ನಮ್ಮ ರೈತರ ಬದುಕಿನ ಶ್ರಮ ನಂದಿನಿ ಬ್ರಾಂಡ್.

ಹಾಲು ಕೊಳ್ಳುವಂತ ಗ್ರಾಹಕರು ನಮ್ಮ ರೈತಾಪಿ ಜನರ ಬದುಕಿನ ಶ್ರಮ ನಂದಿನಿ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ನಂದಿನಿ ಹಾಲನ್ನು ಉಪಯೋಗಿಸುವಂತೆ ಜನತೆಗೆ ಕೋಚಿಮಲ್‌ ನಿದೇರ್ಶಕ ಹನುಮೇಶ್ ಕರೆ ಇತ್ತರು. ನಮ್ಮ ರೈತಾಪಿ ಜನರ ಹಿತ ದೃಷ್ಟಿಯಿಂದ ಹೊರ ರಾಜ್ಯಗಳ ನಕಲಿ ಹಾಲಿಗೆ ಮಾರುಹೋಗದೆ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಗುಣಮಟ್ಟ ಮತ್ತು ಅರೋಗ್ಯ ಕಾಪಾಡಿಕೊಂಡು ಜಿಲ್ಲೆಯ ರೈತರ ಹಿತ ಕಾಪಾಡುವಂತೆ ತಿಳಿಸಿದರು.
ಅವರು ಪಟ್ಟಣದ ಕೋಚಿಮುಲ್ ಶಿಬಿರದ ಕಚೇರಿಯಲ್ಲಿ ವಿಶ್ವ ಹಾಲು ದಿನ ಹಾಗೂ ಕೋಲಾರ ಜಿಲ್ಲೆಯ ಕ್ಷೀರ ಕ್ರಾಂತಿಯ ಹರಿಕಾರ ದಿವಂಗತ ಎಂ.ವಿ.ಕೃಷ್ಣಪ್ಪನವರ ಜನ್ಮ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ನಂದಿನಿ ಉತ್ಪನ್ನಗಳು ಜಿಲ್ಲೆಯ ರೈತನ ಜೀವಾಳವಾಗಿವೆ. ಜಾಗತಿಕ ಮಟ್ಟದಲ್ಲಿ ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಅಮುಲ್‌ ಪಡೆದುಕೊಂಡರೆ ಎರಡನೇ ಸ್ಥಾನದಲ್ಲಿ ನಂದಿನಿ ಇದೆ. ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಬರದಲ್ಲೂ ಕೋಲಾರದಲ್ಲಿ ಹಾಲು ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು. ಈ ಜಿಲ್ಲೆಯ ರೈತರು ಮಳೆ ಬೆಳೆ ಇಲ್ಲದೆ ಪರಿತಪಿಸುತ್ತಾ ಸದಾ ಬರದಛಾಯೇಯಲ್ಲಿ ಇರುವುದನ್ನು ಗಮನಿಸಿ ದೂರದೃಷ್ಟಿಯಿಂದ ಕೋಲಾರ ಜಿಲ್ಲೆಯ ಕುರಿಯನ್‌ ಎಂದೇ ಖ್ಯಾತರಾಗಿರುವ ಎಂ.ವಿ.ಕೃಷ್ಣಪ್ಪನವರು ವಿದೇಶಿ ಹಾಲು ಉತ್ಪಾದನ ತಳಿಗಳನ್ನು ಪರಿಚಯಿಸುವ ಮೂಲಕ ಕೋಲಾರ ಜಿಲ್ಲೆಯ ರೈತರು ಇಂದು ತಮ್ಮ ಬದುಕಿಗೆ ಅಧಾರವಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಕಾರ‍್ಯಕ್ರಮದ ವಿಶೇಷವಾಗಿ ಪಟ್ಟಣದ ಸಾರ್ವಜನಿಕ ಅಸ್ವತ್ರೆಯ ಒಳರೋಗಿಗಳಿಗೆ ಹಾಲು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಪ್ರೋತ್ಸಾಹ ಧನದ ಚಕ್ ಅನ್ನು ಅನ್ನು ಹಾಲು ಉತ್ಪಾದಕರಿಗೆ ರೈತರಿಗೆ ವಿತರಿಸಿದರು.
ಕಾರ್ಯಕ್ರದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಕೋಚಿಮುಲ್ ಶಿಭಿರದ ವ್ಯವಸ್ಥಾಪಕ ಶಿವರಾಜ್ ಮುಂತಾದವರು ಇದ್ದರು.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!