ಮೈತ್ರಿ ಸರ್ಕಾರವನ್ನು ಕಾಪಾಡಾಲು ಸ್ಪೀಕರ್ ಗೆ ಅವಕಾಶ ಇದಿಯಾ!?.

ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ತಲೆನೋವಾಗಿರುವ ಎರಡು ಪಕ್ಷಗಳ ಶಾಸಕರ ರಾಜಿನಾಮೆ ಕುರಿತಾಗಿ ಸ್ಪೀಕರ್ ತಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರದ ಭವಿಷ್ಯತ್ತು ನಿಂತಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.
ಜೆಡಿಎಸ್ ಕಾಂಗ್ರೆಸ್ ಶಾಸಕರು ಎರಡು ಪಕ್ಷದ ಶಾಸಕರು ಒಟ್ಟುಗೂಡಿ ಮೈತ್ರಿ ಸರ್ಕಾರದ ವಿರುದ್ದ ಬಂಡೆದ್ದು ರಾಜಿನಾಮೆ ನೀಡಿರುವುದು ಹಲವು ಕುತುಹಲಗಳಿಗೆ ಕಾರಣವಾಗಿದೆ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶಿ ಪ್ರವಾಸದಲ್ಲಿ ಇದ್ದಾರೆ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ವಿದೇಶಿ ಪರ್ಯಟನೆಯಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ಎರಡು ಪಕ್ಷಗಳ ಸಾಸಕರು ಒಗ್ಗಾಟಾಗಿ ಹೋಗಿ ರಾಜಿನಾಮೆ ಸಲ್ಲಿಸಿರುವುದು ಹತ್ತಾರು ಅನುಮಾನಗಳು ಕಾಡುತ್ತಿದೆ.
ಸ್ಪೀಕರ್ ಸೇರಿದಂತೆ ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 225 ಸದಸ್ಯರಿದ್ದಾರೆ. ಬಿಜೆಪಿಯಲ್ಲಿ 105 ಶಾಸಕರು, ಕಾಂಗ್ರೆಸ್ ನ 78 ಮತ್ತು ಜೆಡಿಎಸ್ 37 ಶಾಸಕರು ಇದ್ದಾರೆ. ಬಿಎಸ್ಪಿ ಮತ್ತು ಕೆಪಿಜೆಪಿ ಯ ತಲಾ ಒಬ್ಬ ಶಾಸಕರು ಮತ್ತು ಒರ್ವ ಸ್ವತಂತ್ರ ಶಾಸಕ ಹಾಗು ಒರ್ವ ನಾಮನಿರ್ದೇಶಿತ ಶಾಸಕ ಇದ್ದಾರೆ.
ಸ್ಪೀಕರ್ ಹೊರತುಪಡಿಸಿ, ಒಟ್ಟು ಸಂಖ್ಯೆ 224 ಮತ್ತು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ 113 ಬೇಕು.
ಸಮ್ಮಿಶ್ರ ಸರ್ಕಾರದೊಂದಿಗಿನ ಪ್ರಸ್ತುತ ಸಂಖ್ಯೆ 115 ಮತ್ತು ಬಿಎಸ್ಪಿ ಮತ್ತು ಸ್ವತಂತ್ರ ಬೆಂಬಲದೊಂದಿಗೆ ಅದು 117 ಕ್ಕೆ ಹೋಗುತ್ತದೆ. ಬಿಜೆಪಿಯಲ್ಲಿ 105 ಶಾಸಕರು ಇದ್ದಾರೆ, ಒಬ್ಬ ಕೆಪಿಜೆಪಿ ಶಾಸಕರ ಬೆಂಬಲದೊಂದಿಗೆ 106 ನೀಡುತ್ತದೆ.
ತಮ್ಮ ರಾಜೀನಾಮೆಯನ್ನು ಸಲ್ಲಿಸಿದವರ ಸಂಖ್ಯೆ 13 ಆಗಿದ್ದರೆ, ವಿಧಾನಸಭೆಯಲ್ಲಿ ಒಟ್ಟು 211 ಕ್ಕೆ ಇಳಿಯುತ್ತದೆ ಮತ್ತು ಅರ್ಧ ಭಾಗವಾಗಿ 106 ಆಗುತ್ತದೆ. ಇದು ಬಿಜೆಪಿಗೆ ಅನಕೂಲವಾಗುತ್ತದೆ ಇದರಿಂದ ಬಿಜೆಪಿಗೆ ಸರಳ ಬಹುಮತ ಸಿಕ್ಕಂತಾಗುತ್ತದೆ. ಆದರೆ ಈ ಎಲ್ಲಾ ಲೆಕ್ಕಾಚಾರಕ್ಕೆ ವ್ಯವಸ್ಥೆ ಬರಬೇಕಾದರೆ ಸ್ಪೀಕರ್ ತಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರ ಇರುತ್ತದ ಅಥವಾ ಬಿಜೆಪಿ ಹೊಸ ಸರ್ಕಾರ ರಚಿಸುತ್ತದ ಎಂಬುದು ಶಾಸಕರು ನೀಡಿರುವ ರಾಜೀನಾಮೆಗಳು ಅಂಗಿಕಾರವಾದಾಗ ಮಾತ್ರ ಎನ್ನಲಾಗಿದೆ.

ರಾಜಿನಾಮೆ ನೀಡಿರುವ ಶಾಸಕರು ತಮ್ಮ ರಾಜಿನಾಮೆ ಖಾತ್ರಿ ಪಡಿಸಲು ರಾಜ್ಯಪಾಲರನ್ನು ಭೇಟಿ ಮಾಡಿರುತ್ತಾರೆ. ಹಾಗಾಗಿ ರಾಜಿನಾಮೆ ಪ್ರಸಹನೆ ರಾಜ್ಯಪಾಲರ ಅಂಗಳವೂ ತಲುಪಿದೆ.

ಈ ಬಗ್ಗೆ ಭಾನುವಾರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಎಚ್‌ಕೆ ಪಾಟೀಲ್ ಹೇಳುವಂತೆ ಸರ್ಕಾರದೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಕಾದು ನೋಡೋಣ. ರಾಜೀನಾಮೆ ನೀಡಿದ್ದಾರೆ ಆದರೆ ಅವರು ಹಿಂತಿರುಗುವ ಸಾಧ್ಯತೆಗಳಿವೆ. ಸರ್ಕಾರದಲ್ಲಿ ಸುಧಾರಣೆಗೆ ಅವಕಾಶವಿದೆ ಯಾವುದಕ್ಕೂ ತಾಳ್ಮೆ ಇರಬೇಕು ಎಂದು ಹೇಳಿದರು.
ಮತ್ತೊಬ್ಬ ಕಾಂಗ್ರೆಸ್ ಮುಖಂಡ ಶಿವಕುಮಾರ್ ಹೇಳುವಂತೆ ಜೆಡಿಎಸ್ ಪಕ್ಷ ತಮ್ಮ ನಾಯಕರ ಸಭೆಯನ್ನು ಕರೆದಿದೆ ಮತ್ತು ಕಾಂಗ್ರೆಸ್ ಕೂಡ ಅದೇ ರೀತಿ ಮಾಡುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಹೇಳಿರುತ್ತಾರೆ ವಿಷಯಗಳು ತಕ್ಷಣವೇ ತಣ್ಣಗಾಗುತ್ತವೆ ಎಂದು ನನಗೆ ವಿಶ್ವಾಸವಿದೆ. ರಾಷ್ಟ್ರ ಮತ್ತು ಎರಡೂ ಪಕ್ಷಗಳ ಹಿತದೃಷ್ಟಿಯಿಂದ ನಾವು ಸರ್ಕಾರವನ್ನು ಸುಗಮವಾಗಿ ನಡೆಸಬೇಕಾಗಿದೆ. ಶಾಸಕರು ಹಿಂತಿರುಗುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದಿರುತ್ತಾರೆ.

ಗೃಹಇಲಾಖೆ ವೈಫಲ್ಯ
ಮೈತ್ರಿ ಸರ್ಕಾರದ ಶಾಸಕರ ರಾಜಿನಾಮೆ ಕುರಿತಾಗಿ ಕರ್ನಾಟಕದ ಗೃಹ ಸಚಿವರಿಗೆ ಮಾಹಿತಿ ಇಲ್ಲವಾಗಿದಿಯ ಎಂದು ಕಾಂಗ್ರೆಸ್ ಮುಖಂಡರು ಅಸಮಧಾನ ಹೊರಹಾಗಿದ್ದಾರೆ.ಗೃಹಸಚಿವ ಖಾತೆ ಕಾಂಗ್ರೆಸ್ ನಲ್ಲಿ ಇದ್ದರು ಕಾಂಗ್ರೆಸ್ ಸಚಿವರ ರಾಜಿನಾಮೆ ಮಾಹಿತಿ ಕಾಂಗ್ರೆಸ್ ನವರಿಗೆ ಇಲ್ಲವ ಎಂಬುದೆ ದೊಡ್ದ ಪ್ರಶ್ನೆ?ಎನ್ನುತ್ತಾರೆ.ಹಾಗಾದರೆ ಕಾಂಗ್ರೆಸ್ ಮುಖಂಡರ ಮಾತಿನಂತೆ ಗೃಹಖಾತೆ ಗುಪ್ತಚರ ವಿಫಲವಾಯಿತ,ಅಥಾವ ಗೃಹ ಸಚಿವರಿಗೆ ಗೊತ್ತಿದ್ದು ಸುಮ್ಮನಿದ್ದರಾ! ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಗರಂ ಆದಿಯಂತೆ.

ಬೆಂಗಳೂರು ಮತ್ತು ಮುಂಬೈ ನಲ್ಲಿ ಪ್ರತಿಭಟನೆ
ಈ ಮದ್ಯೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ರಾಜಿನಾಮೆ ನೀಡಿರುವ ಶಾಸಕರ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಂಬೈನಲ್ಲೂ ಪ್ರತಿಭಟನೆ
ರಾಜಿನಾಮೆ ನೀಡಿ ಮುಂಬೈನ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಅತೃಪ್ತ ಶಾಸಕರ ವಿರುದ್ದ ಮುಂಬೈ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.ಶಾಸಕರು ಉಳಿದಿಕೊಂಡಿರುವ ಸೋಫಿಟೆಲ್ ವೈಭಪೂರಿತ ಹೋಟೆಲ್ ಬಳಿ ಮುಂಬೈ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ.

ಬಿ.ಸುರೇಶ್. ಕೋಲಾರ.

Leave a Reply

Your email address will not be published. Required fields are marked *

Don`t copy text!