ಎತ್ತಿನ ಹೊಳೆ ಕುರಿತಾಗಿ, ಜನಪ್ರತಿನಿಧಿಗಳ ಸಭೆ ಸ್ಪೀಕರ್

ಬಯಲುಸೀಮೆ ಭಾಗದ ಜನರ ಕುಡಿಯುವ ನೀರಿನ ಕಷ್ಟ ತೀರಿಸಲು ಮಾಡಿರುವಂತ ಯೋಜನೆಯಾಗಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಲು ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿರುತ್ತಾರೆ.

ಶ್ರೀನಿವಾಸಗೌಡ ಮತ್ತು ರಮೇಶಕುಮಾರ್

ಕೋಲಾರ: ಎತ್ತಿನಹೊಳೆ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಅದರ ವೇಗ ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಲು ಬಯಲುಸೀಮೆ ಭಾಗದ ಸಚಿವರ ಮತ್ತು ಶಾಸಕರ ಸಭೆ ಕರೆಯಲಾಗಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಹೇಳಿದರು.
ಶ್ರೀನಿವಾಸಪುರ ತಾಲ್ಲೂಕಿನ ತೆರ್ನಹಳ್ಳಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡರೊಂದಿಗೆ ಭಾಗವಹಿಸಿದ್ದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಯೋಜನೆ ಸಂಬಂಧ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲು ಚರ್ಚಿಸಲಾಗುವುದು ಎಂದರು.
‘ಎತ್ತಿನಹೊಳೆ ಯೋಜನೆಗೆ ಬೈರಗೊಂಡ್ಲು ಬಳಿ ಅಣೆಕಟ್ಟು ನಿರ್ಮಾಣ ಮಾಡಿ ನೀರು ಸಂಗ್ರಹಿಸಿಟ್ಟು ಅಲ್ಲಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರನ್ನು ಪೈಪ್ ಲೈನ್ ಮೂಲಕ ಹರಿಸುವಂತ ಯೋಜನೆ ಇದೆ ಇದಕ್ಕಾಗಿ ಸುಮಾರು 4,700 ಹೆಕ್ಟೇರ್ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿರುತ್ತದೆ. ಇದರಿಂದಾಗಿ ಕಾಮಗಾರಿ ನಡೆಯುವುದು ಸ್ವಲ್ಪ ತಡವಾಗಿರುತ್ತದೆ. ಇದಕ್ಕೆ ಸಂಬಂದಪಟ್ಟಂತೆ ರಾಷ್ಟ್ರಪತಿಗಳ ಅಂಕಿತ ಬೇಕಾಗಿರುವುದರಿಂದ ಇದರ ಕುರಿತಾಗಿ ಚರ್ಚೆ ನಡೆಸಲು ಜೂ.3 ರಂದು ಸಭೆ ಕರೆಯಲಾಗಿದೆ’ ಎಂದು ವಿವರಿಸಿದರು.
ಕೋಲಾರದ ಕೆರೆಗಳ ಪುನಶ್ಚೇತನಕ್ಕೆ ಜೂ.5ಕ್ಕೆ ಸಭೆ:
‘ಕೋಲಾರಮ್ಮ ಕೆರೆ ಮತ್ತು ಕೋಡಿ ಕಣ್ಣೂರು ಕೆರೆಗಳ ಪುನಶ್ಚೇತನ ಹಾಗೂ ಅಂತರಗಂಗೆ, ತೇರಹಳ್ಳಿ ಬೆಟ್ಟದ ಪ್ರಾಕೃತ ಸೌಂದರ್ಯವನ್ನು ಯಾವ ರಿತಿಯಾಗಿ ಕಾಪಾಡಿಕೊಳ್ಳಬಹುದು ಎಂಬ ಕುರಿತಾಗಿ ಚರ್ಚೆ ಮಾಡಲು ಜೂ.5 ರಂದು ಕೋಲಾರದಲ್ಲಿ ಶಾಸಕರು ಮತ್ತು ಮಂತ್ರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಕೋಲಾರಮ್ಮ ಮತ್ತು ಕೋಡಿಕಣ್ಣೂರು ಕೆರೆಗಳನ್ನು ನೋಡಿಸದರೆ ಬೇಸರ ಅಗುತ್ತದೆ. ನಗರಸಭೆಯವರು ತ್ಯಾಜ್ಯ ತಂದು ಹಾಕಿ ಹಾಳು ಮಾಡಿದ್ದರೆ, ಮರಳು, ತೆಗೆದು ಸ್ವರೂಪವನ್ನೇ ನಾಶ ಮಾಡಿದ್ದಾರೆ. ಇದರಿಂದಾಗಿ ಈ ಕೆರೆಗಳ ಸುತ್ತಲೂ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವು ಗೊಳಿಸಲಾಗುವುದು, ಮೊದಲ ಹಂತದಲ್ಲಿ ತೆರವುಗೊಳಿಸುವಂತೆ ಒತ್ತುವರಿದಾರರಿಗೆ ಮನವಿ ಮಾಡಲಾಗುವುದು. ಮಣಿಯದಿದ್ದರೆ ಜಿಲ್ಲಾಡಳಿತದ ಮೂಲಕ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.
ಶತಶೃಂಗ ಬೆಟ್ಟದ ಅಭಿವೃದ್ಧಿಗೆ ಒತ್ತು:
ಶತಶೃಂಗ ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯ ಕಾಪಾಡಲು ಬೆಟ್ಟದ ಸುತ್ತಲೂ ಬೇಲಿ ಹಾಕುವ ಮೂಲಕ ಬೆಟ್ಟದ ಒತ್ತುವರಿ ಆಗದಂತೆ ಎಚ್ಚರ ವಹಿಸಲಾಗುವುದು. ಅಲ್ಲದೆ ಮುಖ್ಯವಾಗಿ ತೇರಹಳ್ಳಿ ಬೆಟ್ಟದ ಮೇಲಿನ ಜಮೀನುಗಳನ್ನು ಭೂಪರಿವರ್ತನೆ ಆಗದಂತೆ ಕ್ರಮ ತೆಗೆದುಕೊಳ್ಳಲು ಕಾನೂನಾತ್ಮಕ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಈಗಾಗಲೆ ಜಾಗವನ್ನು ಖರೀದಿಸಿ ರೆಸಾರ್ಟ್ ಸಂಸ್ಕೃತಿ ಮಾಡಲು ಹೋರಟಿದ್ದು ಅಲ್ಲಿ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆಂಬ ದೂರುಗಳು ಬಂದಿರುವುದರಿಂದ ನಮಗೆ ಉಳಿದಿರುವ ಬೆಟ್ಟವನ್ನು ಕಾಪಾಡುವುದು ಮುಖ್ಯವಾಗಿದೆ, ಬೆಟ್ಟದ ಮೇಲಿನ ಅರಣ್ಯ ಸಂಪತ್ತನ್ನು ಕಾಯ್ದಿರಿಸುವ ಜತೆಗೆ ಪ್ರಾಣಿ ಪಕ್ಷಿಗಳು ಬದುಕು ನಾಶವಾಗದಂತೆ ಬೆಟ್ಟವನ್ನು ಉಳಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

“ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಅಭ್ಯರ್ಥಿಪರ ಕೆಲಸ ಮಾಡಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ‘ಯಾರೋ ಮಾತಿಗೆ ನಾವ್ಯಾಕೆ ಪ್ರತಿಕ್ರಿಯೇ ನೀಡಬೇಕು. ನಮಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ಲವಾ ಎಂದು ವ್ಯಂಗವಾಗಿ ಉತ್ತರ ನೀಡಿದರು. ಯಾರು ಏನಾದರೂ ಮಾತನಾಡಿಕೊಳ್ಳಲಿ, ನಮಗೆ ಜನತೆ ಜವಬ್ದಾರಿ ನೀಡಿದ್ದಾರೆ ನಮ್ಮ ಪಾಡಿಗೆ ನಾವು ಜನರ ಕೆಲಸ ಮಾಡಿಕೊಂಡು ಇರುತ್ತೇವೆ. ಹೇಳಿರುವಂತವರು ಸದ್ಯ ಬಿಡುವಾಗಿದ್ದಾರೆ ಏನೇನು ಮಾಡುತ್ತಾರೋ ನೋಡೋಣ ಎಂದರು”

ವರದಿ.ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!