ಎಂಜನೀಯರ್ ಮೇಲೆ ಕೆಸರಿನ ಮಣ್ಣು ಸುರಿದ ಮಹರಾಷ್ಟ್ರದ ಶಾಸಕ.

ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದನ ಪುತ್ರ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ ಘಟನೆ, ಮೊನ್ನೆ ತೆಲಂಗಾಣದಲ್ಲಿ ಆಡಳಿತ ರೂಡ ತೆರಾಸ ಶಾಸಕನ ತಮ್ಮ ಜಿಲ್ಲಾಪಂಚಾಯಿತಿ ಉಪಧ್ಯಾಕ್ಷ ,ಮಹಿಳಾ ಅರಣ್ಯಾಧಿಕಾರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವಂತ ಘಟನೆಗಳು ಮಾಸುವ ಮುನ್ನವೇ ಮತ್ತೆ ಅಂತಹದೊಂದು ಘಟನೆ ಗುರುವಾರ ಮಹಾರಾಷ್ಟ್ರದಲ್ಲಿ ನಡೆದಿದೆ.

ಕೆಸರಿನ ಮಣ್ಣನ್ನು ಸುರಿದು ಬೆದರಿಸುತ್ತಿರುವ ಶಾಸಕ

ಮಹಾರಾಷ್ಟ್ರ ಮಾಜಿ ಸಿಎಂ ಪ್ರಭಾವಿ ರಾಜಕಾರಣಿ ನಾರಾಯಣ್ ರಾಣೆ ಅವರ ಪುತ್ರ ಕಾಂಗ್ರೆಸ್ ಪಕ್ಷದ ಶಾಸಕ ನಿತೇಶ್ ರಾಣೆ ಒರ್ವ ಎಂಜಿನೀಯರ್ ಮೇಲೆ ಕಾರ್ಯಕರ್ತರೊಂದಿಗೆ ಸೇರಿ ಕೆಸರಿನ ಮಣ್ಣನ್ನು ಸುರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಲ್ಲಿನ ಬ್ರಿಡ್ಜ್ ಗೆ ಕಟ್ಟಿಹಾಕಿ ಅಮಾನುಷವಾಗಿ ವರ್ತಿಸಿದ್ದಾರೆ.
ಮಾಧ್ಯಮ ವರದಿಯಂತೆ ಶಾಸಕ ನಿತೇಶ್ ನಾರಾಯಣ್ ರಾಣೆ, ಮಹಾರಾಷ್ಟ್ರ, ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆ ಮಾಡಲು ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಅಧಿಕಾರಿ ವಿರುದ್ದ ಕೆಂಡಾಮಂಡಲವಾದು ಯುವ ಶಾಸಕ ರಾಣೆ ಎಂಜಿನಿಯರ್ ಅವರನ್ನು ಹಿಯ್ಯಾಳಿಸಿದ್ದಾರೆ. ನಿನಗೆ ಜನರ ಪರಿಸ್ಥಿತಿ ಬಗ್ಗೆ ಗೊತ್ತಾ? ನಿನಗೆ ಬೇಗ ಪಿಲ್ಲರ್​ ಕಟ್ಟಿಬಿಡಬೇಕು. ಯಾರು ಈ ಮೋರಿಗಳನ್ನು ನಿರ್ಮಿಸಿದವರು. ಇಲ್ಲಿ ನೀರು ಹೇಗೆ ಹರಿಯುತ್ತದೆ. ಯಾಕಿಷ್ಟು ನಿರ್ಲಕ್ಷ್ಯ ವಹಿಸಿದ್ದೀರಾ. ನಿನಗೆ ಗೊತ್ತಾ, ಈ ರಸ್ತೆಯಲ್ಲಿ ಎಷ್ಟು ಜನರು ಓಡಾಡುತ್ತಾರೆ ಎಂದು ಕೋಪದಲ್ಲಿ ಪ್ರಶ್ನೆಗಳನ್ನು ಕೇಳಿ ನಿಂದಿಸಿದ್ದಾರೆ.
ನೀನು ಮಾತ್ರ ಶುಚಿಯಾದ ಬಟ್ಟೆಯನ್ನು ಹಾಕಿಕೊಂಡು, ಎಸಿ ಕಾರಿನಲ್ಲಿ ಓಡಾಡುತ್ತಿಯಾ. ಜನಗಳು ಈ ಕೊಳಕು ಮಣ್ಣಿನಲ್ಲಿ ಜೀವನ ನಡೆಸಬೇಕಾ ಎಂದು ಶಾಸಕರು ಎಂಜಿನಿಯರ್​ಗೆ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಶಾಸಕರ ಬೆಂಬಲಿಗರು ಬಕೆಟ್​ನಲ್ಲಿ ಕೆಸರು ಮಣ್ಣು ತುಂಬಿಕೊಂಡು ಬಂದು, ಎಂಜಿನಿಯರ್ ಮೇಲೆ ಸುರಿದಿದ್ದಾರೆ.
ಕೆಸರು ಎರಚುವ ದೃಶ್ಯ ಸಾಮಾಜಿಅಕ ಜಾಲತಾಣಗಳಲ್ಲಿ ವೈರಲ್ ಆಗಿರುತ್ತದೆ.
ಘಟನೆಯ ಕುರಿತಾಗಿ ಕುಡಾಲ್ ಪೊಲೀಸ್ ಠಾಣೆಯಲ್ಲಿ ಎಂಜಿನಿಯರ್ ದೂರು ದಾಖಲಿಸಿದ್ದು, ನಂತರ ಅದನ್ನು ಕಂಕವಲ್ಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಸಿಂಧುದುರ್ಗ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆದಮ್, ನಿಡಿರುವ ಮಾಹಿತಿಯಂತೆ ಘಟನೆಯಲ್ಲಿ ಭಾಗಿಯಾದ ನಿತೇಶ್ ರಾಣೆ ಮತ್ತು ಆತನ 16 ಬೆಂಬಲಿಗರನ್ನು ಬಂಧಿಸಲಾಗಿದೆ. ಸರ್ಕಾರಿ ನೌಕರನ ಮೇಲೆ ಹಲ್ಲೆ, ಸರ್ಕಾರಿ ನೌಕರನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯೊಡ್ಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಅಪರಾಧ ಬೆದರಿಕೆ, ಪಿತೂರಿ ಮತ್ತು ಸಾಮಾನ್ಯ ಉದ್ದೇಶ, ಬೆದರಿಕೆ, 353, 332, 342, 324, 323, 143, 148, 149, 147, 120-ಬಿ, 504, 506 ಐಪಿಸಿ ಮತ್ತು ಸಾರ್ವಜನಿಕ ಆಸ್ತಿ ಕಾಯ್ದೆಯ ಹಾನಿಯ ಸೆಕ್ಷನ್ 3 ರ ಅಡಿಯಲ್ಲಿ ತಪ್ಪಾದ ಸಂಯಮ. ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಗುವುದು ಎಂದಿರುತ್ತಾರೆ.
ಸರ್ವತಾ ಈ ಘಟನೆ ಕುರಿತಾಗಿ ಖಂಡಿಸಲಾಗಿದೆ. ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳು ಮತ್ತು ರಾಜ್ಯದ ಮಂತ್ರಿಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುತ್ತಾರೆ.
ಮಹಾರಾಷ್ಟ್ರದ ಗೃಹ ಸಚಿವ ದೀಪಕ್ ಕೇಸರ್ಕರ್, ಅವರು ಮಾತನಾಡಿ ಯಾರೇ ಆಗಿರಲಿ ಇ0ತಹ ಕೃತ್ಯ ಎಸಗುವುದು ಅಪರಾಧ ಎಂದಿರುತ್ತಾರೆ.ಯಾರಾದರು ಸರಿ ಕ್ರಮವನ್ನು ಎದುರಿಸಬೇಕಾಗುತ್ತದೆ.
ಏತನ್ಮಧ್ಯೆ, ನಾರಾಯಣ್ ರಾಣೆ ತಮ್ಮ ಮಗನ ವರ್ತನೆಯನ್ನು ಖಂಡಿಸಿ ಕ್ಷಮೆಯಾಚಿಸಿರುತ್ತಾರೆ

ಯಾರು ನಿತಿಶ್ ರಾಣೆ
ನಿತಿಶ್ ರಾಣೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ 37 ವರ್ಷದ ಯುವ ಶಾಸಕ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಯಣರಾಣೆಯವರ ಪುತ್ರ. ನಿತಿಶ್ ರಾಣೆ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿ ನಂತರ ಪಕ್ಷ ತೊರೆದ ಅವರು ಸದ್ಯ ತಮ್ಮದೆ ಆದ ಸ್ವಾಬಿಮಾನ ಸೇನಾ ಎಂಬ ಹೆಸರಿನ ತಮ್ಮದೇ ಪಕ್ಷವನ್ನು ರಚಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ವಿದೇಶದಲ್ಲಿ ಎಂಬಿಎ ಓದಿದ್ದಾರೆ. ಮೊನ್ನೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ನಿತಿಶ್ ಅವರ ತಂದೆ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ಉಮೇದುವಾರಿಕೆಯನ್ನು ಬಿಜೆಪಿ ಬೆಂಬಲಿಸಿತ್ತು.

ಪ್ರಧಾನಿ ಮೋದಿ ಅವರು ಮೊನ್ನೆ ಸಂಸತ್ತಿನಲ್ಲಿ ಮಾತನಾಡಿ, ಹಲ್ಲೆ ಮಾಡಿದವರು ಯಾರ ಮಗನಾದರೇನು. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೆ ಕಳಪೆ ರಸ್ತೆ ಕಾಮಗಾರಿ ಮಾಡಿದ್ದಾನೆ ಎಂದು ಎಂಜಿನಿಯರ್ ಮೇಲೆ ಮಣ್ಣು ಸುರಿದ ಮಹಾರಾಷ್ಟ್ರದ ಶಾಸಕ ಅಮಾನುಷವಾಗಿ ವರ್ತಿಸಿದ್ದಾನೆ.

ವರದಿ ಸಂಗ್ರಹ:-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!