ಚಿಂತಾಮಣೆಯ ಮುರುಗಮಲೆ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ!?

ಚಿಂತಾಮಣೆ:-ಹಿಂದು ಮತ್ತು ಮುಸ್ಲಿಮರ ಪವಿತ್ರ ಯಾತ್ರ ಸ್ಥಳವಾದ ಚಿಂತಾಮಣೆ ತಾಲುಕಿನ ಮುರುಗಮಲೆ ಗ್ರಾಮದ ಶ್ರೀ ಮುಕ್ತಿಶ್ವರ ಬೆಟ್ಟದಲ್ಲಿ ಗುರುವಾರ ಮುಂಜಾನೆ ಚಿರತೆ ಪ್ರತ್ಯಕ್ಷವಾಗಿದೆ ಇದರಿಂದ ಮುರುಗಮಲೆ ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ. ಬಿಸಿಲಿಗೆ ಮೈಯೊಡ್ಡಿ ಬೆಟ್ಟದ ಕಲ್ಲಿನ ಮೆಲೆ ಕುಳಿತಿರುವ ಚಿರತೆಯನ್ನು ಗ್ರಾಮಸ್ಥರು ಕಂಡಿರುವುದಾಗಿ ಹೇಳುತ್ತಾರೆ. ಗ್ರಾಮದ ಯುವಕರು ಮೊಬೈಲಿನಲ್ಲಿ ಫೋಟೋ ಮಾಡಿರುತ್ತಾರೆ ಆದರೂ ಚಿರತೆ ಬಣ್ಣ ಕಲ್ಲಿನ ಬಂಡೆಯ ಬಣ್ಣ ಒಂದೇ ಆದ ಕಾರಣ ಚಿರತೆಯ ಸ್ಪಷ್ಟವಾಗಿ ಫೊಟೊ ಬರಲಿಲ್ಲ ಎಂದು ಎಂದು ಗ್ರಾಮಸ್ಥರು ಹ್ಯಾಂಡಿಕ್ಯಾಮರ ಮೂಲಕ ಚಿತ್ರಿಕರಿಸಿರುತ್ತಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕಲ್ಲಿನ ಮೆಲೆ ಕುಳತಿದ್ದ ಚಿರತೆ ನಿಧಾನವಾಗಿ ಹೆಜ್ಜೆ ಹಾಕುತ್ತ ಕಲ್ಲಿನ ಮರೆಗೆ ಗುಹೆಯೊಳಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನುತ್ತಾರೆ. ಮುರುಗಮಲೆ ಬೆಟ್ಟದಲ್ಲಿ ಶ್ರೀ ಮುಕ್ತಿಶ್ವರ ದೇವಾಲಯ ಹಾಗು ಅಯ್ಯಪ್ಪ ಸ್ವಾಮಿ ದೇವಾಲಯ ಇದ್ದು ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬೆಟ್ಟಕ್ಕೆ ಬರುತ್ತಾರೆ ಸೋಮವಾರ ಹಾಗು ಇತರೆ ಹಬ್ಬ ಹರಿದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಬರುತ್ತಾರೆ. ಬೆಟ್ಟ ಹತ್ತುವ ದಾರಿಯಾಲಿ ಜಿಂಕೆ ನವಿಲು ಒಡಾಡುವುದು ಭಕ್ತಾಧಿಗಳು ಹಲವು ಬಾರಿ ನೋಡಿರುತ್ತಾರೆ.ಆದರೆ ಕಳೆದ ತಿಂಗಳು ಮೇ೧೮ ರಂದು ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದ ಬಗ್ಗೆ ಸುದ್ಧಿ ಹರಡಿ ಗ್ರಾಮದ ಯುವಕರು ತಮ್ಮ ಮೊಬೈಲ್ ಗಳಲ್ಲಿ ಚಿತ್ರಮಾಡಿದ್ದರಾದರು ಚಿರತೆ ಸುದ್ದಿಗೆ ಹೆಚ್ಚಿನ ಮಹತ್ವ ಸಿಕ್ಕಿರಲಿಲ್ಲ ಗುರುವಾರ ಬೆಳಿಗ್ಗೆ ನಡೆದ ಘಟನೆ ಗ್ರಾಮದ ಜನರನ್ನು ಆತಂಕಕ್ಕೆ ಈಡು ಮಾಡಿದೆ.
ಗ್ರಾಮದಲ್ಲಿ ಮುಸ್ಲಿಮರ್ ಪವಿತ್ರ ಅಮ್ಮಾ ಜಾನ್ ಬಾವಾ ಜಾನ ದರ್ಗಾ ಗ್ರಾಮದಲ್ಲಿ ಇದೆ. ಇಲ್ಲಿಗೂ ಸಹ ದೊಡ್ದ ಸಂಖ್ಯೆಯಲ್ಲಿ ಭಕ್ತಾದಿಗಳು ಆಂಧ್ರ, ತಮಿಳುನಾಡುಗಳಿಂದ ಬರುತ್ತಾರೆ ಇಲ್ಲಿ ಅಡಿಗೆ ಮಾಡಿ ತಿನ್ನುವುದು ವಾಡಿಕೆ ಸುತ್ತ ಮುತ್ತ ನಿರ್ಜನ ಪ್ರದೇಶಗಳಲ್ಲಿ ದರ್ಗಾ ಭಕ್ತರು ಒಡಾಡುತ್ತ ಇರುತ್ತಾರೆ.

ಬೆಟ್ಟದಲ್ಲಿ ಚಿರತೆ ಇರುವುದೆಲ್ಲಿ?
ಗ್ರಾಮಸ್ಥರು ಅಂದಾಜಿಸಿರುವಂತೆ ಹಿಂದಿನ ತಿಂಗಳು ಕಾಣಿಸಿರುವ ಚಿರತೆ ಬೆಟ್ಟದಲ್ಲಿ ಗುಹೆಯಲ್ಲೆ ಇದ್ದು ಅಹಾರವಾಗಿ ಬೆಟ್ಟದಲ್ಲಿ ಇರುವಂತ ಹಸುಗಳನ್ನು ತಿನ್ನುತ್ತ ಬೆಟ್ಟದಲ್ಲಿ ಪ್ರಕೃತಿ ನಿರ್ಮಿತ ಕಲ್ಯಾಣಿಯಲ್ಲಿ ನೀರನ್ನು ಕುಡಿಯುತ್ತ ಅಲ್ಲಿಯೇ ವಾಸವಿದೆ ಎನ್ನುತ್ತಾರೆ.
ಈ ಬಗ್ಗೆ ಅರಣ್ಯ ಅಧಿಕಾರಿಗಳು ಯಾವುದನ್ನು ಅಧಿಕೃತವಾಗಿ ಖಚಿತ ಪಡಿಸಿಲ್ಲ. ಎನ್ನಲಾಗಿದೆ.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!