ಖಾಸಗಿ ಹಣಕಾಸು ಸಂಸ್ಥೆಗಳಿಂದ ದೂರ ಇದ್ದು ಉತ್ತಮ ಬಾಳ್ವೆ ನಡೆಸಿ ಬೀದಿ ಬದಿ ವ್ಯಾಪಾರಸ್ಥರಿಗೆ ರಮೇಶ್ ಕುಮಾರ ಕರೆ.

ಈ ಸುದ್ಧಿಗೆ ಸಂಬಂದಿಸಿದ ಫೋಟೋ ಅನ್ನು 18-1 ಅಂಕಣದಲ್ಲಿ ಕಳುಹಿಸಲಾಗಿದೆ.
ಶ್ರೀನಿವಾಸಪುರ: ಬೀದಿ ಬದಿ ವ್ಯಾಪರಸ್ಥರು ಖಾಸಗಿ ವ್ಯವಹಾರಸ್ಥರ ಗಾಳಕ್ಕೆ ಸಿಲುಕದೆ ಪ್ರಾಮಾಣಿಕವಾಗಿ ಸ್ವಾಭಿಮಾನದಿಂದ ವ್ಯಾಪರ ಮಾಡಲಿ ಎಂದು ಕೋಲಾರ ಡಿ.ಸಿ.ಸಿ. ಬ್ಯಾಂಕ್ ನಿಂದ ಪಟ್ಟಣದ ಬೀದಿ ವ್ಯಾಪಾರಸ್ಥರಿಗೆ ಬಡ್ಡಿ ರಹಿತವಾಗಿ ಸಾಲ ನೀಡಲಾಗುತ್ತಿದೆ ಎಂದು ಮಾಜಿ ಸ್ಪೀಕರ ರಮೇಶಕುಮಾರ್ ಹೇಳಿದರು ಅವರು ಪಟ್ಟಣದ ಬಿದಿ ಬದಿ ವ್ಯಾಪರಸ್ಥರಿಗೆ ಸಾಲ ವಿತರಣೆ ಮಾಡಿ ಮಾತನಾಡಿದರು.
ಪಟ್ಟಣದ ಪುರಸಭೆ ನೂತನ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಬೀದಿ ವ್ಯಾಪಾರಸ್ತರಿಗೆ ಸಾಲ ನೀಡುವ ಕಾರ್ಯಕ್ರಮದಲ್ಲಿ ಸಾಲ ವಿತರಿಸಿದ ಅವರು, ಪಡೆದಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವದರಿಂದ ಸಾಲ ನೀಡಿರುವ ಬ್ಯಾಂಕಿಗೆ ಜವಾಬ್ದಾರಿ ಹೆಚ್ಚುತ್ತದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾಲ ನೀಡಲು ಸಹಕಾರಿಯಾಗುತ್ತದೆ ಎಂದರು.
ಎರಡನೆ ಹಂತದಲ್ಲಿ 25 ರಿಂದ 50 ಸಾವಿರರೂಗಳಿಗೆ ಹೆಚ್ಚಿಸಿ 57 ಮಂದಿ ಫಲಾಭವಿಗಳಿಗೆ ಸ್ಥಳದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗಿದೆ. ಯಾವುದೆ ವ್ಯಾಪರಸ್ಥ ಖಾಸಗಿ ವ್ಯಕ್ತಿಗಳ ಹಾಗು ಸಂಸ್ಥೆಗಳ ಬಳಿ ಅಧಿಕ ಬಡ್ಡಿ ಹಣ ಲೇವಾ ದೇವಿಗಳಿಗೆ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ರಿತಿಯಾಗಿ ಸಾಲ ನೀಡುತ್ತಿದ್ದು ಇದರ ಪ್ರಯೋಜನ ಪಡೆದು ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಉತ್ತಮ ರೀತಿಯಲ್ಲಿ ಕುಟುಂಬ ನಿರ್ವಹಣೆಮಾಡುತ್ತ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸುವ ಮೂಲಕ ಮಾದರಿ ಬದುಕು ಕಟ್ಟಿ ಕೊಳ್ಳಿ ಎಂದರು.

ಸಾಲ ವಿತರಿಸುತ್ತಿರುವ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ

ಈ ಸಂದರ್ಭದಲ್ಲಿ ಕೆಲ ಮಹಿಳಾ ವ್ಯಾಪರಸ್ಥರು ನಮಗೆ ಸಾಲ 2ನೆ ಬಾರಿಗೆ ದೊರೆತಿಲ್ಲ ಎಂದು ಶಾಸಕರಿಗೆ ಮನವಿ ಮಾಡಿಕೊಂಡಾಗ ರಮೇಶ್ ಕುಮಾರ ಡಿ.ಸಿ.ಸಿ. ಬ್ಯಾಂಕಿನ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಯಾಕೆ ಇಂತಹ ವ್ಯತ್ಯಾಸಗಳು ಎಂದರು ಇದಕ್ಕೆ ಉತ್ತರಿಸಿದ ಬ್ಯಾಂಕ್ ಸಿಬ್ಬಂದಿ ಕೆಲವರು ಸಕಾಲದಲ್ಲಿ ದಾಖಲೆಗಳನ್ನು ನೀಡದ ಹಿನ್ನಲೆಯಲ್ಲಿ ಇವತ್ತು ಸಾಲ ನೀಡಲು ಸಮಯ ಆಗಿಲ್ಲ ಎಂದರು ಸಣ್ಣ ಪುಟ್ಟ ದೋóಗಳಿಗೆ ಇದ್ದಾಗ ತಿಳುವಳಿಕೆ ನೀಡಿ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಬರುವ ಸೋಮವಾರದ ಒಳಗಾಗಿ ಉಳಿದ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡಲು ಸಿದ್ದತೆ ಮಾಡಿಕೊಳ್ಳುವಂತೆ ಸೋಮವಾರ ಇದೆ ಸ್ಥಳಕ್ಕೆ ಆಗಮಿಸಿ ಅವರಿಗೆ ಸಾಲ ನೀಡೋಣ ಎಂದರು.
ಡಿ..ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ, ನಿರ್ದೇಶಕರಾದ ಬೈರಪಲ್ಲಿ ವೆಂಕಟರೆಡ್ಡಿ,ಎ.ಪಿ.ಎಂ.ಸಿ ಅಧ್ಯಕ್ಷ ರಾಜೇಂದ್ರಪ್ರಸಾದ್, ಕಸಬಾ ಸೊಸೈಟಿ ನಿರ್ದೇಶಕ ಮುನಿಶಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸನ್, ಬೋರ್ ವೆಲ್ ಕೃಷ್ಣಾರೆಡ್ಡಿ, ಪುರಸಭಾ ಸದಸ್ಯ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಸದಸ್ಯ ಅನೀಸ್, ಕೆ.ಕೆ. ಮಂಜುನಾಥ್, ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿ ಪ್ರಾಭಾಕರ್ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ವರದಿ:ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!