ಶ್ರೀನಿವಾಸಪುರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪ್ರಾಭಲ್ಯ.

ಚುನಾಯಿತ ಪುರಸಭೆ ಸದಸ್ಯರು

ಶ್ರೀನಿವಾಸಪುರ: ಸ್ಪೀಕರ್ ತವರು ಶ್ರೀನಿವಾಸಪುರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಜಯಬೇರಿ ಬಾರಿಸಿದೆ 23 ಸ್ಥಾನಗಳ ಪುರಸಭೆಯಲ್ಲಿ ಜೆಡಿಎಸ್ 11 ಕಾಂಗ್ರೇಸ್‍ಗೆ 8 ಸ್ಥಾನಗಳು ಹಾಗು ಪಕ್ಷೇತರರು 4 ಮಂದಿ ಆಯ್ಕೆಯಾಗಿದ್ದಾರೆ.ಪಕ್ಷೇತರರಲ್ಲಿ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬಂಡಾಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಹಾಗು ಎರಡು ರಾಜಕೀಯ ಪಕ್ಷಗಳಿಂದ ಅಂತರ ಕಾಯಿದುಕೊಂಡಿದ್ದ ಯುವಕನೊರ್ವ ವಿಜಯಿಯಾಗಿದ್ದಾನೆ.
ಗೆದ್ದ ಅಭ್ಯರ್ಥಿಗಳ ವಿವರ ಹೀಗಿದೆ ವಾರ್ಡ್ ನಂ.1 ಮಾರುತಿ ನಗರ ಇಲ್ಲಿ ಕಾಂಗ್ರೇಸ್ ಅಭ್ಯರ್ಥಿ ನಾಗೇಶ್ 498 ಮತಗಳು ಪಡೆದು ಪ್ರತಿ ಸ್ಪರ್ದಿ 228 ಮತಗಳನ್ನು ಪಡೆದಿರುವ ಜೆಡಿಎಸ್ ನ ಪ್ರಸನ್ನಕುಮಾರ್ ಅವರನ್ನು 270 ಮತಗಳ ಅಂತರದಿಂದ ಪರಾಭವಗೊಳಿಸಿರುತ್ತಾರೆ.
ವಾರ್ಡ್ ನಂ.2 ರಾಮಕೃಷ್ಣಾ ಬಡಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿದ್ದ ಹಿರಿಯ ರಾಜಕಾರಣಿ ಬಿ.ವಿ.ರೆಡ್ಡಿ 233 ಮತಗಳು ಪಡೆದು ಜಯಗಳಿಸಿದ್ದು ಇವರಿಗೆ ಪ್ರತಿಸ್ಪರ್ದಿಗಳಾಗಿ ಕಾಂಗ್ರೆಸ್ ನಿಂದ ಸತ್ಯನಾರಾಯಣ 143, ಜೆಡಿಎಸ್ ನಿಂದ ಸ್ಪರ್ದಿಸಿದ್ದ ಹಾಲಿ ಸದಸ್ಯ ಹಾಗು ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ 103 ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ.
ವಾರ್ಡ್ ನಂ. 3 ಸುಭಾಷ್ ರಸ್ತೆ ಇಲ್ಲಿ ಜೆಡಿಎಸ್-ಕಾಂಗ್ರೆಸ್ ನೇರಾ ಹಣಾಹಣಿ ಇತ್ತು ಮಾಜಿ ಅಧ್ಯಕ್ಷೆ ಜೆಡಿಎಸ್ ಪಕ್ಷದ ಜಯಲಕ್ಷ್ಮಿ 351 ಮತಗಳು ಪಡೆದು ಜಯಗಳಿಸಿದ್ದು ಇವರ ಪ್ರತಿಸ್ಪರ್ದಿ ಕಾಂಗ್ರೇಸ್ ಅಭ್ಯರ್ಥಿ ಸರಸ್ವತಮ್ಮ 285 ಮತಗಳು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.4 ತ್ಯಾಗರಾಜ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸೈಯದ್ ನಿಶಿತ್ ಫಾತಿಮಾ 390 ಮತಗಳು ಪಡೆದು ಜಯಶೀಲರಾಗಿದ್ದು ಇವರ ಪ್ರತಿಸ್ಪರ್ದಿ ಕಾಂಗ್ರೇಸ್ ಅಭ್ಯರ್ಥಿ ನಜಿಯಬೇಗಂ 77 ಮತಗಳು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.5 ಕಟ್ಟೆಕೆಳಗಿನ ಪಾಳ್ಯ ಇದು ಹೈಒಲ್ಟೇಜ್ ಕ್ಷೇತ್ರ ಎಂದು ಬಿಂಬಿತವಾಗಿತ್ತು ಇಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಿ.ಆರ್.ಭಾಸ್ಕರ್ 342 ಮತಗಳು ಪಡೆದು ಜಯಶೀಲರಾಗಿದ್ದು ಇವರ ಪ್ರತಿಸ್ಪರ್ದಿಗಳಾದ ಕಾಂಗ್ರೇಸ್ ನಿಂದ ಸ್ಪರ್ದಿಸಿದ್ದ ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ 329 ಮತಗಳು ಸೋತಿದ್ದಾರೆ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಪೂಲ ಶಿವಾರೆಡ್ಡಿ 156 ಮತಗಳನ್ನು ಪಡೆದಿರುತ್ತಾರೆ.
ವಾರ್ಡ್ ನಂ. 6 ಮೋತಿಲಾಲ್ ರಸ್ತೆ ಕಾಂಗ್ರೇಸ್ ಪಕ್ಷದಿಂದ ಹಾಲಿ ಸದಸ್ಯ ವಿ.ಮುನಿರಾಜು ಸ್ಪರ್ದಿಸಿ 499 ಮತಗಳು ಪಡೆದು ಜಯಗಳಿಸಿದ್ದು ಇವರ ಪ್ರತಿಸ್ಪರ್ದಿಗಳಾಗಿ ಜೆಡಿಎಸ್ ನಿಂದ ಎಸ್.ಆರ್.ಮುನಿಕೃಷ್ಣ 74 ಮತಗಳು, ಬಿಜೆಪಿಯಿಂದ ಗಿರೀಶ್ ಅಭ್ಯರ್ಥಿಗೆ 7 ಮತಗಳು, ಸ್ವತಂತ್ರ ಅಭ್ಯರ್ಥಿಯಾಗಿ ಅಮರನಾಥ್ 231, ಜಯಣ್ಣ 50 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.7 ನೆಹರು ರಸ್ತೆ ಜೆಡಿಎಸ್ ನಿಂದ ರಾಜು 279 ಮತಗಳನ್ನು ಪಡೆದು ಜಯಗಳಿಸಿದ್ದು ಇವರ ಪ್ರತಿ ಸ್ಪರ್ದಿಗಳಾಗಿದ್ದ ಮಾಜಿ ಅಧ್ಯಕ್ಷ ಕೆ.ನಾರಾಯಣಸ್ವಾಮಿ 135 ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗು ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ@ಗೊರ್ಲೊಳ್ಳು ಚಿನ್ನಪ್ಪಯ್ಯ 135 ಮತಗಳನ್ನು ಪಡೆದಿರುತ್ತಾರೆ.
ವಾರ್ಡ್ ನಂ.8 ಹನುಮನಪಾಳ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಉನಿಕಿಲಿ ನಾಗರಾಜ್ 413 ಮತಗಳನ್ನು ಪಡೆದು ಜಯಗಳಿಸಿದ್ದು ಇವರ ಪ್ರತಿಸ್ಪರ್ದಿಗಳಾಗಿ ಜೆಡಿಎಸ್ ನಿಂದ ಸಿ.ರವಿ 385 ಮತಗಳನ್ನು ಪಡೆದು ಎರಡನೆಯ ಬಾರಿಗೆ ಸೋತಿರುತ್ತಾರೆ. ಬಿಜೆಪಿ ಯಿಂದ ಎಸ್.ಎ.ಶಿವಪ್ರಕಾಶ್ 7 ಬಿಎಸ್‍ಪಿ ಅಭ್ಯರ್ಥಿ ಆಂಜಪ್ಪ 6 ಮತಗಳು ಪಡೆದು ಠೇವಣಿ ಕಳೆದುಕೊಂಡಿರುತ್ತಾರೆ.
ವಾರ್ಡ್ ನಂ.9 ನರಸಿಂಹಪಾಳ್ಯ ಜೆಡಿಎಸ್ ನಿಂದ ಆನಂದಬಾಬು 365 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಮಂಜುನಾಥ್ 283 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.10 ಅಕ್ಬರ್ ರಸ್ತೆ ಜೆಡಿಎಸ್ ನಿಂದ ಆಯಿಷಾ ಸಿದ್ದಿಕ್ 556 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್ ಅಭ್ಯರ್ಥಿ ಜಬೀನಾ ತಾಜ್ 171 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.11 ಅಂಬೇಡ್ಕರ್ ಪಾಳ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಎನ್.ಲಲಿತ 481 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಅನಿತ 259 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.12 ಆಜಾದ್ ರಸ್ತೆ ಕಾಂಗ್ರೇಸ್ ಅಭ್ಯರ್ಥಿ ಹಾಲಿ ಸದಸ್ಯ ಮಹಮದ್ ಅನೀಸ್ 287 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿಗಳಾಗಿದ್ದ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಮಾಜಿ ಅಧ್ಯಕ್ಶ್ಗ ಪ್ರಭಾವಿ ರಾಜಕಾರಣಿ ಮಹಬೂಬ್ ಷರೀಫ್ 245 ಮತಗಳು ಪಡೆದು ಸೋಲುಂಡಿದ್ದಾರೆ, ಬಿಜೆಪಿ ಅಭ್ಯರ್ಥಿ ಶೇಕ್ ಶಫೀಉಲ್ಲಾ 4 ಮತಗಳು ಪಡೆದುಕೊಂಡಿರುತ್ತಾರೆ.
ವಾರ್ಡ್ ನಂ.13 ಗಫಾರ್‍ಖಾನ್ ಮೊಹಲ್ಲಾ ಕಾಂಗ್ರೇಸ್ ಅಭ್ಯರ್ಥಿ ಎಂ.ವಿ.ಸರ್ದಾರ್ 365 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿಗಳಾಗಿ ಜೆಡಿಎಸ್ ಅಭ್ಯರ್ಥಿ ನಜೀರ್ ಅಹಮದ್ 297 ಮತಗಳು, ಸಿಪಿಎಂ ಅಭ್ಯರ್ಥಿ ನಿಜಾಮುದ್ದಿನ್ 28 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.14 ಗಫಾರ್ ಖಾನ್ ಮೊಹಲ್ಲಾ-2 ಜೆಡಿಎಸ್ ಅಭ್ಯರ್ಥಿ ರಸೂಲ್ ಖಾನ್ 434 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಮುಕ್ತಿಯಾರ್ ಅಹಮದ್ 268 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.15 ಹೈದರಾಲಿ ಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ಜಬೀನ್ ತಾಜ್ 451 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಸಹರಾಬಾನು 230 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.16 ಜಾಕೀರ್ ಹುಸೇನ್ ಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ಶಬ್ಬೀರ್ ಖಾನ್ 465 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಸೈಯದ್ ಉಮರ್ 269 ಮತಗಳು, ಬಿಜೆಪಿಯಿಂದ ಮಹಮದ್ ವಸೀಂಪಾಷ 4 ಮತಗಳನ್ನು ಪqದುಕೊಂಡಿರುತ್ತಾರೆ.
ವಾರ್ಡ್ ನಂ.17 ವೆಂಟೇಶ್ವರಬಡಾವಣೆ ಬಂದಾಯ ಕಾಂಗ್ರೆಸ್ ಅಭ್ಯರ್ಥಿ ಇಪ್ತಿಕಾರ್ ಅಹ್ಮದ್ 429 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಕೆ.ವಿ.ಮಂಜು 161 ಮತಗಳು, ಜೆಡಿಎಸ್ ನಿಂದ ಮಹಮದ್ ಯುನಸ್ 97 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.18 ಎಂ.ಜಿ.ರಸ್ತೆ ಪೂರ್ವ. ರಾಜಕೀಯಕ್ಕೆ ಸಂಭಂದವೆ ಇಲ್ಲದ ಯುವಕ ಪಕ್ಷೇತರ ಅಭ್ಯರ್ಥಿ ಸಂಜಯಸಿಂಗ್ 354 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಕುಂಬಾರ ವೇಣು 211 ಮತಗಳು, ಜೆಡಿಎಸ್ ನಿಂದ ಜಗದೀಶ್‍ಬಾಬು 296 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.19 ರಾಮಕೃಷ್ಣ ಬಡಾವಣೆ ಕಾಂಗ್ರೇಸ್ ಅಭ್ಯರ್ಥಿ ಶಾಂತಮ್ಮ 310 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಜೆಡಿಎಸ್ ನಿಂದ ಚೈತನ್ಯ 291 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.20 ರಂಗಾರಸ್ತೆ ಕಾಂಗ್ರೇಸ್ ಅಭ್ಯರ್ಥಿ ಲೀಲಾವತಿ 584 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಜೆಡಿಎಸ್ ನಿಂದ ರೆಡ್ಡೆಮ್ಮ 191 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.21 ಹೈದರಾಲಿ ಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ವಹೀದಾ ಬೇಗಂ 428 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಸಬೀನಾ ಆಜಂ 387 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.22 ಜಾಕೀರ್ ಹುಸೇನ್ ಮೊಹಲ್ಲಾ ಕಾಂಗ್ರೇಸ್ ಅಭ್ಯರ್ಥಿ ಫಿರ್ ದೋಸ್ ಉನ್ನೀಸ್ಸಾ 448 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಜೆಡಿಎಸ್ ನಿಂದ ರಿಹಾನಾ ಖಾನಂ 407 ಮತಗಳು, ಬಿಜೆಪಿ ಅಭ್ಯರ್ಥಿ ರೇಷ್ಮಾ ಬಾನು 13 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ವಾರ್ಡ್ ನಂ.23 ವೆಂಕಟೇಶ್ವರ ಬಡಾವಣೆ ಜೆಡಿಎಸ್ ಅಭ್ಯರ್ಥಿ ಸುನಿತ ಕೆ.ಎಸ್ 642 ಮತಗಳು ಪಡೆದು ಜಯಗಳಿಸಿದ್ದು, ಇವರ ಪ್ರತಿಸ್ಪರ್ದಿ ಕಾಂಗ್ರೇಸ್‍ನಿಂದ ಆರ್.ಪುಷ್ಪಾವತಿ 119 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.

ಚುನಾವಣೆ ನಡೆಸಿದ ಅಧಿಕಾರಿಗಳು

ಪುರಸಭೆ ಚುನಾವಣೆ ನಡೆಸಿದ ಅಧಿಕಾರಿಗಳ ತಂಡ
ಶ್ರೀನಿವಾಸಪುರ ಪುರಸಭೆ ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಬಿ.ಎಸ್.ರಾಜೀವ್, ಆರ್.ಓ ಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಲೋಕೋಪಯೋಗಿ ಎ.ಇ.ಇ ಶ್ರೀನಿವಾಸಮೂರ್ತಿ, ಎ.ಆರ್.ಒ ಗಳಾದ ಸಿ.ಡಿ.ಪಿ.ಓ ರೋಜಲಿನ್ ಸತ್ಯ, ಬಿ.ಆರ್.ಸಿ ಅಧಿಕಾರಿ ಅಮರನಾಥ್ ತಂಡ ಚುನಾವಣಾ ಕಾರ್ಯನಿರ್ವಹಿಸಿದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!