ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಅಪಘಾತ, ಒರ್ವ ಸಾವು.

ಕೋಲಾರ-ಚಿಂತಾಮಣಿ ರಸ್ತೆಯ ಮೈಲಾಂಡ್ಲಹಳ್ಳಿ ಗ್ರಾಮದ ಬಳಿ ಅಪಘಾತ. ಬಾಗೇಪಲ್ಲಿ ಘಟಕಕ್ಕೆ ಸೇರಿದ ಬಸ್ಸು ಮಾರುತಿ ಬ್ರಿಝಾ ಕಾರಿಗೆ ಡಿಕ್ಕಿ ಕಾರಿನಲ್ಲಿದ್ದ ಸೀಕಲ್ ರಾಜಕುಮಾರ್ ಸ್ಥಳದಲ್ಲಿಯೇ ಸಾವು.ಬಸ್ಸು ಚಾಲಕನ ಅತಿವೇಗ ಹಾಗು ಅಜಾಗುರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಗ್ರಾಮಸ್ಥರ ಆರೋಪ.

ಕೆಎಸ್‌ಆರ್‌ಟಿಸಿ ಬಸ್-ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಸೀಕಲ್ ರಾಜಕುಮಾರ್ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಚಿಂತಾಮಣಿ ತಾಲೂಕು ಮೈಲಾಂಡ್ಲಹಳ್ಳಿ ಬಳಿಯ ತಿರುವಿನಲ್ಲಿ ನಡೆದಿರುತ್ತದೆ.
ಭಾನುವಾರ ಮಧ್ಯಾನಃ ಸುಮಾರು ಎರಡು ಗಂಟೆಗೆ ಕೋಲಾರದಿಂದ ಬಾಗೇಪಲ್ಲಿಗೆ ಬರುತ್ತಿದ್ದ, ಬಾಗೇಪಲ್ಲಿ ಘಟಕದ ಬಸ್ಸು ಮೈಲಾಂಡ್ಲಹಳ್ಳಿ ತಿರುವಿನಲ್ಲಿ ವೇಗವಾಗಿ ಬಂದು ಎದರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೋದದಿರುತ್ತದೆ. ಡಿಕ್ಕಿ ರಬಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿರುತ್ತದೆ.ಕಾರಿನಲ್ಲಿದ್ದ ಕುರಬೂರು ತಾಲೂಕು ಪಂಚಾಯಿತಿ ಸದಸ್ಯ ಸೀಕಲ್ ರಾಜಕುಮಾರ್(48) ತಲೆ ಹಾಗು ಎದೆಗೆ ತೀವ್ರವಾದ ಹೊಡೆತ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟರೆ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿರುತ್ತಾರೆ.
ಜನರ ಆಕ್ರೋಶ
ಅಪಘಾತ ವಾಗುತ್ತಿದ್ದಂತೆ ಬಸ್ಸಿನ ಚಾಲಕ ಹಾಗು ನಿರ್ವಾಹಕ ಬಸ್ಸು ಬಿಟ್ಟು ಓಡಿ ಹೋಗಿದ್ದು ಹಾಗು ಅಪಘಾತ ವಾದರೂ ಅಧಿಕಾರಿ ವರ್ಗ ಸ್ಪಂದಿದದ ಹಿನ್ನಲೆಯಲ್ಲಿ ಮೈಲಾಂಡ್ಲಹಳ್ಲಿ ಸುಮುತ್ತ ಗ್ರಾಮಸ್ಥರು ಕೋಲಾರ-ಚಿಂತಾಮಣಿ ರಸ್ತೆಯನ್ನು ಎರಡು ಗಂಟೆಗಳ ಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಚಿಂತಾಮಣಿ ಡಿವೈಎಸ್ ಪಿ ಶ್ರೀನಿವಾಸ್ ಸ್ಥಳಕ್ಕೆ ಅಗಮಿಸಿ ಆಕ್ರೋಶ ಭರಿತ ಪ್ರತಿಭಟನೆ ಕಾರರನ್ನು ಸಮಾಧಾನ ಪಡಿಸಿ ಸುಗಮ ಸಂಚಾರಕ್ಕೆ ಅನವು ಮಾಡಿರುತ್ತಾರೆ. ಪ್ರಕರಣವನ್ನು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *

Don`t copy text!