪಟ್ಟು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಜಮೀನುನ್ನು ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ ಮಂಜೂರು ಮಾಡಲಾಗಿರುತ್ತದೆ. ಇದು ಸ್ಥಳೀಯ ಕ್ರೀಡಾಪಟುಗಳಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕ್ರೀಡಾಂಗಣದ ಕರಡು ಪ್ರತಿ ಸಿದ್ಧ ಕ್ರಿಕೆಟ್‌ ಕ್ರೀಡಾಂಗಣದ ಕರಡು ಪ್ರತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸರ್ವೆ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಶೀಘ್ರವೇ ಬೌಂಡರಿ ನಿರ್ಮಿಸುವ ಕೆಲಸ ಆರಂಭಿಸುತ್ತೇವೆ. ಇದರೊಂದಿಗೆ ಕ್ರೀಡಾಂಗಣ ನಿರ್ಮಾಣವಾಗುವ ಹೊಳಲಿ ಗ್ರಾಮಕ್ಕೆ ಅಗತ್ಯ ರಸ್ತೆ ಸಂಪರ್ಕ ವ್ಯವಸ್ಥೆ ಹಾಗೂ ರಸ್ತೆಗಳ ಅಗಲೀಕರಣ ಮಾಡಲು ನಿರ್ಧರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾಧ್ಯಕ್ಷರು, ಶಾಸಕರು ಹಾಗೂ ಜಿಲ್ಲಾ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಸೋಮಶೇಖರ್‌ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಜರಿದ್ದರು.

ಹೊಳಲಿ ಗ್ರಾಮ ಕೋಲಾರ,ಮುಳಬಾಗಿಲು,ಕೆಜಿಎಫ್ ಹಾಗು ಬಂಗಾರಪೇಟೆ ನಗರಗಳಿಗೆ ನಡುವೆ ಬರುವ ಕಾರಣ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ

ಜಿಲ್ಲೆಯಲ್ಲಿ ಎರಡು ಕ್ರಿಕೆಟ್‌ ಮೈದಾನಗಳ ನಿರ್ಮಾಣಕ್ಕೆ ಯೋಜನೆ: ರಮೇಶ್‌
ಕೋಲಾರ ಜಿಲ್ಲೆಯಲ್ಲಿ 2 ಕ್ರಿಕೆಟ್‌ ಮೈದಾನಗಳನ್ನು ನಿರ್ಮಿಸಲು ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ ನಿರ್ಧರಿಸಿದೆ ಎಂದು ಅಸೋಸಿಯೇಷನ್‌ನ ಸಮನ್ವಯಾಧಿಕಾರಿ ರಮೇಶ್‌ ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ ಪ್ರಾಕ್ಟೀಸ್‌ ಮಾಡಲು ಕಠಿಣವಾದ ಪಿಚ್‌ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಬ್ಯಾಟಿಂಗ್‌, ಬೌಲಿಂಗ್‌, ಲೆಗ್‌ಸ್ಪಿನ್‌, ಆಫ್‌ಸ್ಪಿನ್‌, ಔಟ್‌ಸ್ಪಿನ್‌ ಹೀಗೆ ಎಲ್ಲ ರೀತಿಯ ಬೌಲಿಂಗ್‌ ತರಬೇತಿ ಸೌಲಭ್ಯವನ್ನು ಜಿಲ್ಲೆಯಲ್ಲಿ ನಡೆಸಲು ಅನುಮತಿ ಸಿಕ್ಕಿದೆ ಎಂದ ಅವರು, ಮೈದಾನದೊಂದಿಗೆ ಪೆವಿಲಿಯನ್‌ ಹಾಗೂ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಒಂದು ವರ್ಷದಲ್ಲಿ ಕ್ರೀಡಾಂಗಣ ನಿರ್ಮಾಣ:
ಒಂದು ಕ್ರೀಡಾಂಗಣ ನಿರ್ಮಾಣಕ್ಕೆ 4 ಎಕರೆ ಜಮೀನು ಅಗತ್ಯವಿದ್ದು, ಒಂದು ವರ್ಷದೊಳಗೆ ಕ್ರೀಡಾಂಗಣ ನಿರ್ಮಾಣ ಕಾರ್ಯ ಮುಗಿಯಲಿದೆ. ಹಂತ ಹಂತವಾಗಿ ಪೆವಿಲಿಯನ್‌, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲಾಗಿದ್ದು, ಉಚಿತ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ 40 ಆಟಗಾರರಿಗೆ ತರಬೇತಿ
20-20 ಟೂರ್ನಿಮೆಂಟ್‌, ರಣಜಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಲು ಬಿಸಿಸಿಐನಿಂದ ಅನುಮತಿ ದೊರೆತಿದೆ. ಬೇಸಿಗೆ ಶಿಬಿರ, ವಾರ್ಷಿಕ ಶಿಬಿರಗಳನ್ನು ನಡೆಸಲಾಗುವುದು. ಜಿಲ್ಲೆಯಲ್ಲಿನ ಪ್ರತಿಭಾನ್ವಿತ 40 ಆಟಗಾರರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿ, ರಾಜ್ಯ ಮಟ್ಟಕ್ಕೆ ಹಾಗೂ ರಣಜಿ ಪಂದ್ಯಗಳಿಗೆ ಆಯ್ಕೆ ಮಾಡಲಾಗುವುದು. ಜತೆಗೆ ಅವರನ್ನು ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಮಟ್ಟಕ್ಕೆ ತಯಾರು ಮಾಡಲಾಗುವುದು ಎಂದು ರಮೇಶ್‌ ತಿಳಿಸಿದರು.

ವರದಿ:-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!