ಕರುನಾಡ ಯಜಮಾನ ವಿಷ್ಣುವರ್ಧನ್ ನಾಟಕೋತ್ಸವ.

ಡಾ.ವಿಷ್ಣುವರ್ಧನ್ ಅವರ ಜನ್ಮ ದಿನವಾದ ಸೆ 18 ರಂದು ಆದರ್ಶ ದಿನವಾಗಿ ಆಚರಿಸಲು ವಿಷ್ಣು ಅಭಿಮಾನಿಗಳು ವಿಶೇಷ ಹಾಗು ವೈಶಿಷ್ಠಪೂರ್ಣವಾಗಿ ಅಚರಿಸಲು ಮುಂದಾಗಿರುತ್ತರೆ. ಪ್ರತಿ ವರ್ಷ ಸಹ ಜನ್ಮದಿನವನ್ನು ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ.ಅದರಂತೆ ಈ ವರ್ಷವೂ ಕರುನಾಡ ಯಜಮಾನನಿಗೆ ರಂಗಮನ ಕಾರ್ಯಕ್ರಮ ರೂಪಿಸಿ ವಿಷ್ಣುವರ್ಧನ್ ನಾಟಕೋತ್ಸವವನ್ನು ಮೂರು ದಿನಗಳ ಕಾಲ ಆಚರಿಸುತ್ತಿದ್ದಾರೆ.

ಪ್ರತಿವರ್ಷ ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಜನ್ಮದಿನ ಬಂದರೆ ಅವರ ಅಭಿಮಾನಿಗಳ ಮನೆಮನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ ಈ ವರ್ಷವು ಡಾ|ವಿಷ್ಣುವರ್ಧನ್ ಅವರ ಜನ್ಮದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ||ವಿಷ್ಣು ಸೇನಾ ಸಮಿತಿ ಸಜ್ಜಾಗುತ್ತಿದೆ.
ಅಭಿನಯ ಭಾರ್ಗವನೆಂದರೆ ಕನ್ನಡ ಚಿತ್ರರಂಗದ ಅಜಾತಶತ್ರು ಅಂತಾನೆ ಖ್ಯಾತಿ. ಅವರನ್ನು ಚಿತ್ರರಂಗದವರೆಲ್ಲರೂ ಪ್ರೀತಿಸುತ್ತಾರೆ ಗೌರವಿಸುತ್ತಾರೆ,ಅಭಿಮಾನಿಸುತ್ತಾರೆ ಅರಾಧಿಸುತ್ತಾರೆ. ಇದು ವಿಷ್ಣು ಅವರ ನಡವಳಿಕೆಗೆ ಸಾಕ್ಷಿ. ಸರಳ, ಸಜ್ಜನ, ಸೌಮ್ಯ ಸ್ವಭಾವ ಹೀಗೆ ಎಲ್ಲರೂ ಮೆಚ್ಚುವಂಥ ನಟನಾಗಿ, ನಾಯಕನಾಗಿ ಬೆಳೆದಂತವರು. ಅದಕ್ಕಾಗಿಯೇ ಅವರ ಜನ್ಮದಿನವನ್ನು ರಾಷ್ಟ್ರೀಯ ಆದರ್ಶ ದಿನವನ್ನಾಗಿ ಆಚರಿಸಲು ಅಭಿಮಾನಿಗಳೆ ಅಲ್ಲ ಅವರನ್ನು ಗೌವರಿಸುವರು ಒಪ್ಪುತ್ತಾರೆ.
ಈ ಬಾರಿಯ ಜನ್ಮದಿನದ ವಿಶೇಷವಾಗಿ ವಿಷ್ಣು ಅವರ ಹೆಸರಲ್ಲಿ ವಿಷ್ಣುವರ್ಧನ್ ನಾಟಕೋತ್ಸವ ಆಯೋಜಿಸಲಾಗಿದೆ ಸಿನಿಮಾದ ಮೂಲ ರಂಗಭೂಮಿ ಕಲಾವಿದರನ್ನು ಗುರುತಿಸುವ ಮತ್ತು ಗೌರವಿಸುವ ಕೆಲಸವೂ ಸಹ ಇದಾಗಿದ್ದು ಮೂರು ದಿನಗಳ ಕಾಲ ಬೆಂಗಳುರು ಜೆ ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯಲಿರುವುದಾಗಿ ಡಾ|ವಿಷ್ಣು ಸೇನಾ ಸಮಿತಿ ರಾಜ್ಯಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿರುತ್ತಾರೆ.
ಈ ನಾಟಕೋತ್ಸವದಲ್ಲಿ ಮತ್ತೊಂದು ವಿಶೇಷತೆ ಏನಂದರೆ ಕರ್ನಾಟಕದ ಪ್ರತಿಯೊಂದು ಪ್ರಾದೇಶಿಕ ಭಾಗಗಳ ಭಾಷೆಗಳಲ್ಲಿ ನಾಟಕಗಳು ನಡೆಯುತಿದ್ದು, ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಹೀಗೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ನಾಟಕೋತ್ಸವ ನಡೆಯಲಿದೆ.
ಸಾಹಸಸಿಂಹನ ಜನ್ಮದಿನವಾದ ಸೆಪ್ಟಂಬರ್ 18 ರಂದು ಪ್ರಾರಂಭವಾಗುವ ನಾಟಕೋತ್ಸವ ಮೂರು ದಿನ ನಡೆಯಲಿದ್ದು, ಸೆಪ್ಟಂಬರ್ 20ಕ್ಕೆ ಕೊನೆಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಬರೀ ನಾಟಕಗಳಲ್ಲದೇ, ವಿಷ್ಣುದಾದ ಅವರ ಗೀತೆಗಳ ಸಂಗೀತ ಸಂಜೆ, ಡಾ ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ, ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ, ಅಭಿನಯ ಭಾರ್ಗವನ ಛಾಯಾಚಿತ್ರಗಳ ಪ್ರದರ್ಶನ, ಪುಸ್ತಕ ಬಿಡುಗಡೆ ಹೀಗೆ ಸಾಕಷ್ಟು ಕಾರ್ಯಕ್ರಮಗಳು ಜರುಗಲಿವೆ.
ರಾಜ್ ಗುರು ಹೊಸಕೋಟೆ ಮತ್ತು ನಯನ ಸೂಡ ನೇತೃತ್ವದ ರಂಗಪಯಣ ರಂಗಭೂಮಿ ತಂಡದ ಸಹಯೋಗದೊಂದಿದೆ ಈ ನಾಟಕೋತ್ಸವ ನಡೆಯಲಿದ್ದು, ನಟನ , ವಿಶ್ವಪಥಾ ಕಲಾ ಸಂಗಮ, ಸಾತ್ವಿಕ , ವೇಷ ರಂಗಭೂಮಿ ತಂಡಗಳು ನಾಟಕ ಪ್ರದರ್ಶನ ನೀಡಲಿವೆ.
ಹಲವಾರು ಚಿತ್ರನಟರು ಈ ವಿಷ್ಣುವರ್ಧನ ನಾಟಕೋತ್ಸವಕ್ಕೆ ಸಾಥ್ ನೀಡಿದ್ದು, ಈಗಾಗಲೇ ಅಭಿನಯ ಚಕ್ರವರ್ತಿ ಇದರ ಬಗ್ಗೆ ಟ್ವಿಟ್ ಮಾಡಿ ಅಭಿಮಾನಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿರುತ್ತಾರೆ.
ಕಳೆದ ಎರಡು ವರ್ಷ ಹಿಂದೆ ದೇಶವೇ ತಿರುಗಿ ನೋಡುವಂತೆ ಡಾ||ವಿಷ್ಣು ಸೇನಾ ಸಮಿತಿ ರಾಜ್ಯಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕನ್ನಡದ ನಟನೊಬ್ಬನ ರಾಷ್ಟ್ರೀಯ ಉತ್ಸವ ಮಾಡಿ ಸಾರ್ಥಕತೆ ಮೆರೆದಿತ್ತು. ಕಳೆದ ವರ್ಷವೂ ಸಹ ಹಲವಾರು ಕಾರ್ಯಕ್ರಮಗಳೊಂದಿಗೆ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಈ ವರ್ಷ ವಿಷ್ಣುವರ್ಧನ್ ಅವರ ಜನ್ಮದಿನೋತ್ಸವವನ್ನು ಸಾರ್ಥಕವಾಗಿಸುವಲ್ಲಿ ಅಭಿಮಾನಿಗಳಲ್ಲಿ ಆದರ್ಶ ತುಂಬಲು, ವಿಷ್ಣುವರ್ಧನ್ ಜನ್ಮದಿನವನ್ನು ಆದರ್ಶದಿನವನ್ನಾಗಿಸಲು ಅಭಿಮಾನಿಗಳು ಮಾನಸಿಕವಾಗಿ ತಯಾರಾಗಿರುವುದಾಗಿ ತಿಳಿಸಿರುವ ವೀರಕಪುತ್ರ ಶ್ರೀನಿವಾಸ್. ವಿಷ್ಣು ಅಂದರೇನೆ ಸಂಸ್ಕೃತಿ, ವಿಷ್ಣು ಅಂದರೇನೆ, ಸಮಾಗಮ, ವಿಷ್ಣು ಅಂದರೇನೆ ಸ್ನೇಹ, ವಿಷ್ಣು ಅಂದರೇನೆ ಸಜ್ಜನಿಗೆ. ವಿಷ್ಣು ಅವರಿಗೆ ವಿಷ್ಣು ಅವರೇ ಸಾಟಿ. ವಿಶೇಷವಾಗಿ ವಿಷ್ಣುವರ್ಧನ ನಾಟಕೋತ್ಸವಕ್ಕೆ ಪ್ರೋತ್ಸಾಹಿಸಿ, ವಿಷ್ಣು ಜನ್ಮದಿನೋತ್ಸವವನ್ನು ಸಾರ್ಥಕಗೊಳಿಸೋಣ ಬನ್ನಿ ಎಂದು ಅಭಿಮಾನಿಗಳನ್ನು ಅಭಿಮಾನ ಪೂರ್ವಕವಾಗಿ ಅಹ್ವಾನಿಸಿರುತ್ತಾರೆ.

ವರದಿ:-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!