ರಸ್ತೆ ಬದಿ ಮರ ಬೆಳೆಸಲು ಸಾರ್ವಜನಿಕರು ಸಹಕಾರ ನೀಡಿ ಅರಣ್ಯ ಇಲಾಖೆ.

ಅರಣ್ಯ ಇಲಾಖೆ ಸಿಬ್ಬಂದಿ ಗಿಡ ನಾಟಿ ಮಾಡಿಸುತ್ತಿರುವುದು.

ಚಿಂತಾಮಣಿ:-ರಸ್ತೆ ಬದಿ ನೆಟ್ಟಿರುವಂತ ಗಿಡಗಳಿಗೆ ಸಾರ್ವಜನಿಕರು ಸಹಕಾರ ನೀಡಿ ಪೋಷಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿನಂತಿಸಿದ್ದಾರೆ.ಚಿಂತಾಮಣಿ ತಾಲೂಕಿನಲ್ಲಿ ಹಾದು ಹೋಗಿರುವ 234 ರಾಷ್ಟ್ರ‍ೀಯ ಹೆದ್ದಾರಿಯಲ್ಲಿ ಶಿಡ್ಲಘಟ್ಟದ ಗಡಿಯಂಚಿನಿಂದ ಶ್ರೀನಿವಾಸಪುರದ ಗಡಿಯವರಿಗೂ ರಸ್ತೆ ಇಕ್ಕೆಲೆಗಳಲ್ಲಿ ನೆರಳೆ,ನಾಯಿ ನೆರಳೆ,ಬೇವು,ಅತ್ತಿ,ಹೊಂಗೆ, ಅರಳಿಮರ ಸೇರಿದಂತೆ ಹಲವಾರು ರಿತಿಯ ಮರಗಳಾಗುವಂತ ಗಿಡಗಳನ್ನು ನೆಡಲಾಗುತ್ತಿದೆ. ಇವುಗಳನ್ನು ಅರಣ್ಯ ಇಲಾಖೆ ನೀರು ಹಾಕಿ ಪೋಷಿಸುತ್ತದೆ ಅದರೂ ಸಾರ್ವಜನಿಕರು ಸಹಕಾರ ನೀಡಿದರೆ,ಹೆದ್ದಾರಿ ಬದಿ ಮರಳು ಬೆಳೆದು ನಿಂತರೆ ಉತ್ತಮ ಗಾಳಿ,ಇಲ್ಲಿ ಒಡಾಡುವ ವಾಹನ ಸವಾರರಿಗೆ ನೆರಳು, ಪಕ್ಷಿಸಂಕುಲಕ್ಕೆ ಅಹಾರ ಸಿಗಲು ಅನಕೂಲವಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಶ್ರೀನಿವಾಸ್.

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!