UAPA ಕಾಯಿದೆ ತಿದ್ದುಪಡಿ ರಾಷ್ಟ್ರಪತಿ ಅಂಕಿತ.ಶಂಕಿತನನ್ನು ಉಗ್ರನೆಂದು ಘೋಷಿಸಬಹುದು.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019 ಶಂಕಿತ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ನಂತರ ಅವರ ಮೇಲೆ ಪ್ರಯಾಣ ನಿಷೇಧ ಹೇರಲು ಸಹ ಅವಕಾಶ ಇರುತ್ತದೆ.

ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವಂತ ಕೇಂದ್ರ ಸರ್ಕಾರದ ಮಹತ್ವದ ಕಾನೂನು UAPA ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ2019ಗೆ.The Unlawful Activities (Prevention) Amendment Act,2019;ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವೆಂದ್ ಒಪ್ಪಿಗೆ ಸೂಚಿಸಿದ್ದು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ನಂತರ ಅವರ ಮೇಲೆ ಪ್ರಯಾಣ ನಿಷೇಧ ಹೇರಲು ಸಹ ಈ ಕಾನೂನಿನಡಿಯಲ್ಲಿ ಅವಕಾಶವಿರಲಿದೆ.
ಗುರುವಾರ ತಡರಾತ್ರಿ ರಾಷ್ಟ್ರಪತಿಗಳು ಈ ಶಾಸನಕ್ಕೆ ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿ ಮೂಲಗಳು ತಿಳಿಸಿವೆ. ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಈ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಜುಲೈ 24 ರಂದು ಮತ್ತು ರಾಜ್ಯಸಭೆ ಆಗಸ್ಟ್ 2 ರಂದು ಅಂಗೀಕರಿಸಿತು.ಭಾರತದ ಮೋಸ್ಟ್ ವಾಂಟೆಡ್, ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಅವರುಗಳನ್ನು ಈ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲ್ಪಡಲಿದ್ದಾರೆ ಎಂದು ಅಧಿಕಾರಿ ವರ್ಗ ಹೇಳಿದ್ದಾರೆ.
ಈ ತಿದ್ದುಪಡಿಗಳು ಭಯೋತ್ಪಾದಕರ ಆಸ್ತಿಗಳನ್ನು ಲಗತ್ತಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯNational Investigation Agency (ಎನ್‌ಐಎ) ಮಹಾನಿರ್ದೇಶಕರಿಗೆ ಅಧಿಕಾರವನ್ನು ನೀಡುತ್ತವೆ.

ವಿಸಿಎಸ್ ನೂಜ್ ತಂಡ

Leave a Reply

Your email address will not be published. Required fields are marked *

Don`t copy text!