ಬರ್ಜರಿ ಗೆಲವು ಸಾಧಿಸಿರುವ ಖಟ್ಟಾ ಹಿಂದುತ್ವವಾದಿ ಹಾಗು ಅಸಾಧಾರಣ ಮಾತುಗಾರರಾದ ಅನಂತ್,ತೆಜಸ್ವಿ.

ಬೆಂಗಳೂರು: ಕಟ್ಟಾ ಹಿಂದುತ್ವವಾದ ಅಜೆಂದಾದಲ್ಲಿ ಬೆಂಕಿ ಚೆಂಡಿನಂತಹ ವಿವಾದಾತ್ಮಕ ಹೇಳಿಕೆಗಳಿಂದಲೆ ಪ್ರಸಿದ್ಧಿ ಹೊಂದಿ ಸದಾ ಸುದ್ದಿಯಲ್ಲಿರುತ್ತಿದ್ದ ಉತ್ತರ ಕನ್ನಡದ ಸಂಸದ, ಕೇಂದ್ರದ ಮಾಜಿ ಸಚಿವ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ಈ ಬಾರಿಯ ಸಂಸತ್ತು ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್ ಕುಮಾರ್ ಹೆಗಡೆ 4 ಲಕ್ಷದ 79 ಸಾವಿರದ 649 ಮತಗಳ ಅಂತರದಿಂದ ಗೆಲವು ಕಂಡಿದ್ದಾರೆ. ಅವರಿಗೆ 7 ಲಕ್ಷದ 86 ಸಾವಿರದ 042 ಮತಗಳು ಬಂದಿದ್ದು ಆಸ್ನೋಟಿಕರ್ ಪಡೆದಿದ್ದು 3 ಲಕ್ಷದ 06 ಸಾವಿರದ 393 ಮತಗಳು. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ ಆರನೇ ಬಾರಿಗೆ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸಿದ್ದಾರೆ. .
ಮೊದಲ ಮತ ಎಣಿಕೆ ಸುತ್ತಿನಲ್ಲಿಯೇ, ಅನಂತ್ ಕುಮಾರ್ ಹೆಗಡೆ ಮುಂಚೂಣಿಯಲ್ಲಿದ್ದರು. ಕಳೆದ ತಿಂಗಳು ಮತದಾನಕ್ಕೆ ಮುನ್ನ ಅನಂತ್ ಕುಮಾರ್ ಹೆಗಡೆ ಮತ್ತು ಇತರ ಬಿಜೆಪಿ ನಾಯಕರೇ ಅವರ ಬಗ್ಗೆ ಎರಡು ಲಕ್ಷದ ಮತಗಳ ಅಂತರದಲ್ಲಿ ಗೆಲ್ಲಬಹುದು ಎಂದುಕೊಂಡಿದ್ದವರಿಗೆ ನಿನ್ನೆಯ ಫಲಿತಾಂಶ ಹೊರಬಿದ್ದ ನಂತರ ಅಚ್ಚರಿಯಾಗಿದೆ.
ಅನಂತ್ ಕುಮಾರ್ ಹೆಗಡೆ ಗೆಲ್ಲುವ ವಿಶ್ವಾಸವಿತ್ತು. ಮೋದಿ ಹೆಸರು ಕೂಡ ಕಾರಣವಾಯಿತು. ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಾಂಗ್ರೆಸ್ ನಿಂದ ಕಣಕ್ಕಿಳಿಸಲಿಲ್ಲ ಎಂಬ ಬೆಸರದಿಂದ ಹಲವು ಕಾಂಗ್ರೆಸಿಗರು ಸಹ ಈ ಬಾರಿ ಹೆಗಡೆಯವರಿಗೇ ಮತ ಹಾಕಿದ್ದಾರೆ. ಎನ್ನುವ ಲೆಕ್ಕಚಾರ ಇದೆ. ಉತ್ತರ ಕನ್ನಡದಲ್ಲಿ ಜೆಡಿಎಸ್ ಅಸ್ಥಿತ್ವವನ್ನೇ ಇಲ್ಲ, ಇದು ಅನಂತ್ ಕುಮಾರ್ ಗೆ ವರವಾಗಿದೆ ಎನ್ನಲಾಗಿದೆ.
ಅದ್ಭುತ ಮಾತುಗಾರ ಮೋಡಿಗೆ ಒಳಗಾದ ಬೆಂಗಳೂರು ದಕ್ಷಿಣದ ಮತದಾರ.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ತೇಜಸ್ವಿ ಸೂರ್ಯ 3 ಲಕ್ಷದ 31 ಸಾವಿರದ 192 ಮತಗಳಿಂದ ಗೆಲುವು ಕಂಡಿದ್ದಾರೆ. 2014ರಲ್ಲಿ ಅನಂತ್ ಕುಮಾರ್ ಗೆದ್ದ ಮತಗಳ ಅಂತರಗಳಿಂದ ಈ ಬಾರಿ ತೇಜಸ್ವಿ ಸೂರ್ಯ ಕಾಂಗ್ರೆಸ್ ನ ಬಿ ಕೆ ಹರಿಪ್ರಸಾದ್ ವಿರುದ್ಧ ಗೆಲುವು ಕಂಡಿದ್ದಾರೆ.ಅಭ್ಯರ್ಥಿಗೆ ಕ್ಷೇತ್ರ ಪರಿಚಯ ಇಲ್ಲ ರಾಜಕೀಯಕ್ಕೆ ಹೊಸದು ಈ ಎಲ್ಲಗಳ ನಡುವೆ ರಾಜ್ಯದ ಅತಿ ಹೆಚ್ಚು ಪ್ರತಿಷ್ಠಿತವಾದ ಕ್ಷೇತ್ರ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಖ್ಯಾತಿ ಇದೆ, ವಿದ್ಯಾವಂತರರು, ರಾಜಕೀಯ ಪ್ರಜ್ಞಾವಂತರು ಇರುವಂತ ಕ್ಷೇತ್ರವಾದ ಇಲ್ಲಿ ತೇಜಸ್ವಿ ಸೂರ್ಯ ಬಿಜೆಪಿ ಯುವ ಸಂಸದರಾಗಿರುತ್ತಾರೆ.
ಬೇರೆ ಕ್ಷೇತ್ರಗಳಿಗೆ ಹೋಲಿಸಿದರೇ ಸ್ವಚ್ಚತೆ ಇರುವಂತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಕಸದ ಸಮಸ್ಯೆ, ಟ್ರಾಫಿಕ್, ರಸ್ತೆ ಹಾಗೂ ನೀರಿನ ಕೊರತೆಯಿಲ್ಲ, ಮೂಲಭೂತ ಸೌಕರ್ಯಗಳು ಉತ್ತಮ ವಾಗಿರುವಂತಹದು. ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕವಿದೆ, ಉತ್ತಮ ರಸ್ತೆಗಳು ಹಾಗೂ ಮೇಲ್ಸೇತುವೆ ಗಳಿವೆ, ವಿಶೇಷವಾಗಿ ಅಧಿಕ ಸಂಖ್ಯೆಯ ಉದ್ಯಾನವನಗಳಿವೆ ಬೆಂಗಳೂರು ದಕ್ಷೀಣ ಅಂದರೆ ಗ್ರೀನಿಷ್ ಪ್ರಕೃತಿಯ ಹಸರಿನ ಕ್ಷೇತ್ರ.
ಇದು ಬಿಜೆಪಿಗೆ ಭದ್ರಕೋಟೆ, ಇಲ್ಲಿ ದಿವಂಗತ ಅನಂತ್ ಕುಮಾರ್ ಆರು ಬಾರಿ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸಿದ್ದರು.ಆದರೆ ಈ ಬಾರಿಯ ಚುನಾವಣೆ ಅಂದುಕೊಂಡಷ್ಟು ಸುಲಭವಾಗಿಲ್ಲ, ಬಿಜೆಪಿ ಕೊನೆ ಕ್ಷಣದಲ್ಲಿ 28 ವರ್ಷದ ಯುವಕ ತೇಜಸ್ವಿ ಸೂರ್ಯ ಕಣಕ್ಕಿಳಿತ್ತು, ಕಾಂಗ್ರೆಸ್ ನಿಂದ ಬಿ.ಕೆ ಹರಿಪ್ರಸಾದ್ ಎಂಬ ಪ್ರಭಾವಿ ರಾಜಕಾರಣಿಯನ್ನು ಕಣಕ್ಕಿಳಿಸಿತ್ತು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಮುಖ ಪರಿಚಯವೇ ಇಲ್ಲ, ಇದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಲೆಕ್ಕಚಾರ ಕಾಂಗ್ರೆಸ್ಸಿಗೆ ಇತ್ತು. ಆರಂಭದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರೆ ತೇಜಸ್ವಿ ಸೂರ್ಯ ನಮಗ್ಯಾರಿಗೂ ಪರಿಚಯ ಇಲ್ಲ ಎಂದು ಅಸಮಧಾನ ಹೋರಹಾಕಿದ್ದರು.ತೆಜಸ್ವಿ ಅನಂತಕುಮಾರ್ ಅವರಿಗೆ ಟಿಕೆಟ್ ಕೋಡಬೇಕಿತ್ತು ಎಂಬುದಾಗಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿದ್ದರು. ನಮಗೆ ಬಹುಭಾಷೆ ಮಾತನಾಡುವ ಸ್ಕಿಲ್ ಇರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧವಾಗಿರುವ ವ್ಯಕ್ತಿ ನಮಗೆ ಬೇಡ, ನಾವು ಆರಿಸುವ ವ್ಯಕ್ತಿ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕು ಎಂದು ಸ್ಥಳಿಯ ಮತದಾರರ ಮಾತಾಗಿತ್ತು
ಇಲ್ಲಿ ಯಾರು ಅಭ್ಯರ್ಥಿ ಎಂಬುದು ಮುಖ್ಯವಾಗಲ್ಲ, ಮತ್ತೊಮ್ಮೆ ಮೋದಿಯೇ ಅವರಿಗಾಗಿ ಬೆಜೆಪಿ ಗೆ ಓಟು ಕೋಡಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಎಲ್ಲರ ಬಯಕೆಯಾಗಿದೆ ಎಂದು ಮತಯಾಚಿಸಲಾಗಿತ್ತು.ನಂತರದಲ್ಲಿ ತೇಜಸ್ವಿ ಸೂರ್ಯ ಅವರ ಅಸಾಧಾರಣ ಮಾತುಗಳು ಮತದಾರನನ್ನು ಸೇಳೆಯುವಲ್ಲಿ ಯಶಸ್ವಿಯಾಗಿ ಬಾರಿ ಬಹುಮತದೊಂದಿಗೆ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲವು ಕಂಡಿದ್ದಾರೆ.ಈ ಗೆಲುವಿನ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಶ್ರಮವೂ ಇದೆ ಎನ್ನಬಹುದು.

ವರದಿ.ವಿವೇಕ್ .ಎಸ್.ಶೆಟ್ಟಿ

Leave a Reply

Your email address will not be published. Required fields are marked *

Don`t copy text!