ಮಂಡ್ಯದ ಚುನಾವಣಾ ಪ್ರಚಾರ ಸಭೆಯಲ್ಲಿ ದುಷ್ಕರ್ಮಿಗಳಿಂದ ನಿಖಿಲ್ ಬೆಂಬಲಿಗರ ಮೇಲೆ ಕಲ್ಲು ತೂರಾಟ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ರೋಡ್ ಷೋ ವೇಳೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಬೆಂಬಲಿಗರ ಮೇಲೆ ಹಲ್ಲೆ ಯತ್ನ ನಡೆದಿರುತ್ತದೆ.
ರೋಡ್ ಶೋ ವೇಳೆ ನಿಖಿಲ್ ಹಿಂಬಾಲಿಸುತ್ತಿದ್ದ ಕಾರ್ ಮೇಲೆ ಕಲ್ಲುತೂರಾಟ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುತ್ತದೆ ಜೆಡಿಎಸ್ ಮುಖಂಡ ಜಗದೀಶ್ ಎಂಬುವರ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. 10 ಜನರ ದುಷ್ಕರ್ಮಿಗಳ ತಂಡ ಕಲ್ಲು ತೂರಾಟ ನಡೆಸಿದ್ದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಜನತೆ ಅವರ ಮೇಲಿನ ಆರೋಪವನ್ನು ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಇಬ್ಬರನ್ನೂ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಡಿ ಬಾಸ್ ಡಿ ಬಾಸ್ ಎಂದು ನಟ ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ ಘಟನೆಯೂ ನದೆದು
ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುತ್ತದೆ ಈ ಸಂಧರ್ಬದಲ್ಲಿ ಪೊಲೀಸರು ಮದ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ಸಕ್ಕರೆ ನಾಡು ಕಬ್ಬಿನ ಬೀಡು, ಹೈವೋಲ್ಟೇಜ್‌ ಕಣವಾಗಿದೆ

ಸುಮಲತಾ ಸ್ವತಂತ್ರ ಸ್ಪರ್ಧೆಯಿಂದ ರಾಜ್ಯ ರಾಜಕೀಯದಲ್ಲಿ ಮಂಡ್ಯದ ರಾಜಕೀಯ ವಿಶೇಷವಾಗಿದೆ ಚಿತ್ರೋದ್ಯಮ v/s ದೊಡ್ಡಗೌಡರ ಕುಟುಂಬ ಎಂದು ಬಿಂಬಿತವಾಗಿದ್ದು ಸುಮಲತ ಪರವಾಗಿ ಕನ್ನಡ ಚಿತ್ರರಂಗದ ಬಹುತೇಕ ಸಿನಿಮಾ ಸ್ಟಾರ್ ನಟರಾದ ದರ್ಶನ್ ಯಶ್,ರಾಕಲೈನ್ ವೆಂಕಟೇಶ್,ದೊಡ್ದಣ್ಣ ಸೇರಿದಂತೆ ನಟರು ನಿರ್ದೇಶಕರು ಕಲಾವಿದರು ದಂಡು ನಿಂತಿದೆ.
ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ಗೆ ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರು ಅಧಿಕಾರದಲ್ಲಿರುವುದೇ ದೊಡ್ಡ ಬಲವಾಗಿದೆ. ಒಬ್ಬ ಸಂಸದ, ಮೂವರು ಸಚಿವರು ಸೇರಿದಂತೆ 8 ಮಂದಿ ಶಾಸಕರು, ಮೂವರು ವಿಧಾನ ಪರಿಷತ್‌ ಸದಸ್ಯ, ಜಿ.ಪಂ. ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಅಧಿಪತ್ಯ ಸ್ಥಾಪಿಸಿದೆ. ಇದೆಲ್ಲಕ್ಕಿಂತ ತಂದೆ ಕುಮಾರಸ್ವಾಮಿ ನಾಮಬಲ, ಸಿಎಂ ಪುತ್ರನೆಂಬ ಹೆಗ್ಗಳಿಕೆ ವರ್ಚಸ್ಸು ಬೆನ್ನಿಗಿದೆ. ಜತೆಗೆ, ಕಾಂಗ್ರೆಸ್‌ ಜತೆಗಿನ ಮೈತ್ರಿಬಲವಿದೆ. ಹೀಗಾಗಿ ಮಂಡ್ಯ ಹೈವೋಲ್ಟೇಜ್‌ ಕಣವಾಗಿದೆ.

ವಿವೇಕ್.ಎಸ್.ಶೆಟ್ಟಿ

Leave a Reply

Your email address will not be published. Required fields are marked *

Don`t copy text!