ಕುರುಕ್ಷೇತ್ರ ಸಿನಿಮಾ ತಯಾರಿಕೆ ಅದ್ಭುತ. ಜನ ಮೆಚ್ಚಿದ ಸುಯೋಧನನ ಪಾತ್ರ ಪ್ರೇಕ್ಷಕ ಫುಲ್ ಖುಷ್.

ಚಾಲೆಂಜಿಂಗ್ ಸ್ಟಾರ್ ಮುಖ್ಯಭೂಮಿಕೆಯಲ್ಲಿದ್ದು ಬಹುತಾರಾಗಣದ ಕುರುಕ್ಷೇತ್ರಕ್ಕೆ ಸಿನಿಮಾಗೆ ಅದ್ಭುತವಾದ ಪ್ರತಿಕ್ರಿಯೆ ಪ್ರೇಕ್ಷಕರಿಂದ ಬರುತ್ತಿದೆ. ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಪ್ರದರ್ಶನ ಆರಂಭವಾಗಿದ್ದು ಸಿನಿಮಾ ಅಭಿಮಾನಿಗಳು ವೀಕ್ಷಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟರ್‌ ಸೇರಿದಂತೆ ಎಲ್ಲಾ ಕಡೆ ತಮ್ಮ ಸಂಭ್ರಮವನ್ನು ಸಿನಿ ಪ್ರಿಯರು ಹಂಚಿಕೊಳ್ಳುತ್ತಿದ್ದಾರೆ.

ಕುರುಕ್ಷೇತ್ರ ಸಿನಿಮಾ ಹೇಗಿದೆ ಎಂಬ ಬಗ್ಗೆ ಕೇಳಿಬರುತ್ತಿರುವ ಮಾತುಗಳು ಹೀಗಿದೆ. ಸಿನಿಮಾದಲ್ಲಿನ ಕನ್ನಡ ಭಾಷೆಯ ಸೊಗಡು ಸೂಪರ್ ಆಗಿದೆ. ಸಂಭಾಷಣೆ, ಹಾಡುಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತವೆ. ಭೀಷ್ಮನಾಗಿ ಅಂಬರೀಷ್‌ ಹಾಗೂ ಶಕುನಿಯಾಗಿ ರವಿಶಂಕರ್ ಪಾತ್ರದ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ಣ ಅಂದರೆ ಅರ್ಜುನ್ ಸರ್ಜಾ ಎಂದಿದ್ದಾರೆ ಪ್ರೇಕ್ಷಕರು.
ಈ ಸಿನಿಮಾ ಶುರುವಾಗುವುದು ಸುಯೋಧನನ ಪಾತ್ರ ಪರಿಚಯದ ಮೂಲಕವಾದರೂ, ಮಾತುಗಳ ಆರಂಭಕ್ಕೆ ಮುನ್ನುಡಿ ಬರೆಯುವುದು ಭೀಷ್ಮ (ಅಂಬರೀಶ್‌), ‘ರಾಜನೀತಿ ಕೋವಿದ ನಾನೇ’ ಎಂದು ಅಬ್ಬರಿಸುತ್ತಾ ಬರುವ ಸುಯೋಧನ (ದರ್ಶನ್‌)ನ ಆರ್ಭಟವನ್ನು ನೋಡುವುದೇ ಚಂದ. ಭೀಮಸೇನ ಮತ್ತು ಸುಯೋಧನರ ನಡುವಿನ ಗದಾಯುದ್ಧ ಮತ್ತು ಯುದ್ಧ ಸನ್ನಿವೇಶಗಳು ರೋಚಕತೆ ಉಂಟು ಮಾಡುತ್ತವೆ. ಸಿನಿಮಾದಲ್ಲಿ ಹೇಳಲೇಬೇಕಾದ ಮತ್ತೊಂದು ಅಂಶವೆಂದರೆ ಸಂಭಾಷಣೆ. ಕೌರವ ಮತ್ತು ಪಾಂಡವರ ನಡುವಿನ ತಾಕಲಾಟ, ಯುದ್ಧೋನ್ಮಾದ, ದಾಯಾದಿಗಳ ಮತ್ಸರ ಮತ್ತು ವಂಶ, ವಂಶಗಳ ನಡುವಿನ ಮೇಲಾಟಗಳನ್ನು ಮನಕ್ಕೆ ಮುಟ್ಟುವಂತೆ ಸಂಭಾಷಣೆಯನ್ನು ಕವಿರತ್ನ ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ.

ಕಥಾಹಂದರ
ಕುರುಕ್ಷೇತ್ರ ಎಂದಾಕ್ಷಣ ಥಟ್ಟನೆ ನೆನಪಾಗುವವರು ಪಾಂಡವರು. ಆದರೆ, ಈ ಸಿನಿಮಾ ಕುರು ವಂಶದ ದೊರೆ ಸುಯೋಧನನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ . ಹಾಗಾಗಿ ಈ ಕುರುಕ್ಷೇತ್ರದ ಸಿನಿಮಾದ ಹೀರೋ ಸುಯೋಧನ ಅಲಿಯಾಸ್‌ ದುರ್ಯೋಧನ.
ಕುರುಕ್ಷೇತ್ರದಂತ ಸಿನಿಮಾ ಮಾಡುವುದು ಕನ್ನಡದ ಮಟ್ಟಿಗೆ ಸುಲಭದ ಮಾತಲ್ಲ. ಸೀಮಿತ ಮಾರುಕಟ್ಟೆಗೆ ಆ ದೃಶ್ಯಗಳನ್ನು ಹೊಂದಿಸುವುದು ತುಂಬಾನೆ ಕಷ್ಟ ಸಾಧ್ಯ. ಈ ಎಲ್ಲ ಸಾಧ್ಯ, ಅಸಾಧ್ಯಗಳನ್ನು ಒಟ್ಟಾಗಿಸಿ ಸಿನಿಮಾ ಮಾಡಿದ್ದಾರೆ ಡೈನಮಿಕ್ ನಿರ್ಮಾಪಕ ಮುನಿರತ್ನ ಮತ್ತು ನಿರ್ದೇಶಕ ನಾಗಣ್ಣ. ಅವರ ಶ್ರಮ ತೆರೆಯ ಮೇಲೆ ಭವ್ಯ ಅರಮನೆಯಂತೆ ಶೃಂಗಾರವಾಗಿ ಅನಾವರಣವಾಗಿದೆ. ಪಾಂಡವರ ಮತ್ತು ಕೌರವರ ನಡುವಿನ ರೋಚಕ ಸಂಗತಿಗಳನ್ನು ಅಷ್ಟೇ ಸೊಗಸಾಗಿ ಸೆರೆಹಿಡಿಯಲಾಗಿದೆ. ಪಾತ್ರಗಳ ಆಯ್ಕೆ, ದೃಶ್ಯಗಳನ್ನು ಸಿಂಗರಿಸಿರುವ ರೀತಿ, ಆಡುವ ಸಂಭಾಷಣೆ ಮತ್ತು ಸಂಗೀತದ ಅಲಂಕಾರಗಳಿಂದಾಗಿ ಕುರುಕ್ಷೇತ್ರ ಅದ್ಭುತ, ಆತಿ ಅದ್ಭುತವಾಗಿದೆ
ಗ್ರಾಫಿಕ್ಸ್‌ ನಲ್ಲಿ ಯುದ್ಧ ತಂತ್ರಗಾರಿಕೆ ದೃಶ್ಯಗಳು ಉತ್ತಮವಾಗಿದೆ ಇನ್ನೂ ಕುಸುರಿ ಕೆಲಸ ಬೇಕಿತ್ತೇನೋ ಆದರೂ, ತ್ರಿಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ ಎಲ್ಲ ಸಂಗತಿಗಳು ನೋಡುಗರನ್ನು ರೋಮಾಂಚನಗೋಳಿಸುತ್ತದೆ. ಮಯಾ ಸಭೆಗಾಗಿ ಸಿದ್ಧವಾಗಿದ್ದ ಭವ್ಯ ಸಭಾಂಗಣವು ಕಲಾ ನಿರ್ದೇಶಕರ ಕಾರ್ಯಕ್ಕೆ ಕನ್ನಡಿ ಹಿಡಿದಂತಿದೆ.
ಚಾರು ತಂತಿ ನಿನ್ನ ತನವು ಹಾಡು ಸ್ವರ್ಗವನ್ನೇ ಧರೆಗಿಳಿಸುವಂತಿದೆ. ಈ ಹಾಡಿನಲ್ಲಿ ಮೇಘನಾ ರಾಜ್‌ ಮತ್ತು ದರ್ಶನ್‌ ಜೋಡಿ ಅದ್ಭುತವಾಗಿ ನಟಸಿದ್ದಾರೆ ಭಾನುಮತಿಯಾಗಿ ಮೇಘನಾ ರಾಜ್‌, ದ್ರೌಪದಿಯಾಗಿ ಸ್ನೇಹಾ, ಧರ್ಮರಾಯನಾಗಿ ಶಶಿಕುಮಾರ್‌, ಗಾಂಧಾರ ರಾಜನಾಗಿ ಅವಿನಾಶ್‌ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅಭಿಮನ್ಯು ಪಾತ್ರಕ್ಕೆ ಮತ್ತಷ್ಟು ನಿಖಿಲ್‌ ಜೀವ ತುಂಬಬೇಕಿತ್ತು ಅಂತ ಅನಿಸದೇ ಇರದು.ಚನ್ನಾಗಿ ನಟಿಸಿದ್ದಾರೆ.ಇಳಿ ವಯಸ್ಸಿನಲ್ಲಿ ಭೀಷ್ಮನಾಗಿ ಅಂಬರೀಶ್‌ ಮನ ಮೆಚ್ಚುವಂತೆ ನಟಸಿದ್ದಾರೆ.

ದರ್ಶನ್ ತೂಗದೀಪ ನಟನೆಗಾಗಿ
ಕುರುಕ್ಷೇತ್ರ ಸಿನಿಮಾ ಪೌರಾಣಿಕ ಸಿನಿಮಾ ಆಗಿದ್ದು 2ಡಿ ಮತ್ತು 3ಡಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದರು. ಇದಕ್ಕೆ ಕಾರಣ ದೊಡ್ಡ ತಾರಾಗಣ ಹಾಗು ವಿಶೇಷ ಅಂದರೆ ಡಿ.ಬಾಸ್ ದರ್ಶನ್ ತೂಗದೀಪ ನಟನೆಗಾಗಿ.
ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ರಿಲೀಸ್ ಆಗಿದ್ದು ಕನ್ನಡ ಸಿನಿಮಾ ಬೇರೆ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ. ದರ್ಶನ್ ಜತೆಗೆ ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಅಂಬರೀಷ್, ಸ್ನೇಹಾ ಸೇರಿದಂತೆ ಹಲವಾರು ತಾರೆಗಳಿಂದ ಸಿನಿಮಾ ತುಂಬಿ ತುಳುಕುತ್ತಿದ್ದು ಇನ್ನಷ್ಟು ಕುತೂಹಲ ಕೆರಳಿಸಿದೆ. ಟ್ವಿಟರ್‌ನಲ್ಲಿ ಕುರುಕ್ಷೇತ್ರ ಸಿನಿಮಾ ಬಗ್ಗೆ ಹರಿದುಬರುತ್ತಿರುವ ಪ್ರತಿಕ್ರಿಯೆಗಳ ಮೇಲೊಂದು ಝಲಕ್.
ಸೋನು ಸೂದ್ ಸೇರಿದಂತೆ ಚಿತ್ರದ ತಾರಾ ಬಳಗದ ಹಲವಾರು ಮಂದಿ ತಾರೆಗಳು ಟ್ವೀಟ್ ಮಾಡಿದ್ದು ಸಿನಿಮಾ ವೀಕ್ಷಿಸಿ ಎಂದಿದ್ದಾರೆ. ಯುಎಸ್‌‍ನಿಂದಲೂ ಸಿನಿಮಾ ಕುರಿತು ಪ್ರತಿಕ್ರಿಯೆಗಳು ಬರುತ್ತಿವೆ. ಇದು ತ್ರಿಡಿ ಸಿನಿಮಾ ಆಗಿದ್ದು ಚಿತ್ರದಲ್ಲಿ ಯಾವ ರೀತಿಯ ತಂತ್ರಜ್ಞಾನ ಬಳಕೆಯಾಗಿದೆ, ಚಕ್ರವ್ಯೂಹ ಭೇದಿಸುವ ಸನ್ನಿವೇಶ ಹಾಗೂ ಕೌರವರು ಮತ್ತು ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧ ಸನ್ನಿವೇಶಗಳು ಯಾವ ರೀತಿ ಮೂಡಿಬಂದಿವೆ ಎಂಬ ಕುತೂಹಲ ಇದ್ದೇ ಇದೆ.
ಸೆಟ್, ಕಾಸ್ಟ್ಯೂಮ್ ಸೇರಿದಂತೆ ಎಲ್ಲವನ್ನೂ ಅದ್ದೂರಿಯಾಗಿಯೇ ತೆರೆಗೆ ತರಲಾಗಿದೆ. ಕುರುಕ್ಷೇತ್ರ ಸಿನಿಮಾದ ಮೂಲಕ ಇಂತಹ ಇನ್ನಷ್ಟು ದುಬಾರಿ ಸಿನಿಮಾಗಳು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ನಿರ್ಮಾಣವಾಗಲಿವೆಯೇ? ಎಂಬ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಬಹುದೊಡ್ದ ತಾರಾಗಣ ಇದೆ ದರ್ಶನ್, ರವಿಚಂದ್ರನ್, ಅಂಬರೀಷ್, ಅರ್ಜುನ್ ಸರ್ಜಾ, ಮೇಘನಾ ರಾಜ್, ಸೋನು ಸೂದ್, ಪಿ ರವಿಶಂಕರ್, ರವಿಶಂಕರ್ ಗೌಡ, ನಿಖಿಲ್ ಕುಮಾರಸ್ವಾಮಿ, ದಿನಕರ್ ತೂಗುದೀಪ, ಸ್ನೇಹಾ, ಹರಿಪ್ರಿಯಾ, ಶಶಿಕುಮಾರ್, ಶ್ರೀನಿವಾಸ ಮೂರ್ತಿ, ಶ್ರೀನಾಥ್.

ರಾಕ್ ಲೈನ್ ವೆಂಕಟೇಶ್ ಅರ್ಪಿಸಿರುವ, ಚಿತ್ರವನ್ನು ವೃಷಬಾದ್ರಿ ಬ್ಯಾನರ್ ನಲ್ಲಿ ಡೈನಮಿಕ್ ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡಿದ್ದು ವಿ ಹರಿಕೃಷ್ಣ ಸಂಗೀತ: ನೀಡಿರುತ್ತಾರೆ. ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸಿರುತ್ತಾರೆ.

ವರದಿ:-ವಿಸಿಎಸ್ ನೂಜ್ ತಂಡದೊಂದಿಗೆ, ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!