ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮಾಲೂರು ಶಾಸಕ ನಂಜೇಗೌಡ ಎರಡನೇ ಬಾರಿಗೆ ಅಧ್ಯಕ್ಷ

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಲೂರಿನ ಶಾಸಕ ನಂಜೇಗೌಡ ಎರಡನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇತ್ತಿಚಿಗಷ್ಟೆ ಹಾಲು ಒಕ್ಕೂಟ ನಿರ್ದಶಕರುಗಳ ಸ್ಥಾನಕ್ಕೆ ಚುನಾವಣೆ ನಡೆದಿತ್ತು.ಮಾಲೂರಿನ ಶಾಸಕ ನಂಜೇಗೌಡ ಸೇರಿದಂತೆ ಬಹುತೇಕ ಸದಸ್ಯರು ಕಾಂಗ್ರೆಸ್ ಬೆಂಬಲಿತರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಂದು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ನಂಜೇಗೌಡ ಒಬ್ಬರೆ ನಾಮ ಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ನಂಜೇಗೌಡ ಕೋಲಾರ-ಚಿಕ್ಕಬಳ್ಳಾಪುರದ ಜನಪ್ರತಿನಿಧಿಗಳ ಸಹಕಾರದಿಂದ ಎರಡನೆ ಬಾರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ ಇದಕ್ಕಾಗಿ ಎಲ್ಲರಿಗೂ ಕೃತಙ್ಞತೆ ಸಲ್ಲಿಸುವುದಾಗಿ ಹೇಳಿದ ಅವರು ಮತ್ತಷ್ಟು ಜವಬ್ದಾರಿಗಳು ಹೆಚ್ಚಾಗಿದೆ ಎಂದ ಅವರು ಸಂಸ್ಥೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಇತರೆ ಎಲ್ಲಾ ನಿರ್ದೇಶಕರ ಸಹಕಾರ ಕೋರುವುದಾಗಿ ತಿಳಿಸಿದರು.ಅಧ್ಯಕ್ಷ ಚುನಾವಣೆಯಲ್ಲಿ ಕೋಲಾರ ಜಿಲ್ಲ ಉಸ್ತುವಾರಿ ಸಚಿವ ಕೃಷ್ಣೇಭೈರೇಗೌಡ ಹಾಗು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ ಉಪಸ್ಥಿತರಿದ್ದರು.ನೂತನ ಅಧ್ಯಕ್ಷರಿಗೆ ಚಿಕ್ಕಬಳ್ಳಾಪುರ ಮಾಜಿ ಶಾಸಕ ಬಚ್ಚೇಗೌಡ, ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ, ನೂತನ ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್, ಶ್ರೀನಿವಾಸಪುರದ ಹನುಮೇಶ್,ಉಲವಾಡಿಬಾಬು ಮುಂತಾದವರು ಅಭಿನಂಧನೆ ಸಲ್ಲಿಸಿದರು.

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!