ಪರಿಸರಕ್ಕೆ ಹಾನಿಯಾಗದ ಮಣ್ಣಿನ ಗಣಪನನ್ನು ಪೂಜಿಸಲು ಕಿಚ್ಚಸುದೀಪ್ ಕರೆ

ಗೌರಿ, ಗಣೇಶ ಹಬ್ಬಕ್ಕೆ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ.
ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಈಗಾಗಲೆ ಆನುಭವಿಸಿದ್ದೇವೆ. ಹಾಗಾಗಿ ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ , ಪಿಓಪಿ ಗಣೇಶನ ಮೂರ್ತಿಗಳನ್ನ ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ,ಪ್ರಕೃತಿ ಮಾತೆಯನ್ನ ಕಾಪಾಡೋಣ.”ಇದು ನನ್ನ ನಿಮ್ಮ ನಮ್ಮೆಲ್ಲರ ಜವಾಬ್ದಾರಿ” ಎಂದು ಟ್ವೀಟ್ ಮಾಡಿದ್ದಾರೆ

ಪ್ರಾಕೃತಿಕ ವಿಕೋಪಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಶೇರ್ ಮಾಡುವ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Don`t copy text!