ದೇಶದಲ್ಲಿ ಮೋದಿ ಮೇನಿಯಾ, ಕೋಲಾರದಲ್ಲೂ ಅರಳಿದ ಕಮಲ.

ಕೋಲಾರದ ಸೊಲಿಲ್ಲದ ಸರದಾರ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಸ್ವಪಕ್ಷೀಯರ ತೀವ್ರ ವಿರೋಧದ ನಡುವೆ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಹೀನಾಯ ಸೋಲು ಅನುಭವಿಸಿದ್ದಾರೆ.

ಕೋಲಾರ:- ನಾಲ್ಕು ದಶಕಗಳ ನಂತರ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹೊರತು ಪಡಿಸಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಗೆಲುವು ಸಾಧಿಸಿದ್ದಾರೆ. ಡಬಲ್ ಹ್ಯಾಟ್ರಿಕ್ ಗೆಲವು ಸಾಧಿಸಿ ಏಳನೇಯ ಗೆಲುವನ್ನು ಸಹ ಸಾಧಿಸಿ ಎಂಟನೆ ಗೆಲವಿಗೆ ಮುಂದಾಗಿದ್ದ ಮುನಿಯಪ್ಪ ಅವರನ್ನು ಕೋಲಾರದ ಜನತೆ ತಿರಸ್ಕರಿಸಿದ್ದಾರೆ.
ದೇಶದೆಲ್ಲೆಡೆ ಎದ್ದ ಮೋದಿ ಅಲೆ ಹಾಗು ಸ್ಥಳಿಯವಾಗಿ ಕಾಂಗ್ರೆಸ್ ಮುಖಂಡರ ಮುನಿಯಪ್ಪ ವಿರುದ್ದದ ಅಸಹನೆಯ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿದೆ.
ಕಾಂಗ್ರೆಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿ ತಾವರೆ ಅರಳಿದೆ. ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಕಮಲ ನಾಯಕರ ದಶಕಗಳ ಹೋರಾಟದಲ್ಲಿ ಈ ಬಾರಿ ಗೆಲುವು ಕಂಡಿದೆ.ಹಲವು ಚುನಾವಣೆಗಳಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ ಬಿ.ಜೆ.ಪಿ ಗೆಲವು ಸಾಧಿಸಲು ಸಾಧ್ಯವಾಗಿರಲಿಲ್ಲ.
ಕೋಲಾರದಲ್ಲಿ ಕಾಂಗ್ರೆಸ್ ಸೋಲಿಗೆ ಹಲವಾರು ಕಾರಣಗಳು ಎನ್ನಬಹುದು ಅಭ್ಯರ್ಥಿಯ ವೈಯುಕ್ತಿಕ ವರ್ಚಸಿಗೆ ತೊಂದರೆಯಾಗಿದ್ದು ಸ್ವಪಕ್ಷೀಯ ಮುಖಂಡರನ್ನು ವಿರೋಧ ಕಟ್ಟಿಕೊಂಡು ಸ್ವಯಂಕೃತ ಅಪರಾಧ ಒಂದಡೆಯಾದರೆ. ದೇಶದಲ್ಲಿ ಎದ್ದಿರುವ ಮೋದಿ ಅಲೆಯಿಂದ ಕೋಲಾರದಲ್ಲಿ ಬಿ.ಜೆ.ಪಿ ಗೆಲುವಿಗೆ ಅನಕೂಲವಾಯಿತು ಎನ್ನಲಾಗುತ್ತಿದೆ. ಕೋಲಾರದ ಸಂಸದರಾಗಿದ್ದ ಮುನಿಯಪ್ಪ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ,ರಾಹುಲ್ ಅವರೊಂದಿಗೆ ಮಾತನಾಡುವಷ್ಟು ಪ್ರಭಾವಿ ಶಾಲಿ.2014 ರ ಮೋದಿ ಅಲೆಯಲ್ಲೂ ಗೆಲವು ಸಾದಿಸಿದ್ದ ಮುನಿಯಪ್ಪ ಈ ಬಾರಿ ಸ್ವಪಕ್ಷೀಯರ ಪ್ರಭಲ ವಿರೋಧ ವ್ಯಕ್ತವಾದ ಹಿನ್ನಲೆ ಹಾಗು ಮುನಿಯಪ್ಪ ಅವರ ಸೋಲಿಗೆ ಜನಮಾನಸದಲ್ಲಿ ಎದಿದ್ದ ಬಹು ದೊಡ್ದ ಪ್ರಶ್ನೆ ಏನೆಂದರೆ ಮುನಿಯಪ್ಪ ಕೋಲಾರಕ್ಕೆ ಏನು ಮಾಡಿದ್ದಾರೆ. ಇದು ಕ್ಶೇತ್ರಾದ್ಯಂತ ಜನಸಾಮನ್ಯರು ಕೇಳುತಿದ್ದರು ಇದೇ ಅವರ ಸೋಲಿಗೆ ಪ್ರಮುಖ ಕಾರಣವಾಗಿ ಎರಡು ಲಕ್ಷ ಮತಗಳ ಅಂತರದಲ್ಲಿ ಸೋತಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಭಾರತೀಯ ಜನತಾ ಪಕ್ಣದ ಮುನಿಸ್ವಾಮಿ ಅವರಿಗೆ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಮಂಜುನಾಥ್ ಅವರಿಂದ ಪ್ರಮಾಣಪತ್ರವನ್ನು ಪಡೆದರು.

ವಿಧಾನಸಭಾ ಕ್ಷೇತ್ರವಾರು ಪಡೆದಿರುವಂತ ಮತಗಳ ವಿವರ ಹೀಗಿದೆ
ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ 7,09,165,ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪಗೆ 4,99,144,ಎಸ್.ಮುನಿಸ್ವಾಮಿ 2,10,021 ಮತಗಳ ಅಂತರದಿಂದ ಗೆಲುವು ಸಾದಿಸಿರುತ್ತಾರೆ. ನೋಟಾಗೆ 13,889 ಮತಗಳು ಬಿದ್ದಿವೆ. ಅಂಚೆ ಮತಗಳ ವಿವರ ಬಿಜೆಪಿ ಮುನಿಸ್ವಾಮಿಗೆ 1235 ಮತಗಳು,ಕಾಂಗ್ರೆಸ್ ನ ಕೆ.ಎಚ್.ಮುನಿಯಪ್ಪಗೆ 885 ಮತಗಳು ಬಂದಿರುತ್ತದೆ. ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮತಗಳ ವಿವರ.

ಕೋಲಾರ ಕ್ಷೇತ್ರ
ಬಿಜೆಪಿ – 96,144
ಕಾಂಗ್ರೆಸ್ – 71,188
ಬಿಜೆಪಿಗೆ 24,956 ಮತಗಳ ಲೀಡ್

ಮಾಲೂರು ಕ್ಷೇತ್ರ
ಬಿಜೆಪಿ – 91,683
ಕಾಂಗ್ರೆಸ್ – 56,986ಬಿಜೆಪಿಗೆ 34,697 ಮತಗಳ ಲೀಡ್

ಬಂಗಾರಪೇಟೆ ಕ್ಷೇತ್ರ
ಬಿಜೆಪಿ – 83,784
ಕಾಂಗ್ರೆಸ್ – 58,340 ಬಿಜೆಪಿಗೆ 25,444 ಮತಗಳ ಲೀಡ್

ಕೆಜಿಎಫ್ ಕ್ಷೇತ್ರ
ಬಿಜೆಪಿ – 68,436
ಕಾಂಗ್ರೆಸ್ – 57,183 ಕಾಂಗ್ರೆಸ್ ಗೆ 11,253 ಮತಗಳ ಲೀಡ್

ಮುಳಬಾಗಿಲು ಕ್ಷೇತ್ರ
ಬಿಜೆಪಿ – 1,04,700
ಕಾಂಗ್ರೆಸ್ – 48,772
ಬಿಜೆಪಿಗೆ 55,928 ಮತಗಳ ಲೀಡ್

ಶ್ರೀನಿವಾಸಪುರ ಕ್ಷೇತ್ರ
ಬಿಜೆಪಿ – 97,815
ಕಾಂಗ್ರೆಸ್ – 59,815
ಬಿಜೆಪಿಗೆ 38,463 ಮತಗಳ ಲೀಡ್

ಚಿಂತಾಮಣಿ ಕ್ಷೇತ್ರ (ಚಿಕ್ಕಬಳ್ಳಾಪುರ ಜಿಲ್ಲೆ)
ಬಿಜೆಪಿ – 93,694
ಕಾಂಗ್ರೆಸ್ – 69,566
ಬಿಜೆಪಿಗೆ 24,128 ಮತಗಳ ಲೀಡ್

ಶಿಡ್ಲಘಟ್ಟ ಕ್ಷೇತ್ರ (ಚಿಕ್ಕಬಳ್ಳಾಪುರ ಜಿಲ್ಲೆ)
ಬಿಜೆಪಿ – 82,927
ಕಾಂಗ್ರೆಸ್ – 65,619
ಬಿಜೆಪಿಗೆ 17,308 ಮತಗಳ ಲೀಡ್

ಕೆಜಿಎಫ್ ಕ್ಷೇತ್ರ
ಬಿಜೆಪಿ – 68,436
ಕಾಂಗ್ರೆಸ್ – 57,183 ಕಾಂಗ್ರೆಸ್ ಗೆ 11,253 ಮತಗಳ ಲೀಡ್

ಮುಳಬಾಗಿಲು ಕ್ಷೇತ್ರ
ಬಿಜೆಪಿ – 1,04,700
ಕಾಂಗ್ರೆಸ್ – 48,772
ಬಿಜೆಪಿಗೆ 55,928 ಮತಗಳ ಲೀಡ್

ಶ್ರೀನಿವಾಸಪುರ ಕ್ಷೇತ್ರ
ಬಿಜೆಪಿ – 97,815
ಕಾಂಗ್ರೆಸ್ – 59,815
ಬಿಜೆಪಿಗೆ 38,463 ಮತಗಳ ಲೀಡ್

ಚಿಂತಾಮಣಿ ಕ್ಷೇತ್ರ (ಚಿಕ್ಕಬಳ್ಳಾಪುರ ಜಿಲ್ಲೆ)
ಬಿಜೆಪಿ – 93,694
ಕಾಂಗ್ರೆಸ್ – 69,566
ಬಿಜೆಪಿಗೆ 24,128 ಮತಗಳ ಲೀಡ್

ಶಿಡ್ಲಘಟ್ಟ ಕ್ಷೇತ್ರ (ಚಿಕ್ಕಬಳ್ಳಾಪುರ ಜಿಲ್ಲೆ)
ಬಿಜೆಪಿ – 82,927
ಕಾಂಗ್ರೆಸ್ – 65,619
ಬಿಜೆಪಿಗೆ 17,308 ಮತಗಳ ಲೀಡ್

ದೆಹಲಿ ಬಿ.ಜೆ.ಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದಲ್ಲಿ ಪಾಲ್ಗೋಂಡಿರುದ್ದ ಬಿ.ಜೆ.ಪಿ ಕಾರ್ಯಕರ್ತರು

ಮುನಿಯಪ್ಪಗೆ ಮತ ಹಾಕಲ್ಲ ಎಂದಿದ್ದ ಜೆ.ಡಿ.ಎಸ್ ಕಾರ್ಯಕರ್ತರು.
ಮೈತ್ರಿ ಸರ್ಕಾರದ ಅಭ್ಯರ್ಥಿ ಸಂಸದ ಮುನಿಯಪ್ಪನವರಿಗೆ ಮತ ಹಾಕಲು ನಮಗೆ ಮನಸ್ಸಿಲ್ಲ ನಾವು ಮತ ಯಾರಿಗೆ ಬೇಕಾದರೂ ಹಾಕುತ್ತೆವೆ ಆದರೆ ಮುನಿಯಪ್ಪಗೆ ಮಾತ್ರ ಮತ ಹಾಕಲ್ಲ ಎಂದು ಮಾಜಿ ಶಾಸಕ ಕೋಲಾರ ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿಗೆ ನೇರವಾಗಿ ಜೆ.ಡಿ.ಎಸ್ ಕಾರ್ಯಕರ್ತರು ಹೇಳಿದ್ದರು.

ಮುನಿಯಪ್ಪನವರಿಗೆ ಸ್ವಪಕ್ಷೀಯರ ವಿರೋಧದ ಇರುವುದರ ಕುರಿತಾಗಿ ಮತ್ತು 1984 ರಲ್ಲಿ ಕೋಲಾರದ ಲೋಕಸಭೆ ಕ್ಷೇತ್ರದಲ್ಲಿ ಇಂತಹುದೆ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಒದಗಿ ಬಂದಿತ್ತು ಎಂದು ಮೇ 10 ರಂದು vcs newz ಸುದ್ಧಿ ಮಾಡಿತ್ತು.

ಈ ಹಿಂದೆಯೂ ಇಂತಹದೆ ಸನ್ನಿವೇಶ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ನಿರ್ಮಾಣವಾಗಿತ್ತು 1967 ಮತ್ತು 1971 ರಲ್ಲಿ ಜಿ.ವೈ.ಕೃಷ್ಣನ್ ರವರುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದರು. ನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಿ ರೂಪಗೊಂಡ ನಂತರ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 1977,1980 ಚುನಾವಣೆಗಳಲ್ಲಿ ಮತ್ತೆ ಜಿ.ವೈ.ಕೃಷ್ಣನ್ ಕಾಂಗ್ರೆಸ್ ನಿಂದ ಗೆಲವು ಸಾಧಿಸಿ ಒಟ್ಟು ನಾಲ್ಕು ಬಾರಿ ಸಂಸದರಾಗಿದ್ದರು ಅವರು ಅಂದಿನ ದಿನದಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡರಾಗಿ ಕೇಂದ್ರದಲ್ಲಿ ಮಂತ್ರಿಯಾಗಿ ಅಂದಿನ ಕಾಂಗ್ರೆಸ್ ಹೈಕಮಾಂಡ್ ಇಂದಿರಾಗಾಂಧಿಯವರ ಬಳಿ ನೇರವಾಗಿ ಮಾತನಾಡುವುಷ್ಟು ಪ್ರಭಾವಿಯಾಗಿದ್ದರೂ ಅವರು ಮತ್ತೇ ೧೯೮೪ ರಲ್ಲಿ ಐದನೇ ಬಾರಿಗೆ ಚುನಾವಣೆ ಎದುರಿಸಲು ಸಿದ್ಧರಾದಾಗ ಅವರ ವಿರುದ್ದ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು,ಮುಖಂದರು ಬಂಡಾಯ ಎದ್ದ ಪರಿಣಾಮ ಐದನೇ ಚುನಾಣೆಗೆ 1984 ರಲ್ಲಿ ಸ್ಪರ್ದಿಸಿದ್ದ ಜಿ.ವೈ ಕೃಷ್ಣನ್ ವಿರುದ್ದದ ಅಲೆಯಾಗಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಕ್ಷೇತ್ರದಲ್ಲಿ ಹೊಸ ಅಲೆ ಎನ್ನುವಂತೆ ನೇಗಿಲು ಹೊತ್ತ ರೈತನ ಗುರ್ತಿನ ಜನತಾಪಕ್ಷದ ಅಭ್ಯರ್ಥಿ ಡಾ.ವೆಂಕಟೇಶ್ ಗೆಲವು ಸಾದಿಸಿದ್ದರು.

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!