ಕೋಲಾರ: ಕೋಲಾರದ ಸಂಸದ ಮುನಿಸ್ವಾಮಿ ದೆಹಲಿಯ ವಿವಿಧ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಜಲ್ವಂತ ಸಮಸ್ಯಗಳನ್ನು ಸವಿವರವಾಗಿ ಕೇಂದ್ರ ಮಂತ್ರಿಗಳ ಗಮನಕ್ಕೆ ತಂದಿರುತ್ತಾರೆ.
ಕರ್ನಾಟಕ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕೋಲಾರದ ಶಾಸಕ ಶ್ರೀನಿವಾಸಗೌಡ ಹಾಗು ಚಿಂತಾಮಣಿಯ ಮಾಜಿ ಶಾಸಕ ಡಾ.ಸುಧಾಕರ್ ಅವರೊಂದಿಗೆ ವಿವಿಧ ಸಚಿವರೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಯೋಜನೆಗಳ ಕುರಿತಾಗಿ ವಿವರಣೆ ನೀಡಿರುತ್ತಾರೆ.

ಕೋಲಾರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಿ
ಶ್ರೀನಿವಾಸಪುರ ತಾಲೂಕಿನ ತಾಡಿಗೋಳು ಕ್ರಾಸ್ ನಿಂದ ಕೋಲಾರದಲ್ಲಿ ಹಾದು ಹೋಗಿರುವಂತ ಚನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಾಲ್ಕುಪಥ ರಸ್ತೆ ಕಾಮಗಾರಿ.ಕೋಲಾರದಿಂದ ಸುಗಟೂರು ಚಿಂತಾಮಣಿ ಮಾರ್ಗವಾಗಿ ಬಾಗೇಪಲ್ಲಿಯಲ್ಲಿ ಹಾದು ಹೋಗಿರುವಂತ ಬೆಂಗಳುರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಂತ ರಾಷ್ತ್ರೀಯ ಹೆದ್ದಾರಿ ಕಾಮಗಾರಿ.ನರಸಾಪುರ ಕೈಗಾರಿಕೆ ಪ್ರದೇಶದಿಂದ ವೇಮಗಲ್ ಕೈಗಾರಿಕಾ ಪ್ರದೇಶ, ಹೆಚ್ ಕ್ರಾಸ್, ಮಾರ್ಗವಾಗಿ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಯೋಜನೆಗೆ ಸಂಬಂದಿಸಿದಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಹಿಂದಿನ ಭೇಟಿಯಲ್ಲಿ ಕೋಲಾರ ಜಿಲ್ಲೆಯ ರಸ್ತೆ ಕಾಮಗಾರಿಗಳನ್ನು ಪ್ರಸ್ಥಾಪಿಸಿದನ್ನು ವಿವರಿಸಿದರು.ಆದಷ್ಟು ಬೇಗ ಕಾಮಗಾರಿಗಳನ್ನು ಮಂಜೂರು ಮಾಡಿಸುವಂತೆ ಕೋರಿದರು.
ಕೆಜಿಎಫ್ ನಲ್ಲಿ ಕೋಲಾರ ಗೋಲ್ಡ್ ಫೀಲ್ಡ್ ಮುಚ್ಚಿದ ಬಳಿಕ ನಿತ್ಯ ಕೆಜಿಎಫ್ ನಿಂದ ಪ್ರತಿದಿನ 25-30 ಸಾವಿರ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಕೆಜಿಎಫ್ ಭಾಗದಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಜಡ್) ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆಯಲ್ಲಿ 1500-1800 ಅಡಿ ಕೊರೆದರೂ ನೀರು ದೊರೆಯದಂತಹ ಪರಿಸ್ಥಿತಿಯಿದೆ. ಹೀಗಾಗಿ ಕೋಲಾರ ಜಿಲ್ಲೆಗೆ ಜಲಸಂಪನ್ಮೂಲ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಮಂತ್ರಿಯವರಿಗೆ ಮನವಿ ಮಾಡಿದರು.
ಸಂಸತ್ತಿನಲ್ಲಿ ಕನ್ನಡದ ಕಂಪು ಹರಿಸಿದ ಸಂಸದ
ಸಂಸದ ಅಧಿವೇಶನದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿ ನಂತರ ಹಿಂದಿಯಲ್ಲಿ ಮಾತನಾಡಿದ್ದ ಅವರು ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಆದರೂ ಜಿಲ್ಲೆಯಲ್ಲಿ ರೈತಾಪಿ ಜನ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡುವ ಮೂಲಕ ಪಶುಸಂಗೋಪನೆಯನ್ನು ಮುಖ್ಯ ಕಸುಬಾಗಿಸಿಕೊಂಡಿದ್ದಾರೆ ಅದರ ಜೋತೆಗೆ ತರಕಾರಿ ಕೃಷಿ ಮಾಡುತ್ತ ಮಾದರಿಯಾಗಿದ್ದಾರೆ. ಇಲ್ಲಿ ಇವರಿಗೆ ಶಾಶ್ವತ ನೀರಾವರಿ ಒದಗಿಸಿದರೆ ದೇಶಕ್ಕೆ ಬೇಕಾದ ಇತರೆ ಅಗತ್ಯ ಕೃಷಿ ಉತ್ಪನ್ನಗಳನ್ನು ನೀಡುತ್ತಾರೆ ಎಂಬ ಭರವಸೆ ಇದೆ ಎಂಬುದಾಗಿ ಮನವರಿಕೆ ಮಾಡಿರುತ್ತಾರೆ
ವರದಿ:-ಚ.ಶ್ರೀನಿವಾಸಮೂರ್ತಿ