ತಮಿಳು ವಿಜಯ್ “ಪೊಕ್ಕಿರಿ” ಹಾಡು ಇರಾನ್ ಜಿಮ್ ನಲ್ಲಿ ಹಲ್ ಚಲ್.

ಇರಾನ್‌ನ ಜಿಮ್‌ ನಲ್ಲಿ ತಮಿಳು ಹಾಡೊಂದು ಸದ್ದು ಮಾಡುತ್ತಿರುವ ವೀಡಿಯೊ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾಗಿದೆ. ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹಂಚುತಿದ್ದಾರೆ. ಈ ವೀಡಿಯೊದಲ್ಲಿ ಜಿಮ್‌ಗೆ ಬರುವಂತವರು ತಮಿಳು ಹಾಡಿಗೆ ಕೈ ಚಪ್ಪಾಳೆ ತಟ್ಟುತ್ತ ಲಯಬದ್ಧವಾಗಿ ನೃತ್ಯ ಮಾಡುತ್ತಿದ್ದಾರೆ ಈ ವಿಡಿಯೋ ಈಗ ಟ್ವಿಟರ್‌ನಲ್ಲಿ ಸಹ ಟ್ರೆಂಡಿಂಗ್ ಆಗಿದೆ. ಅವರು ನೃತ್ಯ ಮಾಡುತ್ತಿರುವ, ಅಷ್ಟೋಂದು ಫೇಮಸ್ ಆಗಿರುವ ಹಾಡು ಯಾವುದು ಎಂದರೆ, ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸಿ, ಪುರಿ ಜಗನ್ನಾಥ್ ನಿರ್ದೇಶಿಸಿದ್ದ ಬ್ಲಾಕ್ ಬ್ಲಾಸ್ಟರ್ ಚಿತ್ರ ‘ಪೋಕಿರಿ ತಮಿಳು ಭಾಷೆಯಲ್ಲಿ ರೀಮೇಕ್ ಆಗಿ ಅಲ್ಲಿ ಪ್ರಭುದೇವ ನಿರ್ದೇಶಿಸಿ ದಲಪತಿ ವಿಜಯ್ ನಟಿಸಿದ್ದ ಪೊಕ್ಕಿರಿ’ ಚಿತ್ರದ “ಮಾಂಬಲಮ್ … ಮಾಂಬಲಮ್’ ಹಾಡಿಗೆ ಜಿಮ್‌ಗೆ ಬರುವಂತವರು ನೃತ್ಯ ಮಾಡಿ ಅನಂದಿಸುತ್ತಿದ್ದರೆ. ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೇಂದ್ರ, ನೃತ್ಯ ಮಾಡಿದ ಜನರ ಎನರ್ಜಿಯನ್ನು ಶ್ಲಾಘಿಸಿರುತ್ತಾರೆ. ನಾನು ಅದನ್ನು ತುಂಬಾ ಇಷ್ಟಪಟ್ಟಿದ್ದೇನೆ .. ನಾನು ಈ ರೀತಿ ತಮಿಳು ಸಂಗೀತದೊಂದಿಗೆ ದಿನವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಕ್ಕೆ 28 ಸಾವಿರಕ್ಕೂ ಹೆಚ್ಚು ಲೈಕ್ ಮತ್ತು 53 ಲಕ್ಷ ವೀಕ್ಷಣೆಗಳು ಬಂದಿದೆಯಂತೆ.

ಸಂಗ್ರಹಣೆ:- ವಿವೇಕ್ ಎಸ್ ಶೆಟ್ಟಿ

Leave a Reply

Your email address will not be published. Required fields are marked *

Don`t copy text!