ಬಿಜೆಪಿ ವಿರುದ್ದ ಶಿವಕುಮಾರ್ ಬೆಂಬಲಿಗರ ಪ್ರತಿಭಟನೆ, ರಸ್ತೆ ತಡೆ ನಡೆಸಿ ಆಕ್ರೋಶ

ಕನಕಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ರವರನ್ನು ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಿಸಿಕೊಂಡು ಶುಕ್ರವಾರ ಹಾಗೂ ಶನಿವಾರ ವಿಚಾರಣೆ ನಡೆಸುತ್ತಿರುವುದು ಅತ್ಯಂತ ಖಂಡನೀಯವಾದ ವಿಚಾರವೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ ಆರೋಪಿಸಿದರು. ಅವರು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕನಕಪುರ ನಗರದ ಚನ್ನಬಸಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ಸಂಧರ್ಬದಲ್ಲಿ ಮಾತನಾಡಿದ ಅವರು. ರಾಜ್ಯದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರಾಗಿರುವ ಶಿವಕುಮಾರ್ ಅವರ ವಿರುದ್ದ ಕೇಂದ್ರ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ನಾಯಕರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ವಾಮಮಾರ್ಗದ ಮೂಲಕ ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆಯಂತ ಅಸ್ತ್ರಗಳನ್ನು ಬಳಸಲು ಮುಂದಾಗಿರುವುದು ಹೇಯಕೃತ್ಯವೆಂದಿರುತ್ತಾರೆ.
ಗುಜರಾತ್ ಮಹಾರಾಷ್ಟ್ರಗಳಲ್ಲಿ ಕಾಂಗ್ರಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಸೋನಿಯಾ ಗಾಂದಿಯವರಿಗೆ ಬೆನ್ನೆಲುಬಾಗಿ ನಿಂತು ಕಾಂಗ್ರೆಸ್ ಪಕ್ಷವನ್ನು ಉಳಿಸಿದಕ್ಕಾಗಿ ಬಿಜೆಪಿ
ಕೇಂದ್ರ ಸರ್ಕಾರ ಈ ರೀತಿ ಇಡಿ ಮೂಲಕ ನಮ್ಮ ನಮ್ಮ ನಾಯಕರನ್ನು ಹತ್ತಿಕ್ಕಲು ಹೋರಟಿದೆ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಹೇಳಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು ಮಾತನಾಡಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದಲ್ಲಿ ಕಾಂಗ್ರಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಇವರ ಸಹಕಾರದಿಂದ ನಡೆಯುತ್ತಿದ್ದ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿರುವಲ್ಲಿ ಕೇಂದ್ರ ಸರ್ಕಾರದ ಕೈವಾಡದ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಶಿವಕುಮಾರ್ ಅವರಂತ ದಿಟ್ಟ ನಾಯಕರ ಚಾತುರ್ಯವನ್ನು ನೋಡಿರುವ ಬಿಜೆಪಿ ಸರ್ಕಾರಗಳು ಅವರನ್ನು ಬಗ್ಗೆ ಬಡಿಯಲು ಹೊರಟಿದೆ ಇದಕ್ಕೆ ರಾಜ್ಯ ಹಾಗೂ ಕನಕಪುರ ಕ್ಷೇತ್ರದ ಜನತೆ ಸಹಿಸುವುದಿಲ್ಲ ಎಂದ ಅವರು,ಯಾವತ್ತು ಡಿ.ಕೆ ಶಿವಕುಮಾರ್ ರವರನ್ನು ಕೈಬಿಡುವುದಿಲ್ಲ ಎಂದು ಭರವಸೆಯ ಮಾತು ಆಡಿದರು.

ಈ ಸಂಧರ್ಭದಲ್ಲಿ ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊರಳಗಲ್ಲು ರಮೇಶ್ ಮಾತನಾಡಿ ಒಬ್ಬ ನಿಷ್ಠಾವಂತ ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್‍ರವರ ಮೇಲೆ ಅಮಿತ್ ಶಾ ಮತ್ತು ನರೇಂದ್ರ ಮೋದಿ ಹೇಡಿತನದಿಂದ ಇಡಿ ದಾಳಿ ನಡೆಸಿ ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತಿದ್ದಾರೆ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಕಾಂಗ್ರಸ್ ಸರ್ಕಾರ ಅದಿಕಾರದಲ್ಲಿ ಇದ್ದಾಗ ಇಲ್ಲಾದಾಗಲೂ ಅಧಿಕಾರದ ಆಸೆಗೆ ಬೇರೆ ಪಕ್ಷಕ್ಕೆ ಹೋಗುವ ಪ್ರಯತ್ನವನ್ನು ಮಾಡಿಲ್ಲ ಅವರೊಬ್ಬ ನಿಷ್ಠಾವಂತ ಕಾಂಗ್ರೆಸ್ಸಿಗ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅನಿಲ್‍ಕುಮಾರ್. ಜಿಲ್ಲಾ ಪಂಚಾಯತಿ ಸದಸ್ಯರಾದ ಡಿ.ಕೆ. ಶಿವಕುಮಾರ್ ಕುರುಬಳ್ಳಿ ಶಂಕರ್, ತಾಲೂಕು ಪಂಚಾಯತಿ ಅಧ್ಯಕ್ಷ
ಧನಂಜಯ್ಯ, ಮಾಜಿ ಅಧ್ಯಕ್ಷ ರಾಜಶೇಖರ್,ನಗರಸಭಾ ಸದಸ್ಯರಾದ ಬೈರವೇಶ್ವರರಾಜು, ಹೇಮರಾಜು, ರೋಹಿಣಿ,ಅರ್ಕಾವತಿ ಶಿವಕುಮಾರ್, ಲೋಕೇಶ್, ಕೋಟೆಕಿಟ್ಟಣ್ಣ, ಸಿಲ್ಕ್ ರವಿ, ಮುಕುಂದರಾವ್, ಶಿವಣ್ಣ,ಕಿರಣ್,ಮಳಗಾಳು ದಾಸಪ್ಪ, ಚಾಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚೀರಣಕುಪ್ಪೆ ಮಹೇಶ್, ಮತ್ತು ಉಪಾದ್ಯಕ್ಷರಾದ ಚೀರಣಕುಪ್ಪೆ ರವಿ, ತಾಲೂಕು ಯುತ್ ಕಾಂಗ್ರಸ್ ಅಧ್ಯಕ್ಷ ಮಧು, ಬಿ.ಎಸ್. ಗೌಡ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.

ವರದಿ:-ಕೆ.ಕಬ್ಬಾಳಯ್ಯ

Leave a Reply

Your email address will not be published. Required fields are marked *

Don`t copy text!