ಜ್ಯೋತಿಷ್ಯರ ಅಣತಿಯಂತೆ 8 ಬಾರಿಗೆ ಸಂಸದನಾಗುತ್ತೇನೆ ಕೆ.ಹೆಚ್.ಮುನಿಯಪ್ಪ ವಿಶ್ವಾಸ

ಇದು ನನ್ನ ಕೊನೆ ಚುನಾವಣೆ ಮುನಿಯಪ್ಪ
ಗೌನಿಪಲ್ಲಿಯಲ್ಲಿ ಗೋಪಾಲಕೃಷ್ಣ ಮೇಲೆ ಘಟನೆ ನಡೆದಿರುವುದು ದುರಂತ ನನ್ನ ಗೆಲುವಿಗೆ ವೆಂಕಟಶಿವಾರೆಡ್ಡಿ ಸಹಕಾರ ನೀಡುತ್ತಿರುವುದರಿಂದ ಒಳ್ಳೆಯದಾಗುತ್ತದೆ. ರಮೇಶ್‌ ಕುಮಾರ್‌ ಕಾಂಗ್ರೆಸ್‌ಗೆ ಬರುವಾಗ ಎಸ್‌.ಎಂ.ಕೃಷ್ಣ ಒಬ್ಬರಿಗೆ ಎಂಎಲ್‌ಎ, ಮತ್ತೊಬ್ಬರಿಗೆ ಎಂಎಲ್ಸಿ ಮಾಡಿ ಯಾರನ್ನೂ ಬಿಡಬೇಡವೆಂದರು. ನಾನು ಡಿ.ಕೆ.ಶಿವಕುಮಾರ್‌ ಮೂಲಕ ರಮೇಶ್‌ಕುಮಾರ್‌ಗೆ ಬಿ.ಫಾರಂ ಕೊಡಿಸಿದ್ದಕ್ಕೆ ರೆಡ್ಡಿ ದೂರವಾದರು. ಇನ್ನು ಯಾರನ್ನೂ ಕಳೆದುಕೊಳ್ಳುವುದಿಲ್ಲ. ಯಾರಿಗೂ ತೊಂದರೆ ಮಾಡದೆ ಹೊಂದಿಕೊಂಡು ಕೆಲಸ ಮಾಡಿ ಹೋಗುತ್ತೇನೆ. ನನಗೂ ಸಾಕಾಗಿದೆ. ಇದು ಕೊನೆ ಚುನಾವಣೆ ಎಂದು ಸಂಸದ, ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಹೇಳಿದರು.

ಶ್ರೀನಿವಾಸಪುರ:-ನನಗೆ ಜ್ಯೋತಿಷಿಗಳು ಆಶೀರ್ವಚನ ನೀಡಿದ್ದಾರೆ ನಾನು ಈ ಬಾರಿ ಅಂದರೆ 8 ನೇ ಬಾರಿಗೆ ಸಂಸದ ಪ್ರವೇಶ ಮಾಡುವುದು ಖಚಿತ ಹಾಗೆ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗುವುದು ಅಷ್ಟೆ ಸತ್ಯ ಎಂದು ಕೋಲಾರ ಲೋಕಸಭೆ ಕಾಂಗ್ರೆಸ್ ಅಬ್ಯರ್ಥಿ ಕೆ.ಹೆಚ್. ಮುನಿಯಪ್ಪ ಆತ್ಮವಿಶ್ವಾಸವಾಗಿ ನುಡಿದರು.
ಅವರು ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಸಮಾಜಗಳು ಎಲ್ಲಾ ಧರ್ಮಗಳೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳುವುದರೊಂದಿಗೆ ಒಳ್ಳೆಯ ಒಡನಾಟ ಹಾಗು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ, ಯು.ಪಿ.ಎ. ಸರ್ಕಾರದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳು ನಡೆದಿವೆ. ಕಳೆದ 5 ವರ್ಷಗಳ ಹಿಂದೆ ಈ ಭಾಗದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಾರಂಭಿಸಲು ಭೂಮಿ ಪೂಜೆ ನೆರವೇರಿಸಿದ್ದು, ಕೇಂದ್ರದಲ್ಲಿ ಬಿ.ಜೆ.ಪಿ. ಇರುವುದರಿಂದ ಕಾರ್ಖಾನೆ ಅರಂಬಿಸಲು ಸಾಧ್ಯವಾಗಿಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ, ಮುಂದೆ ಒಳ್ಳೆಯ ದಿನಗಳು ಬರಲಿದೆ ತಾಲೂಕಿಗೆ ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಾರಂಭ ಮಾಡುವುದು ಶತ ಸಿದ್ದ ಎಂದರು.
ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ, ವ್ಯಕ್ತಿಗತವಾಗಿ ತಪ್ಪುಗಳು ಮಾಡದೆ ತಮ್ಮ ತಮ್ಮ ತಪ್ಪುಗಳನ್ನು ತಿದ್ದುಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ಬರದ ಹಾಗೆ ಪ್ರತಿಯೊಬ್ಬರು ನಡೆದುಕೊಳಳ್ಳಬೇಕಾಗಿದೆ, ಚುನಾವಣೆ ಸಂದರ್ಭದಲ್ಲಿ ಹಳೆಯ ವೈಶಮ್ಯಗಳನ್ನು ಮರೆತು ಒಗ್ಗಟ್ಟಾಗಿ ಪಕ್ಷದ ವರಿಷ್ಟರ ತೀರ್ಮಾನದಂತೆ ಕೆಲಸ ಮಾಡಬೇಕಾಗಿದೆ ಎಂದರು.

ಸರ್ಕಾರವಿರುವುದರಿಂದ ಜೆ.ಡಿ.ಎಸ್ ಪಕ್ಷ ಈ ಬಾರಿ ನನಗೆ ಬೆಂಬಲ ನೀಡಿದೆ, ರಮೇಶ್ ಕುಮಾರ್ ಉನ್ನತ ಸ್ಥಾನವನ್ನು ಯಾವ ರೀತಿ ಅಲಂಕರಿಸಿದ್ದಾರೆಯೋ ಹಾಗೆಯೆ ಮುಂದಿನ ದಿನಗಳಲ್ಲಿ ವೆಂಕಟಶಿವಾರೆಡ್ಡಿಗೂ ಸಹ ಒಳ್ಳೆಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಎರಡೂ ಪಕ್ಷಗಳನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ, ಜೆ.ಡಿ..ಎಸ್. ಸಮಾವೇಶದಲ್ಲಿ ಹೇಳಿದ ಹಾಗೆ ಇಲ್ಲಿಯೂ ಸಹ ಹೇಳುತ್ತಾ ಯಾವುದೆ ಕಾರಣಕ್ಕೂ ಮಾತು ತಪ್ಪುವುದಿಲ್ಲ ಎಂದರು.
ಕೋಮುವಾದಿ ಬಿ.ಜೆ.ಪಿ ಯನ್ನು ಅಧಿಕಾರದಿಂದ ದೂರ ಇಡಲು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ತರುವ ಬಗ್ಗೆ ಪ್ರತಿಯೊಬ್ಬರೂ ಕಾಂಗ್ರೆಸ್ ಗೆ ಮತ ನೀಡುವ ದೃಡ ನಿರ್ದಾರವನ್ನು ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ.
ನಾನು ಮತ್ತು ರಮೇಶ್ ಕುಮರ್ ಇಬ್ಬರೂ ಜೊತೆಗೂಡಿ ಸಾಯಿಬಾಬಾ ದೇವಾಲಯದಲ್ಲಿ ಜಿಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ.ಸಾಯಿಬಾಬ ದೇವರ ಮೇಲೆ ಆಣೆ ನನಗೂ ಮತ್ತು ಸ್ವಾಮಿಗೂ ಯಾವುದೆ ಭಿನ್ನಾಭಿಪ್ರಾಯಗಳಿಲ್ಲ, ನಾನು ಅವರಿಗೆ ದ್ರೋಹ ಮಾಡಿಲ್ಲ, ಅವರು ನನಗೆ ದ್ರೋಹ ಬಗೆದಿಲ್ಲ, ಬಗೆಯುವುದಿಲ್ಲ ನಾವಿಬ್ಬರೂ ಒಗ್ಗಾಟ್ಟಾಗಿದ್ದೇವೆ, ಮಧ್ಯೆ ಇರುವವರು ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಹುಳಿ ಹಿಂಡುತ್ತಿದ್ದಾರೆ, ಯಾವುದೆ ಕಾರಣಕ್ಕು ಅದರ ಬಗ್ಗೆ ಕಿವಿಗೊಡಬೇಡಿ ಎಂದರು.

ನಿನ್ನೆ ದಳಸನೂರು ಗೋಪಾಲಕೃಷ್ಣ ರವರ ಮೇಲೆ ರಾಯಲಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯರೆಡ್ಡಿ ಮತ್ತಿತರ ಕಾರ್ಯಕರ್ತರು ಅಗೌರವವಾಗಿ ನಡೆದುಕೊಂಡಿರುವುದು ಬೇಸರವಾಗಿದೆ, ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ, ವ್ಯಕ್ತಿಗತವಾಗಿ ತಪ್ಪುಗಳು ಮಾಡದೆ ತಮ್ಮ ತಮ್ಮ ತಪ್ಪುಗಳನ್ನು ತಿದ್ದುಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ಬರದ ಹಾಗೆ ಪ್ರತಿಯೊಬ್ಬರು ನಡೆದುಕೊಳಳ್ಳಬೇಕಾಗಿದೆ, ಚುನಾವಣೆ ಸಂದರ್ಭದಲ್ಲಿ ಹಳೆಯ ವೈಶಮ್ಯಗಳನ್ನು ಮರೆತು ಒಗ್ಗಟ್ಟಾಗಿ ಪಕ್ಷದ ವರಿಷ್ಟರ ತೀರ್ಮಾನದಂತೆ ಕೆಲಸ ಮಾಡಬೇಕಾಗಿದೆ ಎಂದರು.
ಬ್ಯಾಟಪ್ಪ ಮಾತನಾಡಿ ಸಂಸದ ಮುನಿಯಪ್ಪ ಮತ್ತು ಸ್ಪೀಕರ್ ರಮೇಶಕುಮಾರ್ ಇಬ್ಬರು ಸಕ್ರೀಯ ರಾಜಕಾರಣದಲ್ಲಿ ಇರಬೇಕು ಎಂದು ಬಯಸುತ್ತೇವೆ ಏನು ಸಮಸ್ಯೆ ಆಗಿದಿಯೋ ಗೊತ್ತಿಲ್ಲ ಇಬ್ಬರ ನಡುವಿನ ವೈಮನಸ್ಯ ಆದಷ್ಟು ಬೇಗ ಬಗೆ ಹರಿಯಲಿ ಎಂದರು.

ಸಭೆಯಲ್ಲಿ ಕೇಂದ್ರ ಬಿಂದುವಾಗಿ ಭಾಗವಹಿಸಿದ್ದ ದಳಸನೂರುಗೋಪಾಲಕೃಷ್ಣ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಭಾವುಕರಾಗಿ ಅತ್ತುಬಿಟ್ಟರು ಬುಧವಾರ ಗೌವನಪಲ್ಲಿಯಲ್ಲಿ ನಡೆದ ಘಟನೆ ಕುರಿತಾಗಿ ಪ್ರಸ್ತಾಪಿಸಿದ ಅವರು ನಾನು 1984 ರಿಂದ ವಿಧ್ಯಾರ್ಥಿ ದಸೆಯಿಂದಲೇ ಕಾಂಗ್ರೆಸ್ ಪಕ್ಷದ ನಿಷ್ಠಾವಂತ
ಕಾರ್ಯಕರ್ತನಾಗಿ ಮುಖಂಡನನಾಗಿ ಪಕ್ಷದ ಸಿದ್ದಾಂತಗಳ ಅಡಿಯಲ್ಲಿ ದುಡಿಯುತ್ತ ಇದ್ದಿನಿ ಗೌವನಪಲ್ಲಿಗೆ ಹೋಗಿದ್ದು ಸಹ ಪಕ್ಷದ ಕಾರ್ಯಕ್ಕೆ ಆದರೆ ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಸಂಜಯ್ ನಡೆದುಕೊಂಡಿದ್ದು ಮಾತ್ರ ತೀವ್ರ ನೋವಾಗಿದೆ ಎಂದರು. 1994 ರಲ್ಲಿ ರಮೇಶ್ ಕುಮಾರ್ ರನ್ನು ಎಸ್.ಎಂ. ಕೃಷ್ಣ ರವರ ಆಡಳಿತದಲ್ಲಿ ಮನವೊಲಿಸಿ ನಾನು ಮತ್ತು ಕೆ.ಹೆಚ್. ಮುನಿಯಪ್ಪ ಜಂಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತಂದವಿ. ಅಂದಿನಿಂದ ಇಲ್ಲಿಯತನಕ
ಕಾಂಗ್ರೆಸ್ ಪಕ್ಷದಲ್ಲಿ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಜೊತೆಯಲ್ಲಿ ವ್ಯಕ್ತಿಗತವಾಗಿ ಕಪ್ಪು ಚುಕ್ಕೆ ಬಾರದಂತೆ ಪಕ್ಷದ ಸಿದ್ದಾಂತಗಳಿಗೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ರಮೇಶಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ ನಾನು ಅವರಿಗೆ ಟಿಕೆಟ್ ಕೊಡಿಸಲು ಸರ್ವತಾ ಶ್ರಮವಹಿಸಿರುವುದಾಗಿ ಹೇಳಿದರು.
ನನ್ನ ಸಾರ್ವಜನಿಕ ಜೀವನದಲ್ಲಿ ಯಾರಿಗೂ ಮೋಸಮಾಡಿ ಬದುಕಿಲ್ಲ ಅದರ ಅವಶ್ಯಕತೆ ನನಗಿಲ್ಲ ಎಂದು ಭಾವುಕರಾಗಿಯೇ ಸಭೆಯಲ್ಲಿ ಹೇಳಿದರು. ಸಂಸದ ಮುನಿಯಪ್ಪ 7 ಬಾರಿ ಸಂಸದರಾಗಿ ಆಯ್ಕೆಯಾಗಲು ಹಲವು ಚುನಾವಣೆಗಳಲ್ಲಿ ನಾನು ಅವರ ಜೊತೆಗಿದ್ದು ನಿಷ್ಟಾವಂತನಾಗಿ ಕೆಲಸ ಮಾಡಿದ್ದೇನೆ, ಮುನಿಯಪ್ಪ ಜ್ಯಾತ್ಯಾತೀತ ವ್ಯಕ್ತಿ ಸರಳ ಸಜ್ಜನಿಕೆ ರಾಜಕಾರಿಣಿ, ಈ ಬಾರಿ ಮೈತ್ರಿ ಸರ್ಕಾರ ಇರುವುದರಿಂದ ಜೆ.ಡಿ.ಎಸ್. ಬೆಂಬಲವು ಸಹ ನಮಗಿದೆ. ನಾವೆಲ್ಲರೂ 8ನೆ ಬಾರಿಗೆ ಮುನಿಯಪ್ಪರನ್ನು ಗೆಲ್ಲಿಸಲು ನಿಷ್ಟೆ ಪ್ರಾಮಾಣಿಕತೆಯಿಂದ ಕೆಲಸಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಹುತೇಕ ರಮೇಶ್ ಕುಮಾರ್ ಬೆಂಬಲಿಗರು ಗೈರು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಮಾಲೂರು ಶಾಸಕ ನಂಜೇಗೌಡ.ಜನ್ನಘಟ್ಟವೆಂಕಟಮುನಿಯಪ್ಪ,ಚಿಂತಾಮಣಿ ರಾಯಲ್ ರಾಮಕೃಷ್ಣ, ಪುರಸಭೆ ಮಾಜಿ ಸದಸ್ಯರಾದ ಮೊಕ್ತಿಯಾರ್,ಅನಿಸ್,ಮುನಿರಾಜು,ಸತ್ಯನಾರಯಣ್, ಮುತ್ತುಕಪಲ್ಲಿಸರ್ಧಾರ್ ರಾಮಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರಿಫ್ ಸೇರಿದಂತೆ ಹಲವರು ಭಾಗವಹಿದ್ದರು.
ಗೌವನಪಲ್ಲಿಯಲ್ಲಿ ಕಾಂಗ್ರೆಸ್ ಮುಖಂಡರ ಹಾಗು ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಗುರುವಾರದ ಚುನಾವಣಾ ಸಭೆ ಸ್ವತಃ ಅಭ್ಯರ್ಥಿ ಭಾಗವಸುತ್ತಿರುವ ಕಾರಣ ಕಾರ್ಯಕ್ರಮ ನಡೆದ ವೇಂಕಟಗೌಡ ಕಲ್ಯಾಣಮಂಟಪ ಹಾಗು ಅವರಣದಲ್ಲಿ ಬೀಗಿ ಪೋಲಿಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.

ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!