ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ನೂತನ ಸಂಸದ ಮುನಿಸ್ವಾಮಿ

ಕೋಲಾರ :-ರಾಜ್ಯದ ರಾಜಕಾರದಲ್ಲಿ ಮುಂದಿನ ದಿನಗಳಲ್ಲಿ ಮಹತ್ತರವಾದ ಬದಲಾವಣೆಯಾಗಲಿದೆ ಕಾದು ನೋಡಿ ಎಂದು ಕೋಲಾರದ ನೂತನ ಸಂಸದ ಮುನಿಸ್ವಾಮಿ ಹೇಳಿರುತ್ತಾರೆ.ಅವರು ಕೋಲಾರದಲ್ಲಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿರುತ್ತಾರೆ.
ಯಡಿಯೂರಪ್ಪ ಸರ್ಕಾರ ರಚಿಸಲು ಕೋಲಾರದ ಹಾಲಿ ಮತ್ತು ಮಾಜಿ ಶಾಸಕರು ಸಹಕಾರ ನೀಡಲಿದ್ದಾರೆ ಎಂದು ಹೇಳಿದ ಅವರು ಈಗಾಗಲೆ ಕೆಲವರು ಯಡಿಯೂರನವರ ಸಂಪರ್ಕದಲ್ಲಿ ಇದ್ದು ಎಲ್ಲವೂ ಶೀಘ್ರದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದಿರುತ್ತಾರೆ.
ಕೋಲಾರದ ಲೋಕಸಭೆ ಕ್ಷೇತ್ರದಲ್ಲಿ ಜಿಲ್ಲೆಯ ಜನ ನನ್ನನ್ನು ಗೆಲ್ಲಿಸಿ ಕಾಂಗ್ರೆಸ್ ಮುಕ್ತ ಮಾಡಿರುತ್ತಾರೆ.ಮುಂದಿನ ದಿನಗಳಲ್ಲಿ ನನ್ನ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಐದು ಶಾಸಕರನ್ನು ಗೆಲ್ಲಿಸಿ ಯಡಿಯೂರಪ್ಪನವರಿಗೆ ಕೊಡುಗೆಯಾಗಿ ನೀಡುವ ಮೂಲಕ ಕೋಲಾರದ ವಿಧಾನ ಸಭ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುಕ್ತ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಉತ್ತಮ ಯಶಸ್ಸು ಸಾಧಿಸಲಿರುವುದಾಗಿ ಹೇಳಿದರು.
ಸೋಲಿಲ್ಲದ ಸರ್ದಾರ ಎಂದೆ ಬಿಂಬಿತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಸತತ ಏಳು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಪ್ರಭಾವಿ ಕಾಂಗ್ರೆಸ್ ಮುಖಂದರಾಗಿದ್ದರು,ಅವರು ಸ್ಥಳಿಯವಾಗಿ ಸ್ವಪಕ್ಷೀಯರ ವಿರೋಧ ಹಾಗು ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.
ಸ್ವಾತಂತ್ರ ನಂತರದ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತ ಪಕ್ಷದ ನೂತನ ಸಂಸದ ಮುನಿಸ್ವಾಮಿ ಕಾಂಗ್ರೆಸೇತರ ಎರಡನೆ ಸಂಸದರು.ಮೊದಲ ಕಾಂಗ್ರೆಸೇತರ ಸಂಸದ 1984 ರಲ್ಲಿ ನೇಗಿಲು ಹೊತ್ತ ರೈತನ ಗುರ್ತಿನ ಜನತಾಪಕ್ಷದ ಅಭ್ಯರ್ಥಿ ಡಾ.ವೆಂಕಟೇಶ್ ಗೆಲವು ಸಾದಿಸಿದ್ದರು.

ಪಕ್ಷ ವಿರೋಧಿಗಳಿಗೆ ಖಡಕ್ ವಾರ್ನಿಂಗ್ ಕೋಲಾರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಗೆ ನಾಯಕತ್ವದ ಕೊರತೆ ಇದೆ ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ರ್ಚಚಿಸಿ ಪಕ್ಷ ಸಂಘಟನೆಯಲ್ಲಿ ನಿಷ್ಕಿಯರಾಗಿರುವಂತ ಪದಾದಿಕಾರಿಗಳನ್ನು ಬದಲಾವಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಪಕ್ಷದಲ್ಲಿ ಯಾರು, ಏನು, ಹೇಗೆ? ಪಕ್ಷಕ್ಕಾಗಿ ದುಡಿದವರು, ವಂಚಿಸಿದವರು, ತಟಸ್ಥರಾದವರು ಎಂಬುದು ತಿಳಿದುಕೊಳ್ಳಲಾಗಿದೆ ಈ ಬಗ್ಗೆ ಮಾಹಿತಿ ಇದೆ ಪಕ್ಷಕ್ಕೆ ದ್ರೋಹ ಬಗೆದವರನ್ನು ಪಕ್ಷದ ಕುರಿತಾಗಿ ಹಾದಿ ಬೀದಿಗಳಲ್ಲಿ ವಿರಿದ್ದವಾಗಿ ಮಾತನಾಡುವವರನ್ನು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರನ್ನು ಪಕ್ಷ ಯಾವತ್ತು ಕ್ಷಮಿಸುವುದಿಲ್ಲ ಎಂದ ಅವರು.
ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ಇದನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ನಿರೀಕ್ಷೆ ಈಡೇರಿಸಲು ಪ್ರಯತ್ನಿಸುತ್ತೇನೆ. ಆಗಬೇಕಾದ ಶಾಶ್ವತ ಕಾರ್ಯಗಳ ಬಗ್ಗೆ ರ್ಚಚಿಸಿ ಯೋಜನೆ ರೂಪಿಸಿಕೊಂಡು ಕೇಂದ್ರ ಮತ್ತು ರಾಜ್ಯದಿಂದ ಅನುದಾನ ತಂದು ಮಾದರಿ ಜಿಲ್ಲೆಯನ್ನಾಗಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ನಾಮ ನಿರ್ದೇಶನಕ್ಕೆ ಅವಕಾಶ ನೀಡಿ ಮಾಲೂರು ನಾಗರಾಜ್.
ಬಿಜೆಪಿ ಬಹುದಿನದ ಕನಸು ಈ ಬಾರಿಗೆ ನನಸಾಗಿದೆ ಈ ಗೆಲುವನ್ನು ಮುಂದಿನ 25 ವರ್ಷಗಳವರೆಗೆ ಕಾಪಾಡಿಕೊಳ್ಳಬೇಕಾಗಿದೆ. ಎಂದು ಮಾಲೂರು ಮಾಜಿ ಶಾಸಕ ನಾಗರಾಜ್ ಹೇಳಿದರು. ಕೇಂದ್ರದಲ್ಲಿ ಕಳೆದ 5 ವರ್ಷ ನಮ್ಮದೇ ಸರ್ಕಾರ ಇದ್ದರೂ ಜಿಲ್ಲೆಯಲ್ಲಿ ಯಾರಿಗೂ ನಾಮ ನಿರ್ದೇಶನಗೊಳ್ಳುವ ಅವಕಾಶ ಕಾರ್ಯಕರ್ತರಿಗೆ ಸಿಗಲಿಲ್ಲ ನೂತನ ಸಂಸದರಾಗಿರುವ ಮುನಿಸ್ವಾಮಿ ನಾಮನಿರ್ದೇಶನ ವಿಚಾರವಾಗಿ ಹೆಚ್ಚಿನ ಆಸಕ್ತಿ ತೋರಬೇಕು ಹಾಗೆ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತಂದು ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಸ್ಥಾನಮಾನ ದೊರಕಿಸಿಕೊಡಬೇಕೆಂದು ಸಲಹೆ ನೀಡಿದರು.
ಕೋಲಾರ ಬಿ.ಜೆ.ಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಕ್ಷೇತ್ರದ ಪ್ರಭಾರಿ ಪಾವಗಡ ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್, ಸಿ.ಡಿ.ರಾಮಚಂದ್ರ, ಗ್ರಾಮಾಂತರ ಅಧ್ಯಕ್ಷ ಬೈಚಪ್ಪ, ನಗರದ ಘಟಕ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿಜಯಕುಮಾರ್, ಲಕ್ಷ್ಮಣಗೌಡ, ಜಿಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಇತರರಿದ್ದರು. ಮಹಿಳಾ ಘಟಕ ಸೇರಿ ವಿವಿಧ ಘಟಕಗಳಿಂದ ನೂತನ ಸಂಸದರನ್ನು ಅಭಿನಂದಿಸಲಾಯಿತು.

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!